ಹುಣಸೂರು:13 ಅಕ್ಟೋಬರ್ 2021
ಹುಣಸೂರು-ಮೈಸೂರು ಹೆದ್ದಾರಿಯ ಅರಬ್ಬಿತಿಟ್ಟು ವನ್ಯಧಾಮದ ರಂಗಯ್ಯನಕೊಪ್ಪಲು ಗೇಟ್ ಬಳಿ ಲಾರಿಯೊಂದು ಜಿಂಕೆಗೆ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಬಳಿಯ ಅತಿಕಾರಿಬೆಟ್ಟು ಗ್ರಾಮದ ಲಾರಿ ಚಾಲಕ ಗಣೇಶ್ ಎಸ್.ಸುವರ್ಣ ಬಂದಿತ ಆರೋಪಿ. ಲಾರಿಯನ್ನು ವಶಪಡಿಸಿಕೊಂಡು ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬುಧವಾರ ಬೆಳಗ್ಗೆ ಅರಬ್ಬಿತಿಟ್ಟು ವನ್ಯಧಾಮದಿಂದ ಹೊರಬಂದಿದ್ದ ೩ ವರ್ಷದ ಹೆಣ್ಣು ಜಿಂಕೆಯು ರಸ್ತೆ ದಾಟುತ್ತಿದ್ದ ವೇಳೆ ಲಾರಿಯಿಂದ ಜಿಂಕೆಗೆ ಗುದ್ದಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದೆ. ಚಾಲಕ ಗಣೇಶ್ ಎಸ್ ಸುವರ್ಣ ಲಾರಿಯೊಂದಿಗೆ ಪರಾರಿಯಾಗಿದ್ದ, ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ವಿ.ಕರಿಕಾಳನ್ ಮಾರ್ಗದರ್ಶನದಲ್ಲಿ ಆರ್.ಎಫ್.ಓ.ಸುರೇಂದ್ರ ಕೆ. ಮತ್ತು ತಂಡ ಕಾರ್ಯಾಚರಣೆ ನಡೆಸಿ ಗುರುವಾರದಂದು ಬಿಳಿಕೆರೆಯಲ್ಲಿ ಲಾರಿಯನ್ನು ಆರೋಪಿ ಚಾಲಕನ ಸಹಿತ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಡಿಸಿಎಫ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿ.ಆರ್.ಎಫ್.ಓ ಗಳಾದ ಎಸ್.ಎಸ್.ರಾಘವೇಂದ್ರ, ಲಕ್ಷಿö್ಮದೇವಿ,ಅರಣ್ಯ ರಕ್ಷಕರಾದ ರೋಹಿತ್, ರಾಜೇಶ್ ನಾಯ್ಕ,ವೀರೇಶ್ ಅಂಗಡಿ ಭಾಗವಹಿಸಿದ್ದರು.