ಶೋಕಿ, ಐಶಾರಾಮಿ ಜೀವನಕ್ಕಾಗಿ ಸರಗಳ್ಳತನ ಐನಾತಿ ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾದ ಎನ್.ಆರ್ ಪೋಲೀಸರು

 

ಮೈಸೂರು:3 ಸೆಪ್ಟೆಂಬರ್ 2021

ನ@ದಿನಿ

ಕೈ ಕಾಲು ಎಲ್ಲಾ ಚನ್ನಾಗಿದೆ ಆದ್ರೇ ಮೈ ಬಗ್ಗಿಸಿ ದುಡಿಯುತ್ತಿರಲಿಲ್ಲ.ಕೈಯಲ್ಲಿ ಕಾಸಿಲ್ಲ ಅಂದ್ರೂ
ಶೋಕಿಗೇನೂ ಕಡಿಮೆ ಇರಲಿಲ್ಲ, ಐಶಾರಾಮಿ ಜೀವನ ನಡೆಸುವ ಸಲುವಾಗಿ ಸರಗಳ್ಳತನ ಮತ್ತು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಐನಾತಿ ಕಳ್ಳರನ್ನ ಮೈಸೂರಿನ ನರಸಿಂಹರಾಜ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು
ಮೈಸೂರಿನ ಕೆ ಆರ್ ಮೊಹಲ್ಲಾ ನಿವಾಸಿ ಸಲ್ಮಾನ್ ಖಾನ್ ಅಲಿಯಾಸ್ ಸಲ್ಲು (28), ಶಾಂತಿನಗರ ನಿವಾಸಿ ತಾಜುದ್ದೀನ್ ಅಲಿಯಾಸ್ ಕಾಲು (21) ಬಂಧಿತ ಆರೋಪಿಗಳು.ಕಳವು ಮಾಲುಗಳನ್ನು ಖರೀದಿಸುತ್ತಿದ್ದ ಅಶೋಕರಸ್ತೆಯ ಮರಿಯಂ ಜ್ಯೂಯಲರ್ಸ್ ಮಾಲೀಕ ಮಹಮದ್ ಫರ್ವೇಜ್ (41) ಕೂಡ ಬಂಧಿಸಿದ್ದಾರೆ.

ಮೈಸೂರಿನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳಿಂದ
19 ಲಕ್ಷದ 40 ಸಾವಿರ ಮೌಲ್ಯದ ಒಟ್ಟು 388 ಗ್ರಾಂ ತೂಕದ 13 ಚಿನ್ನದ ಸರಗಳು ಮತ್ತು ಒಂದು ತಾಳಿ ಹಾಗು ಗುಂಡುಗಳು, ಒಂದೂವರೆ ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಎರಡು ದ್ವಿಚಕ್ರ ವಾಹನಗಳು ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಪತ್ತೆ ಕಾರ್ಯದಲ್ಲಿ ಡಿಸಿಪಿ ಪ್ರದೀಪ್ ಗುಂಟಿ,ಗೀತಾ ಪ್ರಸನ್ನ,ಎಸಿಪಿ ಶಿವಶಂಕರ್ ರವರ ಮಾರ್ಗದರ್ಶನದಲ್ಲಿ ಎನ್‌ಆರ್.ಇನ್ಸ್ಪೆಕ್ಟರ್ ಅಜರುದ್ದೀನ್ ,ಜೈ ಕೀರ್ತಿ,ಪಾಪಣ್ಣ,ಮಂಜುನಾಥ ಆರ್.ಆರ್,ಮಹೇಶ್ ವೈ.ಟಿ,ದೊಡ್ಡೇಗೌಡ,ರಮೇಶ್ ಎಸ್,ಸುನೀಲ್ ಕುಮಾರ್ ಸಿ,ಈರೇಶ್.ಕೆ, ಪಾಲ್ಗೊಂಡಿದ್ದರು.ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದವರಿಗೆ ಆಯುಕ್ತ ಡಾ.ಚಂದ್ರಗುಪ್ತ ಪ್ರಶಂಸಿದ್ದಾರೆ.

Leave a Reply

Your email address will not be published. Required fields are marked *