ಅಧ್ಯಕ್ಷರಾದ ಕ್ಷಣದಿಂದಲೇ ಶ್ರೀ ಚಿಕ್ಕದೇವಮ್ಮನ ಬೆಟ್ಟದ ಸುತ್ತಲು ಸ್ವಚ್ಛತೆ ಕಾರ್ಯ

20 ಸೆಪ್ಟೆಂಬರ್ 2021

ಅವಿರೋಧವಾಗಿ ಜನಧ್ವನಿ ಫೌಂಡೇಶನ್ ಸಂಘಟನೆಯ ಅಧ್ಯಕ್ಷರಾಗಿ ಕೆ.ಬೆಳತೂರು ಕೆಂಪ ಹಾಗೂ ಉಪಾಧ್ಯಕ್ಷರಾಗಿ ಜಯಂತ್ ಅವರು ಆಯ್ಕೆಯಾಗಿದ್ದಾರೆ.

ಜನಧ್ವನಿ ಫೌಂಡೇಶನ್ ಸಂಘಟನೆಯ ಅಧ್ಯಕ್ಷರಾದ ನಂತರ ಇಂದು ಶ್ರಿ ಚಿಕ್ಕದೇವಮ್ಮನ ಬೆಟ್ಟದ ಸುತ್ತಲು ಬಿದ್ದಿರುವ ಪ್ಲಾಸ್ಟಿಕ್, ಕಾಗದ ಹಾಗೂ ಗಿಡಗಂಟಿಗಳನ್ನು ಸ್ವಚ್ಛತೆ ಮಾಡಿದರು.

ಶ್ರಿ ಚಿಕ್ಕದೇವಮ್ಮನ ಬೆಟ್ಟಕ್ಕೆ ಆಗಮಿಸಿದ ಭಕ್ತರು ಹಾಗೂ ವ್ಯಾಪರಿಗಳಿಗೆ ಮಾಸ್ಕ್ ನೀಡಿ ಕರೋನ ಎಂಬ ಸಾಂಕ್ರಾಮಿಕ ರೋಗ ತಡೆಗಟ್ಟುವುದರ ಬಗ್ಗೆ ಮಾಹಿತಿ ನೀಡಿದರು.

ಬಳಿಕ ಜನಧ್ವನಿ ಫೌಂಡೇಶನ್ ಸಂಘಟನೆಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಕೆ.ಬೆಳತೂರು ಕೆಂಪ ಅವರು ಮಾತನಾಡಿ ಕಳೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದು, ಗ್ರಾಮದ ಜನತೆ ಒಟ್ಟು 80% ರಷ್ಟು ನನಗೆ ಮತ ನೀಡಿದರೂ ಕೂದಲೆಳೆಯುವ ಅಂತರದಲ್ಲಿ ನಾನು ಸೋಲನ್ನು ಅನುಭವಿಸಲಾಯಿತು. ಆದ್ದರಿಂದ ನನಗೆ ಮತ ಹಾಕಿದ ಜನರ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಈ ಸಂಘಟನೆಯನ್ನು ಸ್ಥಾಪಿಸಲಾಯಿತು ಎಂದು ತಿಳಿಸಿದರು.

ಸಮಾಜದ ಒಳಿತಿಗಾಗಿ ಜನಧ್ವನಿ ಫೌಂಡೇಶನ್ ಸಂಘಟನೆಯ ಮುಖಾಂತರ ಸಮಾಜದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಂಘಟನೆಯನ್ನು ಸಂಸ್ಥಾಪಿಸಲಾಯಿತು ಎಂದರು.

ತಾಲೂಕಿನಲ್ಲಿ ನಡೆಯುವ ಹಲವಾರು ಅಕ್ರಮಗಳ ವಿರುದ್ದ ಹೋರಾಡಲು ಮುಂದಾಗಿದ್ದೇನೆ. ಬಡ ಕುಟುಂಬದಲ್ಲಿ ಬಂದಂತಹ ನನಗೆ ಬಡವರ ಕಷ್ಟಗಳು ಏನು ಎಂಬುದು ನನಗೆ ಅರಿವಿದೆ. ಆದ್ದರಿಂದ ಜನರ ಕಷ್ಟಗಳಿಗೆ ಧ್ವನಿಯಾಗಿ ನಿಲ್ಲಲು ಜನಧ್ವನಿ ಎಂಬ ಸಂಘಟನೆಯನ್ನು ಸ್ಥಾಪಿಸಲು ಮುಂದಾಗಿದ್ದೇನೆ ಎಂದರು.

ಮುಂದೆ ಅನೇಕ ಗ್ರಾಮೀಣಾಭಿವೃದ್ಧಿ ಕಾರ್ಯಗಳನ್ನು ನಡೆಸಲು ಗುರಿಯನ್ನು ಹೊಂದಿದ್ದೇನೆ, ಆದ್ದರಿಂದ ಸಾರ್ವಜನಿಕರು ಹಾಗೂ ಯುವ ಮಿತ್ರರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಳಿಕ ಜನಧ್ವನಿ ಫೌಂಡೇಶನ್ ಸಂಘಟನೆಯ ಉಪಾಧ್ಯಕ್ಷ ಜಯಂತ್ ಅವರು ಮಾತನಾಡಿ ಸಂಘಟನೆ ಇರುವುದು ಜನರ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಹಾಗೂ ಜನಧ್ವನಿ ಫೌಂಡೇಶನ್ ಸಂಘಟನೆಯ ಅಧ್ಯಕ್ಷರ ಜೊತೆ ಸದಾ ಕಾಲ ಒಳ್ಳೆಯ ಕೆಲಸಗಳಿಗೆ ಕೈ ಜೋಡಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಜನಧ್ವನಿ ಫೌಂಡೇಶನ್ ಸಂಘಟನೆಯ ಸದಸ್ಯರಾದ ನಾಗೇಶ್, ಮನು, ಶಂಕರ್, ವಿನೋದ್, ಚೆನ್ನರಾಜ್, ಉಮೇಶ್, ದರ್ಶನ್ ಇದ್ದರು.

 

Leave a Reply

Your email address will not be published. Required fields are marked *