ಪೌರಕಾರ್ಮಿಕರು ತಮ್ಮ ಕೆಲಸದಲ್ಲಿ ದೇವರನ್ನು ನೋಡುತ್ತಿದ್ದಾರೆ :ಮಾ ವಿ ರಾಮ್ ಪ್ರಸಾದ್

110 Views

 

ಮೈಸೂರು:9 ಸೆಪ್ಟೆಂಬರ್ 2021

ನ@ದಿನಿ

ಪೌರಕಾರ್ಮಿಕರು ತಮ್ಮ ಸ್ವಚ್ಚತೆ ಕಾರ್ಯದಲ್ಲಿ ದೇವರನ್ನು ಕಾಣುತ್ತಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ತಿಳಿಸಿದರು.

ಇಂದು ಗೌರಿ ಹಬ್ಬದ ಅಂಗವಾಗಿ 55ನೇ ವಾರ್ಡಿನಲ್ಲಿ 50 ಜನ ಪೌರಕಾರ್ಮಿಕರಿಗೆ ಬಾಗಿನ, ಸೀರೆಗಳನ್ನು ಕೊಡುವ ಮುಖಾಂತರ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ಹಬ್ಬವನ್ನು ಆಚರಿಸಿದರು

ನಂತರ ಮಾತನಾಡುತ್ತಾ ಇಂದು ಎಲ್ಲರೂ ಮನೆಯಲ್ಲಿ ಹೊಸ ಬಟ್ಟೆಯನ್ನು ತೊಟ್ಟು ಗೌರಿ ಪೂಜೆಯನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ ಆದರೆ ಪೌರಕಾರ್ಮಿಕರು ತಮ್ಮ ಸ್ವಚ್ಚತೆ ಕಾರ್ಯದಲ್ಲಿ ದೇವರನ್ನು ಕಾಣುತ್ತಿದ್ದಾರೆ.ಮೈಸೂರಿನಲ್ಲಿ ಸ್ವಚ್ಛ ಸರ್ವೇಕ್ಷಣ ಅಭಿಯಾನ ನಡೆಯುತ್ತಿದ್ದು ಮತ್ತು ದಸರಾ ಹತ್ತಿರವಿದ್ದು ಮೈಸೂರಿಗೆ ಈಗಾಗಲೇ 2ಬಾರಿ ಸ್ವಚ್ಛ ನಗರಿ ಎಂಬ ಕಿರೀಟ ಹಾಕಿಕೊಂಡಿದ್ದು ಮೂರನೇ ಬಾರಿ ಬರಬೇಕಾದರೆ ಈ ಪೌರ ಕಾರ್ಮಿಕರ ಶ್ರಮ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು

ಈ ಕಾರ್ಯಕ್ರಮದಲ್ಲಿ ಮುಖಂಡರಾದ ಸಂದೀಪ್, ಮಂಜುಳಾ, ಉಮಾಮಣಿ, ರೇಣುಕಾ, ಶ್ರೀಕಂಠ, ಮಂಜುನಾಥ್, ಲಿಲಿತಾಂಬಾ ದೇವೇಂದ್ರಸ್ವಾಮಿ ಧರ್ಮೇಂದರ್, ಶಿವು, ಅದ್ವೈತ್, ರಾಮಚಂದ್ರ, ಪುಟ್ಟಪ್ಪ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *