ಮೈಸೂರು:18 ಜನವರಿ 2022
ನಂದಿನಿ ಮೈಸೂರು
ಗಣರಾಜ್ಯೋತ್ಸವ ಪೆರೇಡ್ ನಲ್ಲಿ ನಾರಾಯಣಗುರು ರವರ ಸ್ತಬ್ಧಚಿತ್ರ ತಿರಸ್ಕಾರ ದೇಶದ ಜನತೆಗೆ ಮಾಡಿದ ದ್ರೋಹ – ಪ್ರಧಾನಮಂತ್ರಿಗಳು ದೇಶದ ಜನತೆಯ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಅಂಚೆ ಪತ್ರ ಚಳುವಳಿ ನಡೆಯಿತು.
ರಾಮಸ್ವಾಮಿ ವೃತ್ತದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಮ ನೇತೃತ್ವದಲ್ಲಿ ವೇದಿಕೆ ಸದಸ್ಯರು ಫೋಸ್ಟ್ ಬಾಕ್ಸ್ ಗೆ ಅಂಚೆ ಪತ್ರ ಹಾಕುವ ಮೂಲಕ ಚಳುವಳಿ ನಡೆಸಿದರು.
ಕೆ.ಎಸ್.ಶಿವರಾಮ್ ರವರು ಮಾತನಾಡಿ ಮಹಾನ್ ಸಮಾಜ ಸುಧಾರಕರ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವ ಪೆರೆಡ್‌ಗೆ ತಿರಸ್ಕಾರ ಮಾಡಿರುವುದು ಬಿಜೆಪಿ ನೇತೃತ್ವದ ಸರ್ಕಾರ.ಇದನ್ನ ತೀವ್ರವಾಗಿ ಖಂಡಿಸುತ್ತೇವೆ . ನರೇಂದ್ರ ಹಿಂದೂ ಧರ್ಮದ ಸಂರಕ್ಷಕ ಎಂದು ಕರೆಯಿಸಿಕೊಳ್ಳುವ ನಮ್ಮ ಪ್ರಧಾನಮಂತ್ರಿಗಳಾದ ಮೋದಿಜಿ ರವರು ಹಿಂದೂ ಧರ್ಮದ ಸುಧಾರಕರ ಸ್ತಬ್ಧಚಿತ್ರವನ್ನು ತಿರಸ್ಕಾರ ಮಾಡಿರುವ ಘಟನೆ ಅವರ ಘನತೆಗೆ ಚ್ಯುತಿಯನ್ನುಂಟು ಮಾಡಿದೆ .ಕೇಂದ್ರ ಸರ್ಕಾರ ಎಚ್ಚೆತ್ತು ಈ ಕೂಡಲೇ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವ ಪೇರೆಡ್‌ನಲ್ಲಿ ಪ್ರದರ್ಶಿಸಲು ಅವಕಾಶ ನೀಡುವ ಮೂಲಕ ದೇಶದ ಜನರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತೇವೆ . ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ದೇಶದಲ್ಲಿ ನಡೆಯುವ ಪಂಚರಾಜ್ಯಗಳ ಚುನಾವಣೆಯಲ್ಲಿ ಶೋಷಿತ ಸಮುದಾಯಗಳ ಬಿಜೆಪಿಗೆ , ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ವಿರುದ್ಧ ಮತಚಲಾಯಿಸಬೇಕೆಂದು ಪಂಚರಾಜ್ಯಗಳ ಮತದಾರರಲ್ಲಿ ಮನವಿ ಮಾಡುತ್ತೇವೆ ಎಂದು ಅಂಚೆ ಪತ್ರ ಚಳುವಳಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಚಳುವಳಿಯಲ್ಲಿ ಮಾದಾಪುರ , , ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಎನ್.ಆರ್.ನಾಗೇಶ್ , ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾದ, ಯೋಗೇಶ್ ಮುಖಂಡರುಗಳಾದ ಮಹೇಂದ್ರಕಾಗಿನೆಲೆ , ಬೋಗಾದಿ ಮಹದೇವಸ್ವಾಮಿ , ಸತ್ಯನಾರಾಯಣ್ , ಎ.ರವಿ ನಾಯಕ್ , ಚಂದ್ರು ವಿನೋದ್‌ರಾಜ್ , ಪ್ರಕಾಶ್‌ಗೌಡ ಮೈಸೂರು ಮುಂತಾದವರು ಭಾಗವಹಿಸಿದ್ದರು.
ಭಾರತ್ ನ್ಯೂಸ್ ಟಿವಿ ಮೈಸೂರು