ಎಚ್.ಡಿ.ಕೋಟೆ:2 ಸೆಪ್ಟೆಂಬರ್ 2021
ನ@ದಿನಿ
ಎಚ್ ಡಿ ಕೋಟೆ ಪಟ್ಟಣದ ಕನಕ ಭವನದಲ್ಲಿ ಇಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಆಶ್ರಯದಲ್ಲಿ ಜಿಲ್ಲಾ ಸಂಘ, ಯುವ ಘಟಕ, ಮಹಿಳಾ ಘಟಕ, ಕಾನೂನು ಘಟಕ ರಚನೆ ಸಂಬಂಧ ತಾಲೂಕಿನಲ್ಲಿ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿ ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ಈ ಸಭೆಯಲ್ಲಿ ಮಾತನಾಡಿದ ಸುಬ್ರಹ್ಮಣ್ಯ ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು ಅದರಂತೆ ಹಿಂದುಳಿದ ತಾಲ್ಲೂಕು ಎಚ್ಡಿಕೋಟೆ ಗೂ ಕೂಡ ಇಂದು ಭೇಟಿ ನೀಡಿದ್ದೇನೆ, ನಮ್ಮ ಸಮಾಜದ ಪ್ರತಿಯೊಬ್ಬರನ್ನು ಕೂಡ ಒಗ್ಗೂಡಿಸುವುದೇ ನನ್ನ ಗುರಿ ಹಾಗೂ ಉದ್ಘಾಟನೆಗೊಂಡು ಸಾರ್ವಜನಿಕರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕನಕ ಭವನವನ್ನು ಶೀಘ್ರದಲ್ಲೇ ಲೋಕಾರ್ಪಣೆ ಮಾಡುತ್ತೇವೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸಹಕಾರದಿಂದ ಅತ್ಯದ್ಭುತವಾಗಿ ಕನಕ ಭವನ ನಿರ್ಮಾಣವಾಗಿದೆ , ಪ್ರತಿಯೊಬ್ಬರಿಗೂ ಕೂಡ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ರೀತಿ ಘಟಕಗಳನ್ನು ಪ್ರಾರಂಭ ಮಾಡುತ್ತಿದ್ದು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮನವಿ ಮಾಡಿದ್ರು.
ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಶಿವಪ್ಪಕೋಟೆ ಮಾತನಾಡಿ ಹಲವು ಘಟಕಗಳನ್ನು ತೆರೆಯಲು ಸಂಘ ತೀರ್ಮಾನ ಮಾಡಿದ್ದು ಅದರಂತೆ ಪ್ರತಿಯೊಬ್ಬರು ಕೂಡ ತಮ್ಮ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಹಾಗೂ ಪ್ರತಿಯೊಬ್ಬರು ಕೂಡ ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ರು .
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಜೆ ಗೋಪಿ ಮಾದೇಗೌಡ, ನಾಗರಾಜ್, ಅಭಿಲಾಶ್, ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಶಿವಪ್ಪ ಕೋಟೆ, ಮುಖಂಡರುಗಳಾದ ಜಯರಾಮೇಗೌಡ, ವೀರೇಗೌಡ, ರಾಜೇಗೌಡ,, ಚಂದ್ರಗೌಡ, ಬೈರೇಗೌಡ, ಮಲ್ಲೇಶ್, ಸಿದ್ದರಾಮೇಗೌಡ, ಕಾಳಪ್ಪ , ಬೈಪಾಸ್ ಮಂಜು , ತಾಲ್ಲೂಕು ಕಾರ್ಮಿಕ ಸಂಘದ ಅಧ್ಯಕ್ಷ ಮಂಜುನಾಥ್ , ತಾಲ್ಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷ ರಾದ ಬೈರೇಗೌಡ ಉಮೇಶ್ ಕೋಟೆ, ಮುದ್ದೇಗೌಡ ಹಾಗೂ ಸಮಾಜದ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.