ಮೈಸೂರು:10 ಸೆಪ್ಟೆಂಬರ್ 2021
ನ@ದಿನಿ
ಕೋವಿಡ್ 19 ಸಂಕಷ್ಟ ಒಂದು ಕಡೆ ಆದ್ರೇ ಮತ್ತೊಂದು ಕಡೆ ದುಬಾರಿ ಗಣೇಶ ಚತುರ್ಥಿ.
ಉಳ್ಳವರು ನಾಡಿನೆಲ್ಲೆಡೆ ಸಂಭ್ರಮದ ಗೌರಿ ಗಣೇಶ ಹಬ್ಬ ಆಚರಣೆಯಲ್ಲಿ ತೊಡಗಿದ್ರೇ.ಉಳ್ಳದವರು ಹಬ್ಬ ಆಚರಿಸದೇ ಮೌನವಾಗಿದ್ರೂ.
ಅಸಂಘಟಿತ ಮದ್ಯೆ ಅಲ್ಲೊಂದು ವಿನೂತನ ಕಾರ್ಯಕ್ರಮ ಆಯೋಜನೆ ಆಗಿತ್ತು.ಉಳ್ಳದವರ ಮೊಗದಲ್ಲೊಂದು ನಗು ಮೂಡಿಸುವಂತೆ ಮಾಡಿದ್ದು ಸುಜೀವ್ ಸಂಸ್ಥೆ.
ಹೌದು ,ಸುಜೀವ್ ಲ್ಯಾದರ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಇಂದು
ಗಣೇಶ ಹಬ್ಬದ ಪ್ರಯುಕ್ತ ಸುಜೀವ್ ಸಂಸ್ಥೆಯ ಅಧ್ಯಕ್ಷ, ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಜರಾಂ ಅವರ ನೇತೃತ್ವದಲ್ಲಿ ವಿಜಯನಗರದಲ್ಲಿ ಸುಯಿ ದಾಗಾ ಬೋಟಿಕ್” ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಬಟ್ಟೆ ವಿತರಿಸಲಾಯಿತು.
ಹಬ್ಬ ಅಂದರೆ ಅಲ್ಲೊಂದು ಸಂಭ್ರಮ ಇರುತ್ತದೆ ಆದರೇ ಅಸಂಘಟಿತ ಕಾರ್ಮಿಕರರೂ ಬಡವರಾಗಿರುತ್ತಾರೆ.ಅಂತವರೂ ಸಾಮಾನ್ಯ ಹಬ್ಬವನ್ನ ಆಚರಿಸುವುದಿಲ್ಲ.ಹಬ್ಬದ ಪ್ರಯುಕ್ತ 20ಜನ ಆಟೋರಿಕ್ಷಾ ಚಾಲಕರು,20ಜನ ಪೌರಕಾರ್ಮಿಕರು,20ಜನ ಕಾರು ಚಾಲಕರು,20ಜನ ದಿನಗೂಲಿ ನೌಕರರು,20ಜನ ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಬಡ ವರ್ಗದವರಿಗೆ ಸುಮಾರು ೨೦೦ ಕ್ಕೂ ಹೆಚ್ಚು ಜನರಿಗೆ ಹೆಣ್ಣು ಮಕ್ಕಳಿಗೆ ಸೀರೆ , ಗಂಡಸರಿಗೆ ಪಂಚೆ ಮತ್ತು ದೊತಿಯನ್ನು ಪ್ರಾಯೋಜಕರಾದ “ಸುಯಿ ದಾಗಾ ಬೋಟಿಕ್” ಹಾಗೂ ಸುಜೀವ್ ಸೇವಾ ಸಂಸ್ಥೆಯಿಂದ ವಿತರಣೆ ಮಾಡಲಾಗಿದೆ.ಅಸಂಘಟಿತ ಜನರ ಸಹಾಯಕ್ಕಾಗಿ ಸುಜೀವ್ ಸಂಸ್ಥೆ ಜೊತೆಗಿರಲಿದೆ.ಇನ್ನೂ ಮುಂದೆ ಪ್ರತಿ ಹಬ್ಬದಂದು ಇದೇ ರೀತಿಯ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಹಿತ್ ಮಂಜುಳ ಸೌಂಡ್ಸ್ , ಸುನೀಲ್ ನಾರಾಯಣ್ , ಮಹದೇವ್, ವಿನಾಯಕ್ , ಮಾದೇಶ್ ಶಿವಣ್ಣ, ರವಿನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಒಟ್ಟಾರೆ ಹೇಳುವುದಾದರೇ ಹಬ್ಬದ ದಿನದಂದು ಸಂಭ್ರಮಾಚರಣೆಯಿಂದ ದೂರ ಇದ್ದವರನ್ನ ಆತ್ಮೀಯವಾಗಿ ಆಹ್ವಾನಿಸಿ ಉಡುಗೊರೆಯೊಂದನ್ನ ನೀಡಿ ಮೈಸೂರಿನಲ್ಲಿ ಅರ್ಥಪೂರ್ಣವಾಗಿ ಗಣೇಶ ಚತುರ್ಥಿ ಆಚರಿಸಲಾಗಿದೆ.