ಡಾ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಗೆ ಸಜ್ಜು

ನಂದಿನಿ ಮೈಸೂರು

*ಡಾ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಗೆ ಸಜ್ಜು*

ಡಾ||ವಿಷ್ಣುವರ್ಧನ ಪ್ರತಿಷ್ಠಾನ(ರಿ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಡಾ|| ವಿಷ್ಣುವರ್ಧನ್ ಸ್ಮಾರಕ ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟನೆಯಾಗುತ್ತಿರುವ ಹಿನ್ನ ಲ್ಲೆಯಲ್ಲಿ ಅಗತ್ಯ ವ್ಯವಸ್ಧೆ ಮಾಡಿಕೊಳ್ಳಲಾಗಿದೆ.

70ರ ದಶಕದಲ್ಲಿ ನಾಗರಹಾವು ಚಿತ್ರದ ಅದ್ಭುತ ಯಶಸ್ಸಿನ ಮೂಲಕ ರಾಷ್ಟ್ರಮಟ್ಟದಲ್ಲಿ ಬಹು ದೊಡ್ಡ ಕ್ರಾಂತಿ ಹಾಗೂ ಸಂಚಲನವನ್ನು ಸೃಷ್ಟಿ ಮಾಡಿದಂತಹ ಹೆಗ್ಗಳಿಕೆಗೆ ಪಾತ್ರವಾದವರು ಡಾ||ವಿಷ್ಣುವರ್ಧನ್,

ಸುಮಾರು ನಾಲ್ಕು ದಶಕಗಳ ಕಾಲ, ನಿರಂತರವಾಗಿ 200ಕ್ಕೂ ಹೆಚ್ಚು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸುವ ಮೂಲಕ, ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಪ್ರಸಿದ್ದಿಯನ್ನು ಪಡೆದುಕೊಂಡಿದ್ದಾರೆ.

ಸರ್ಕಾರವು ಸ್ಮಾರಕ ನಿರ್ಮಾಣಕ್ಕಾಗಿ ಹೆಚ್,ಡಿ.ಕೋಟೆ ರಸ್ತೆ, ಉದ್ದೂರು ಕ್ರಾಸ್, ಹಾಲಾಳು ಗ್ರಾಮ, ಮೈಸೂರು ತಾಲ್ಲೂಕು, ಮೈಸೂರು ಜಿಲ್ಲೆಯಲ್ಲಿ 5 ಎಕರೆ ಜಾಗವನ್ನು ನಿಗದಿಪಡಿಸಿ ರೂ. 11.00 ಕೋಟಿಗಳ ವೆಚ್ಚದಲ್ಲಿ ಸ್ಮಾರಕ ನಿರ್ಮಾಣವನ್ನು ಮಾಡಲಾಗಿರುತ್ತದೆ.

ಕರ್ನಾಟಕ ರಾಜ್ಯ ಡಾ||ವಿಷ್ಣುವರ್ಧನ್ ಪ್ರತಿಷ್ಠಾನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರವರು ಪೋಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದವರ ಮೂಲಕ ಸ್ಮಾರಕ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸಿರುತ್ತಾರೆ.

ಕಾಡಾ ಡಾ||ವಿಷ್ಣುವರ್ಧನ್ ಸ್ಮಾರಕ ಭವನವು ಅವರು ನಟಿಸಿರುವ ಚಲನಚಿತ್ರ ಹಾಗೂ ಅವರ ಜೀವನ ಚರಿತ್ರೆಯ ಸುಮರು 676 ಛಾಯಾಚಿತ್ರಗಳನ್ನು ಒಳಗೊಂಡ ಒಂದು ಬೃಹತ್ ಮೋಟೋ ಗ್ಯಾಲರಿ, ಸೆಲ್ಲಿ ಸ್ವಾಚೂ ಮ್ಯೂರಲ್, ವಾಟರ್ ಬಾಡಿ, ಡಾ||ವಿಷ್ಣುವರ್ಧನ್ ರವರ ಪ್ರತಿಮೆ, 250 ಆಸನಗಳುಳ್ಳ ಥಿಯೇಟರ್‌, ನಾಟಕಗಳನ್ನು ಮೇಕಪ್ ವೇದಿಕೆ, ಕಚೇರಿ, ಮಾಡಬಹುದಾದಂತಹ ಕ್ಯಾಂಟೀನ್, ಶೌಚಾಲಯಗಳನ್ನೊಳಗೊಂಡ ಹೊರಾಂಗಣ ಉದ್ಯಾನವನ ಗಳನ್ನು ಒಳಗೊಂಡಿರುತ್ತದೆ.

ನಾಳೆ ಡಾ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಗೆ ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.

Leave a Reply

Your email address will not be published. Required fields are marked *