ಸರ್ಕಾರಿ ಶಾಲೆಯಲ್ಲೊಂದು ಕಲಿಕಾ ತಾಣ

 

ವರಕೂಡು:22 ಸೆಪ್ಟೆಂಬರ್ 2021

ನ@ದಿನಿ

ಮೈಸೂರು ಜಿಲ್ಲೆಯ ಹಾಗೂ ತಾಲ್ಲೂಕಿನ ವರಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಪ್ರಥಮ್ ಮತ್ತು TLS ಎಜುಕೇಷನ್ ಪೌಂಡೇಷನ್ ಸಹಕಾರದೊಂದಿಗೆ ಕಲಿಕಾ ತಾಣ (LEARNING SPACE) ಉದ್ಘಾಟನೆಗೊಂಡಿತು.

ಮೈಸೂರು ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಮತಿ ಭಾರತಿ ರವರು ಟೇಪ್ ಕತ್ತರಿಸಿ ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಕೋವಿಡ್ ನಂತರ ನಮ್ಮ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಗಿದ್ದು ಅದನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗಬೇಕಾಗುವುದು ಶಿಕ್ಷಕರ ಮೇಲಿನ ಹೆಚ್ಚಿನ ಜವಾಬ್ದಾರಿಯಾಗಿದೆ. ನಾವೆಲ್ಲರೂ ಒಟ್ಟಾಗಿ ನಿರ್ಭಿತವಾಗಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸೋಣ. ಉತ್ತಮ ಸಮಾಜ ನಿರ್ಮಿಸಿ ಭವಿಷ್ಯದ ಒಳ್ಳೆಯ ಪ್ರಜೆಗಳನ್ನು ದೇಶಕ್ಕೆ ನೀಡೋಣ.
ಅಲ್ಲದೆ ಅಂಗನವಾಡಿಯೊಂದಿಗೆ ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದರೆ ತುಂಬ ಒಳ್ಳೆಯದು. ಮಕ್ಕಳಲ್ಲಿ ಚಟುವಟಿಕೆ ಆಧಾರಿತ ಕಲಿಕೆ, ಇಂಗ್ಲೀಷ್ ಸುಲಲಿತವಾಗಿ ಸರ್ಕಾರಿ ಶಾಲೆಯ ಮಕ್ಕಳು ಮಾತನಾಡಬೇಕೆಂಬುವುದು ಕಲಿಕಾ ತಾಣದ ಉದ್ದೇಶವಾಗಿದೆ. ಇದರ ಸದುಪಯೋಗವನ್ನು ಪಡೆದು ನಿಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ನರಸಿಂಹಮೂರ್ತಿಯವರು ಮೊಬೈಲ್ ಪೋನನ್ನು ನನ್ನ ಕಲಿಕಾ ಚಟುವಟಿಕೆಗೆ ಪೂರಕವಾಗಿ ಬಳಸುತ್ತೇನೆ ಅದನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಮತ್ತು ಕಾರ್ಯಕ್ರಮದ ಉದ್ಘಾಟಿಸಿದ ಅಧಿಕಾರಿಗಿಂತ ಇನ್ನೂ ಉತ್ತಮ ಸ್ಥಾನವನ್ನು ಪಡೆದುಕೊಳ್ಳಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ವಿದ್ಯಾರ್ಥಿಗಳಲ್ಲಿ ಪ್ರತಿಜ್ಞೆಯನ್ನು ಮಾಡಿಸಿದರು.

ಕಾರ್ಯಕ್ರಮದಲ್ಲಿ ಬಿಆರ್ ಸಿಗಳಾದ ಮಹದೇವ್ ,ಪ್ರಥಮ್ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಜಗದೀಶ್, ಮಹೇಶ್ ,ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶಿವಕುಮಾರ್, ಎಸ್ ಡಿ ಎಂ ಸಿ ಯ ಉಪಾಧ್ಯಕ್ಷರಾದ ಮಹೇಶ್,ಸದಸ್ಯರಾದ ಕುಮಾರ,ರವಿ,ಶಿವರಾಮು,ತಮ್ಮಡಿಗೌಡ,ಮಂಜು,ನವೀನ್ ಕುಮಾರಿ,ವಸಂತ,ವರಲಕ್ಷ್ಮಿ , ಮಹಾಲಕ್ಷ್ಮಿ, ಸದರಿ ಶಾಲೆಯ ಮುಖ್ಯಾಶಿಕ್ಷಕರಾದ ನರಸಿಂಹಮೂರ್ತಿ ಮತ್ತು ಶಿಕ್ಷಕ ವೃಂದ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷರಾದ ದುಂಡಯ್ಯ,ಸಿಆರ್ ಪಿ ದೀಪು, ರವರುಗಳು ಹಾಜರಿದ್ದರು.

 

Leave a Reply

Your email address will not be published. Required fields are marked *