ನಂದಿನಿ ಮೈಸೂರು
ಮೈಸೂರಿನ ಕುವೆಂಪುನಗರದಲ್ಲಿ ಹೊಸ ಶಾಖೆ ಪ್ರಾರಂಭಿಸಿದ ನ್ಯಾಚುರಲ್ಸ್
ಮೈಸೂರು:ಮೈಸೂರಿನ ಜನತೆಗೆ ಚರ್ಮ, ಕೂದಲು , ಮೇಕ್ಅಪ್ ಮತ್ತು ಎಲ್ಲಾ ಮೇಕ್ ಓವರ್‌ಗಳ ಇತ್ತೀಚಿನ ರನ್‌ವೇ ಟ್ರೆಂಡ್‌ಗಳನ್ನು ಒಂದೇ ಸೂರಿನಡಿ ಪಡೆಯಲು ಅವಕಾಶ ನೀಡುವ ಉದ್ದೇಶದಿಂದ, ಭಾರತದ ನಂಬರ್ -೧ ಹೇರ್ ಅಂಡ್ ಬ್ಯೂಟಿ ಸಲೂನ್ ‘ನ್ಯಾಚುರಲ್ಸ್ ‘ ತನ್ನ ಹೊಸ ಶಾಖೆಯನ್ನು ಪ್ರಾರಂಭಿಸಿದೆ.
ಮೈಸೂರಿನ ಕುವೆಂಪುನಗರದಲ್ಲಿ ಆರಂಭವಾಗಿರುವ ಶಾಖೆಯನ್ನು ನಟ ಕಿಶನ್ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಕೂದಲ ರಕ್ಷಣೆ, ತ್ವಚೆ, ದೇಹದ ಆರೈಕೆ ಮತ್ತು ವಧು-ವರರ ಮೇಕಪ್ ಸೇರಿದಂತೆ ವಿವಿಧ ಸೇವೆಗಳನ್ನು ಇಲ್ಲಿ ಪಡೆಯಬಹುದಾಗಿದೆ.”ಇದೇ ಕ್ಷೇತ್ರದಲ್ಲಿ ಹೆಚ್ಚು ಪರಿಣಿತಿ ಯೊಂದಿರುವ ನಮ್ಮ ತಂಡ, ಜನತೆಯ ಯಾವುದೇ ಸೌಂದರ್ಯ ವೃದ್ಧಿಗೆ ಹೊಸ ರೂಪವನ್ನು ಕೊಡುವಲ್ಲಿ ಸಫಲರಾಗುವುದಲ್ಲದೆ, ಜನರ ಮುಖ, ತ್ವಚೆ, ಕೂದಲಿಗೆ ಹೊಸ ಕಾಂತಿಯನ್ನು ನೀಡುವರು. ಫೇಸ್ ಬ್ಲೀಚಿಂಗ್, ಫೇಸ್ ಕ್ಲೀನಪ್, ಫ್ಯಾಸಿಎಲ್, ಹೇರ್ ಸ್ಟೈಲಿಂಗ್, ಕಲರಿಂಗ್ ಮತ್ತು ಎಲ್ಲ ರೀತಿಯ ಬಾಡಿ ಕೇರ್ ಮತ್ತೂರ್ ಬ್ರೈಡಲ್ ಮೇಕ್ ಓವರ್ ಸೇವೆಗಳನ್ನು ನೀಡುತ್ತೀವಿ, ಎಂದು ನ್ಯಾಚುರಲ್ಸ್‌ನ ಹೊಸ ಶಾಖೆಯ ಮಾಲೀಕರಾದ ಸೋನಿಯಾ ಮತ್ತು ಗುರು ಹೇಳಿದರು.