ನಂದಿನಿ ಮೈಸೂರು
ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಎಲ್ಲಾ ಜಾತಿ ಧರ್ಮದವರು ಒಂದೇ ವೇದಿಕೆಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಗಮನ ಸೆಳೆದರು.
2000 ದಿಂದ 2022 ವರಗೆ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಸಮಿತಿಯಿಂದ ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಿಕೊಂಡು ಬರುತ್ತಿದ್ದು ಈಗಾಗಲೇ 2962 ಜೋಡಿಗಳು ವಿವಾಹವಾಗಿದ್ದಾರೆ.2009 ರಿಂದ ಪ್ರತಿ ತಿಂಗಳು ಶ್ರೀ ಸುತ್ತೂರು ಕ್ಷೇತ್ರದಲ್ಲಿ ಜರುಗಿರುವ ಮಾಸಿಕ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇದುವರೆಗೆ 444 ಜೋಡಿಗಳು ವಿವಾಹವಾಗಿದ್ದಾರೆ.ಇದುವರೆಗೂ ಒಟ್ಟು 3406 ಜೋಡಿಗಳು ವಿವಾಹವಾಗಿರುವ ದಾಖಲೆಗಳಿವೆ. ಇಂದು 2023 ರಂದು ಶುಭ ಲಗ್ನದಂದು ಸುತ್ತೂರು ಶ್ರೀಗಳ ಆಶಿರ್ವಾದಿಂದ 115 ಜನರಲ್ಲಿ114 ಜನ ಸಪ್ತಪದಿ ತುಳಿದಿದ್ದಾರೆ.
ಸುತ್ತೂರು ಜಾತ್ರಾ ಮಹೋತ್ಸವ ಎರಡನೇ ದಿನದಂದು 115 ಜೋಡಿಗಳು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಶ್ರೀಗಳು ಸೇರಿದಂತೆ ವೇದಿಕೆಯ ಗಣ್ಯರು ನೂತನ ವಧು ವರರಿಗೆ ಶುಭ ಹಾರೈಸಿದರು.
ಅಂತರಧರ್ಮ ಪರಿಶಿಷ್ಟ ಜಾತಿ
ವಿನೋದ ಕ್ರಿಶ್ಚಿಯನ್ ಧರ್ಮದ ಡಾನ್, ಚೆನ್ನಾಜಮ್ಮ ರಮೇಶ,ಲೀಲಾವತಿ ಶಂಕರ್,ನಾಗಮಲ್ಲಮ್ಮ ಬೋರಪ್ಪ,
ವಿಧುರ ವಿಧುವೆ 3 ಜೋಡಿ, ತಮಿಳುನಾಡಿನ ಪಲ್ಲವಿ ಸಿದ್ದರಾಜು 1 ಜೋಡಿ ,ಪರಿಶಿಷ್ಟ ಜಾತಿ 85 ಜೋಡಿ,ಪರಿಶಿಷ್ಟ ಪಂಗಡ 6 ಜೋಡಿ,ಹಿಂದುಳಿದ 6 ಜೋಡಿ,ವೀರಶೈವ ಲಿಂಗಾಯಿತ 5 ಜೋಡಿ ,ಉಪ್ಪಾರ 3 ಜೋಡಿ ,ಅಂತರ ಜಾತಿ 9 ಜೋಡಿಗಳು ನೂತನ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಣ್ಣಿಲ್ಲದ ವಿಶೇಷ ಚೇತನರು ಬೇಬಿ ಮಹದೇವಸ್ವಾಮಿ, ಗೀತಾ ಬಸವರಾಜು, ಪ್ರೇಮ ನಾಗೇಶ್ ರಂಜನ್ 3 ಜೋಡಿ,
ಕೂಡ ಸಾಮೂಹಿಕ ವಿವಾಹವಾಗಿ ಗಮನ ಸೆಳೆದಿದ್ದಾರೆ.