ನಂದಿನಿ ಮೈಸೂರು
ಜೆಜೆ ಆನಂದರವರ ಮಾಲಿಕತ್ವದ
200 ಹಾಸಿಗೆಯುಳ್ಳ ಸುಸಜ್ಜಿತ ಮೌರ್ಯ ಮಲ್ಟಿಸ್ಪೇಷಲಿಟಿ ಆಸ್ಪತ್ರೆ ಉದ್ಘಾಟನೆಗೊಂಡಿತು.
ಮೈಸೂರಿನ ಜನತಾನಗರದಲ್ಲಿರುವ 5 ಅಂತಸ್ಸ್ತಿನ ಆಸ್ಪತ್ರೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.ನಂತರ ಜೆಜೆ ಆನಂದರವರ ಮೌರ್ಯ ಆಸ್ಪತ್ರೆಯನ್ನು ವೀಕ್ಷೀಸಿದ ಸಿದ್ದರಾಮಯ್ಯ ಶುಭ ಹಾರೈಸಿದರು.
ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದರಾಮಯ್ಯರವರಿಗೆ ಬೃಹತ್ ಹಾರ ಹಾಕಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆ ಛೇರ್ಮೆನ್ ಜೆಜೆ ಆನಂದ್ ಮಾತನಾಡಿ ಮಾಜಿ ಸಿಎಂ ಸಿದ್ದರಾಮಯ್ಯರವರು ಈ ಹಿಂದೆ ಇದ್ದ ಆಸ್ಪತ್ರೆಯನ್ನು ಅವರೇ ಉದ್ಘಾಟಿಸಿದ್ರೂ ಈಗ ಬೃಹತ್ ಆಗಿ ನವೀಕೃತಗೊಂಡ ಮೌರ್ಯ ಆಸ್ಪತ್ರೆಯನ್ನು ಉದ್ಘಾಟಿಸಿದ್ದು ನನಗೆ ಬಹಳ ಸಂತೋಷ ತಂದಿದೆ.ನಾನು ಒಬ್ಬ ಸಿದ್ದರಾಮಯ್ಯ ಅವರ ಅಭಿಮಾನಿ ಎಂದರು.
ವೇದಿಕೆ ಕಾರ್ಯಕ್ರಮದಲ್ಲಿ
ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ,
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಸಿ.ವಸಂತ ಕುಮಾರಿ,ನಿರ್ದೇಶಕ ಪವನ್ ರಾಜ್,ಡಾ.ಎವಿ.ರಾಹುಲ್,ರೋಹನ್,ಎಂ.ಕೆ.ಸೋಮಶೇಖರ್,ಪಾಲಿಕೆ ಸದಸ್ಯ ಗೋಪಿ, ಕೆ.ಮರಿಗೌಡ,ಮಾಜಿ ಮೇಯರ್ ಪುಷ್ಪಲತಾ,ಚಿಕ್ಕಣ್ಣ,ಡಾ.ಬಿಜೆ ವಿಜಯಕುಮಾರ್,ನಜರಬಾದ್ ನಟರಾಜ್,ಬೋರೇಗೌಡ, ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.