ನಂದಿನಿ ಮೈಸೂರು
ಕಂದಮ್ಮನ ಚಿಕಿತ್ಸೆಗೆ ಸ್ಪಂದಿಸಿ ನೆರವಿನ ಹಸ್ತ ಚಾಚಿದ: ಸಿ.ಚಂದನ್ಗೌಡ
ಮೈಸೂರು: ಅನಾರೋಗ್ಯದಿಂದ ಬಳಲುತ್ತಿರುವ 5 ವರ್ಷದ ಪುಟ್ಟ ಕಂದ ಗಗನ್ಗೌಡನ ನಿವಾಸಕ್ಕೆ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ಗೌಡ ಅವರು ತೆರಳಿ ಕುಟುಂಬ ವರ್ಗಕ್ಕೆ ಧೈರ್ಯ ತುಂಬಿದರಲ್ಲದೇ, ವೈಯಕ್ತಿಕ ನೆರವು ನೀಡಿ, ಮಗುವಿನ ಮುಂದಿನ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಹೆಚ್.ಡಿ.ಕೋಟೆ ತಾಲೂಕಿನ ಹಿರೇಹಳ್ಳಿ ಕಾಲೋನಿ ಗ್ರಾಮದ ನಿವಾಸಿ ಚೆಲುವಪ್ಪ ಮತ್ತು ಸುಜಾತ ದಂಪತಿಯ 5 ವರ್ಷದ ಪುತ್ರ ಗಗನ್ಗೌಡ ರಕ್ತಹೀನತೆ ಖಾಯಿಲೆಗೆ ತುತ್ತಾಗಿದ್ದು, ಈತನ ಚಿಕಿತ್ಸೆಗೆ ಸುಮಾರು 34 ಲಕ್ಷ.ರೂ ವೆಚ್ಚವಾಗಲಿದೆ ಎನ್ನಲಾಗಿದೆ. ಸಹಾಯ ಕೋರಿ ದಂಪತಿಗಳು ದಾನಿಗಳ ಮೊರೆ ಹೋಗಿದ್ದು, ವಿಷಯ ತಿಳಿದ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ಗೌಡ ಗ್ರಾಮಕ್ಕೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದರಲ್ಲದೇ,ಮಗುವಿನ ಚಿಕಿತ್ಸೆಗಾಗಿ ವೈಯಕ್ತಿಕ ನೆರವು ನೀಡಿದರು.ಅಲ್ಲದೇ ಮುಂದಿನ ಚಿಕಿತ್ಸೆಗೂ ಅಗತ್ಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಸಂಘದ ಪದಾಧಿಕಾರಿಗಳಾದ ಹೇಮಂತ್ಗೌಡ, ಸ್ವಾಮಿ ಗೌಡ, ಮೂರ್ತಿ ಕೋಟೆ, ಹರೀಶ್.ಪಿ.ಗೌಡ, ಉಮೇಶ್, ದಾಸೇಗೌಡ, ರವಿಕುಮಾರ್, ಶಶಿಕುಮಾರ್, ನಾಗೇಂದ್ರ, ಮಹೇಶ್,ಬಸವರಾಜ್,ಶಿವಣ್ಣೇಗೌಡ, ಶಂಕರ್, ಸತೀಶ್, ಸದಾನಂದೇಗೌಡ ಮಹಿಳಾ ಅಧ್ಯಕ್ಷೆ ಗಾಯತ್ರಿ, ರತ್ನಮ್ಮ ಇದ್ದರು.