ನಂದಿನಿ ಮೈಸೂರು
ರಾಮನಗರ : ಸಾಮಾನ್ಯವಾಗಿ ಹೆಲಿಕಾಪ್ಟರ್ ಬಂದಿಳಿಯಲು ಅದರದ್ದೇ ಆದ ಸ್ಥಳ,ಹವಾಮಾನ ವೈಪರೀತ್ಯ ,ಬಿಗಿ ಭದ್ರತೆ ಇರುತ್ತದೆ.ಯಾವುದಾದರೂ ತುರ್ತು ಸಂದರ್ಭದಲ್ಲಿ ಹೆಲಿಕಾಪ್ಟರ್ ಕೆಳಗಿಳಿಯುವುದುಂಟು.ಇಂದು ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಹೆಲಿಕಾಪ್ಟರ್ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದಿಳಿದಿದ್ದಾರೆ.
ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪರಿಶೀಲನೆಗೆಂದು ರಾಮನಗರಕ್ಕೆ ಆಗಮಿಸಿದ್ದ ನಿತೀನ್ ಗಡ್ಡರಿಯವರಿಗೆ 150 ಮೀಟರ್ ರಸ್ತೆಯಲ್ಲಿ ಕಾಂಕ್ರೀಟ್ ಬಳಸಿ ತಾತ್ಕಾಲಿಕ ಹೆಲಿಕಾಪ್ಟರ್ ಸ್ಥಳ ನಿರ್ಮಿಸಲಾಗಿತ್ತು.
ರಾಮನಗರ ಜಿಲ್ಲೆಯ ಜಿಗೇನಹಳ್ಳಿಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ
ರಸ್ತೆ ವಿಭಜಕ ತೆಗೆದು ಅಲ್ಲಿ ಕಾಂಕ್ರೀಟ್ ಹಾಕಿ ಹೆಲಿಕಾಪ್ಟರ್ ಇಳಿಯಲು ಸಿದ್ಧಪಡಿಸಲಾಗಿತ್ತು.
ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟೀಯ ಹೆದ್ದಾರಿಯ ಮೇಲೆ ಹೆಲಿಕಾಪ್ಟರ್ ಇಳಿಸಲಾಯಿತು.
ಸಬ್ಸ್ರೈಬ್ ಮಾಡಿ
https://youtube.com/@BharathNewstvin
ಕೇಂದ್ರ ಸಚಿವ ನಿತಿನ್ ಗಡ್ಕರಿ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರಿದ್ದ ಹೆಲಿಕಾಪ್ಟರ್ ಬಂದಿಳಿದ ನಂತರ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಇದ್ದು ಹೆಲಿಕಾಪ್ಟರ್ ಬಂದಿಳಿಯಿತು.
ಪತ್ರಿಕಾ ಹಾಗೂ ಮಾಧ್ಯಮ ವರದಿಗಾರರು ಇದ್ದ ಬಸ್ ಏರಿದ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿರವರು ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸಿದರು.
ಮೈಸೂರು ಬೆಂಗಳೂರು
117 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ಹಾಗೂ 52 ಕಿಲೋ ಮೀಟರ್ ಬೈಪಾಸ್ ನಿರ್ಮಿಸಲಾಗಿದೆ.ಫೆಬ್ರವರಿ ಅಂತ್ಯದಲ್ಲಿ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೊಳ್ಳಲಿದೆ.