ನಂದಿನಿ ಮೈಸೂರು
ಮೈಸೂರು:ನಾಯಕ ಜಾತಿಯ ಪರ್ಯಾಯ ಪದವಾದ ಪರಿವಾರ ಪ್ರಕರಣಗಳನ್ನು ಕೈಬಿಡುವಂತೆ ಹಾಗೂ ಸಿಂಧುತ್ವ ಪ್ರಮಾಣ ಪತ್ರವನ್ನು ನೀಡುವಂತೆ ಮಹಾಪೌರರಾದ ಶಿವಕುಮಾರ್ ಅವರ ನೇತೃತ್ವದಲ್ಲಿ ಮೈಸೂರು ನಾಯಕ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಮತ್ತು ನಾಯಕರ ಯುವ ಪಡೆ ಪದಾಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ನೀಡಿದರು.
ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ* ಆಗಮಿಸಿದ ವೇಳೆ ಅವರನ್ನು *ಮೇಯರ್ ಶಿವಕುಮಾರ್ ನೇತೃತ್ವದಲ್ಲಿ ಸಂಸದ ಪ್ರತಾಪ್ ಸಿಂಹ* ಅವರ ಸಮ್ಮುಖದಲ್ಲಿ ಭೇಟಿ ಮಾಡಿ ನಾಯಕರ ಮುಖಂಡರು ಮನವಿ ನೀಡಿದರು.
ಹಳೇ ಮೈಸೂರು ಪ್ರಾಂತ್ಯದಲ್ಲಿ ಪರಿವಾರ ಎಂಬುದು ನಾಯಕ ಸಮಾಜದ ಪರ್ಯಾಯ ಪದವಾಗಿರುತ್ತದೆ. ಕೆಲವು ಕುಟುಂಬಗಳಲ್ಲಿ ಕೆಲವರದು ನಾಯಕ ಎಂತಲೂ ಮತ್ತೆ ಕೆಲವರದು ಪರಿವಾರ ಎಂತಲೂ ಸಹ ಕರೆಯುವುದು ಮೈಸೂರು ಮಹಾರಾಜರ ಕಾಲದಿಂದಲೂ ವಾಡಿಕೆ ಆಗಿರುತ್ತದೆ. ಪರಿವಾರ ಪದವು ನಾಯಕ ಸಮಾಜದ ಪರ್ಯಾಯ ಪದವೆಂದು ಈಗಾಗಲೇ ಸಂವಿಧಾನಕ್ಕೆ ತಿದ್ದುಪಡಿಯು ಸಹ ಆಗಿರುತ್ತದೆ.
ಆದರೂ ಸಹ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಲ್ಲಿ ಈ ಬಗ್ಗೆ ವಿಚಾರಣೆ ಹಂತದಲ್ಲಿದ್ದು ಕೆಲವರ ದಾಖಲೆಯಲ್ಲಿ ಕೆಲವು ಕಡೆ ನಾಯಕ ಎಂತಲೂ ಮತ್ತೆ ಕೆಲವು ಕಡೆ ಪರಿವಾರ ಎಂತಲೂ ಇರುವುದು ಸಾಮಾನ್ಯವಾಗಿರುತ್ತದೆ. ಈ ರೀತಿ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಿಂದ ಸಲ್ಲಿಸಲಾದ ವರದಿಗಳ ಅನ್ವಯ ತಮ್ಮ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಿಂದ ವಿಚಾರಣೆಗೆ ಬಾಕಿ ಇರುತ್ತವೆ.
*ಪರಿವಾರ ಹಾಗೂ ನಾಯಕ ಎಂಬುದು ಸಮಾನಾರ್ಥಕ ಪದಗಳೆಂದು ಈಗಾಗಲೇ ಸಂವಿಧಾನಕ್ಕೆ ತಿದ್ದುಪಡಿ ಆಗಿರುವುದರಿಂದ ಅಭ್ಯರ್ಥಿಗಳ ದಾಖಲೆಗಳಲ್ಲಿ ನಾಯಕ ಅಥವಾ ಪರಿವಾರ ಎಂದು ಎರಡು ಪದಗಳು ಕಂಡು ಬಂದಿದ್ದಲ್ಲಿ ಇವೆರಡು ನಾಯಕ ಪದಗಳ ಪರ್ಯಾಯ ಪದಗಳೆಂದು ಪರಿಗಣಿಸಿ ಪ್ರಕರಣಗಳನ್ನು ಕೈಬಿಡಬೇಕೆಂದು ಹಾಗೂ ಈ ರೀತಿಯ ಪ್ರಕರಣಗಳಲ್ಲಿ ಸಿಂಧುತ್ವಕ್ಕೆ ಬಾಕಿ ಇರುವ ಪ್ರಕರಣಗಳಲ್ಲಿ ಸಿಂಧುತ್ವ ನೀಡಬೇಕೆಂದು ಮನವಿ ನೀಡಿದರು..*
ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಇದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ನಾಯಕರ ಮುಖಂಡರಾದ ಪಡುವಾರಹಳ್ಳಿ ಎಂ.ರಾಮಕೃಷ್ಣ, ದೇವರಾಜ ಟಿ.ಕಾಟೂರು,ನೌಕರರ ಸಂಘದ ಅಧ್ಯಕ್ಷರಾದ ಜಗದೀಶ್,ಶ್ರೀಧರನಾಯಕರು,ಕೆ.ಆರ್ ಪೇಟೆ ನರಸನಾಯಕರು ,ರಾಮನಾಯಕರು,ಚಂದ್ರನಾಯಕರು,ಕರಿನಾಯಕರು*, ಮತ್ತಿತರರು ಉಪಸ್ಥಿತರಿದ್ದರು.