ವಿಷ ಕುಡಿದ ನರಳಾಡುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಪತ್ರಕರ್ತ ರೇವಣ್ಣ

 

 

ನಂಜನಗೂಡು:22 ಸೆಪ್ಟೆಂಬರ್ 2021

*ನ@ದಿನಿ*

                       ಒಂದು ಕಡೆ ವ್ಯಕ್ತಿಯೋರ್ವ
ವಿಷ ಸೇವಿಸಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೇ ಮತ್ತೋಂದು ಕಡೆ ಗ್ರಾ.ಪಂ ಸದಸ್ಯರು ತಮ್ಮ ಜಗಳದಲ್ಲೇ ಕಾಲ ಹರಣ ಮಾಡ್ತಿದ್ರೂ.ಅಲ್ಲೇ ಇದ್ದ
ಗ್ರಾಮಸ್ಥರು ಸಹ ವಿಷ ಕುಡಿದು ವ್ಯಕ್ತಿ ನರಳಾಟ ನೋಡ್ತೀದ್ರೇ ಹೊರೆತು ಸಹಾಯಕ್ಕೆ ಬಂದಿರಲಿಲ್ಲ.
ಪತ್ರಕರ್ತನೋರ್ವ ಸುದ್ದಿಗೆಂದು ತೆರಳಿದೆ ವೇಳೆ ವಿಷ ಕುಡಿದು ರಸ್ತೆಯಲ್ಲಿ ನರಳುತ್ತಿದ್ದ ವಾಟರ್ ಮ್ಯಾನ್ ನನ್ನು ಆಸ್ಪತ್ರೆಗೆ ಕರೆದೊಯ್ದು ಮಾನವಿಯತೆ ಮೆರೆದಿದ್ದಾರೆ.

                       ಹೌದು, ನಂಜನಗೂಡು ತಾಲೂಕಿನ ನೇರಳೆ ಗ್ರಾಮ ಪಂಚಾಯಿತಿಯ ವಾಟರ್ ಮ್ಯಾನ್ ಕುಮಾರಸ್ವಾಮಿ ವಿಷ ಸೇವಿಸಿದ್ದ ವ್ಯಕ್ತಿ. ಕುಮಾರಸ್ವಾಮಿ ವಿಷ ಸೇವಿಸುವುದಕ್ಕೂ ಒಂದು ಕಾರಣ ಇದೆ.ಅದೇ ಗ್ರಾಮ ಪಂಚಾಯತಿಯಲ್ಲಿ ಹಲವಾರು ವರ್ಷಗಳಿಂದ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ.ಕೆಲಸದ ವಿಚಾರವಾಗಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕುಮಾರಸ್ವಾಮಿ ನಡುವೆ ಶೀತಲ ಸಮರವಾಗಿತ್ತು.2016 ರಲ್ಲಿ ಗ್ರಾಮ ಪಂ.ಪಿಡಿಓ ಮತ್ತು ಅಧ್ಯಕ್ಷರು ಕುಮಾರಸ್ವಾಮಿಯನ್ನು ಕೆಲಸದಿಂದ ವಜಾ ಮಾಡಿದ್ದರು.ಬಳಿಕ ಪ್ರಶ್ನಿಸಿ ಕುಮಾರಸ್ವಾಮಿ ಕೋರ್ಟ್ ಮೆಟ್ಟಿಲೇರಿದ್ದ.ಕುಮಾರಸ್ವಾಮಿ ಕೆಲಸ ಮುಂದುವರೆಸುವಂತೆ ಗ್ರೀನ್ ಸಿಗ್ನಲ್ ನೀಡಿತ್ತು.ಕೋರ್ಟ್ ಆದೇಶಕ್ಕೂ ಕ್ಯಾರೆ ಎನ್ನದೇ ಗ್ರಾಮ ಪಂಚಾಯತಿ ಸದಸ್ಯರು ಕೆಲಸ ಮಾಡಲು ಅವಕಾಶ ಕೊಟ್ಟಿರಲಿಲ್ಲ.ಮನನೊಂದ ಕುಮಾರಸ್ವಾಮಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.ಸುದ್ದಿ ಮಾಡಲು ತೆರಳಿದ್ದ ಪತ್ರಕರ್ತ ರೇವಣ್ಣ ಸಮಯ ಪ್ರಜ್ಞೆ ಮೆರೆದು ಆತನನ್ನು ಬೈಕ್ ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದುದ್ದಿದ್ದಾರೆ.ದೊಡ್ಡ ಕವಲಂದೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಂಜನಗೂಡಿನ ಆಸ್ಪತ್ರೆಗೆ ರವಾನೆ ಮಾಡಲಾಯಿತು.

ಪತ್ರಕರ್ತ ರೇವಣ್ಣನ ಮಾನವೀಯತೆ ಕಾರ್ಯಕ್ಕೆ ಕೌವಲಂದೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಸಂಪತ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅದಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಮೆಚ್ಚುಗೆಯ ಸಂದೇಶ ರವಾನೆಯಾಗುತ್ತಿದೆ.

Leave a Reply

Your email address will not be published. Required fields are marked *