*ನಂದಿನಿ ಮೈಸೂರು*
ಒಂದು ಹೆಣ್ಣಿನ ಜೀವನ ಪರಿಪೂರ್ಣ ಆಗೋದು ಅವಳು ಮದುವೆಯಾಗಿ ತಾಯಿಯಾದಾಗ.ಆ ತಾಯಿತನದ ಸಂತೋಷ ಬರೀ ಮಾತಿನಲ್ಲಿ ವರ್ಣಿಸೋಕೆ ಆಗುವುದಿಲ್ಲ.ಹೆರಿಗೆ ಸಮಯ ತಮ್ಮ ಮಗು ಬರುವಿಕೆಗಾಗಿ ದಂಪತಿಗಳು ಕಾಯುತ್ತಿದ್ದರು.ಮಗು ಜನನವಾಗಿ ಅಮ್ಮ ಎಂದು ಕರೆಯುತ್ತಿದ್ದರೂ ತಾಯಿ ಮಾತ್ರ ಮೌನ ಮುರಿದಿದ್ದಳು.
ಹಾಸಿಗೆಯಲ್ಲಿ ಮಲಗಿದ್ದ ಜಾಗದಲ್ಲೇ ಮಲಗಿರುವ ಈಕೆಯ ಹೆಸರು ಪವಿತ್ರ.
ಯಳಂದೂರು ಗ್ರಾಮದಲ್ಲಿ ಪವಿತ್ರ ವಾಸವಾಗಿದ್ದಳು.ತಾಯಿಯನ್ನ ಕಳೆದುಕೊಂಡಿದ್ದ ಪವಿತ್ರ ಕಳೆದ ವರ್ಷ ಎಚ್.ಡಿ ಕೋಟೆ
ತಾಲ್ಲೂಕಿನ ನೂರಲಕುಪ್ಪೆ.ಬಿ. ಗ್ರಾಮದ ಸಿದ್ಧರಾಜು ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು.ಅಂತರ್ಜಾತಿಯಾದ್ದರಿಂದ ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದರು.ಸಿದ್ದರಾಜು ಪವಿತ್ರ ಇಬ್ಬರು ಸಂಸಾರ ನಡೆಸುತ್ತಿದ್ದರು.ಪವಿತ್ರ ತಾಯಿಯಾಗುವ ವಿಷಯ ಕೇಳಿ ಸಿದ್ದರಾಜು ಖುಷಿಪಟ್ಟಿದ್ದ.ಒಂದು ದಿನ ಹೆರಿಗೆ ಸಮಯ ಬಂದೇ ಬಿಟ್ಟಿತ್ತು.ಪವಿತ್ರಳಿಗೆ
ಹೆರಿಗೆ ಸಂದರ್ಭದಲ್ಲಿ ಮೆದುಳಿಗೆ ಸ್ಟ್ರೋಕ್ ಆದ ಪರಿಣಾಮ ತನ್ನ ಕೈ ಕಾಲು ಸ್ವಾಧೀನ ಜೊತೆಗೆ ಮಾನಸಿಕ ಬುದ್ಧಿಭ್ರಮಣೆಯಾಗಿ ಸ್ವತಃ ತನ್ನ ಮಗುವನ್ನೆ ಗುರುತು ಹಿಡಲಾರದಷ್ಟು ಪರಿಸ್ಥಿತಿಗೆ ತಾಯಿ ಬಂದುಬಿಟ್ಟಿದ್ದಳು.ಪ್ರತಿ ಮಗುವಿಗೂ ತಾಯಿಯ ಎದೆ ಹಾಲು ಅತ್ಯಗತ್ಯ.ಆದರೆ
ನೆನಪಿನ ಶಕ್ತಿಯನ್ನು ಪವಿತ್ರ ಕಳೆದುಕೊಂಡಿರುವುದರಿಂದ ಹುಟ್ಟಿದ ಹೆಣ್ಣು ಮಗು ತಾಯಿಯ ಎದೆ ಹಾಲಿನಿಂದ ವಂಚಿತವಾಗಿದೆ.
ಹುಟ್ಟಿನಿಂದಲೂ ತಾಯಿಯ ಎದೆ ಹಾಲು ಕಾಣದ ಮಗುವಿಗೆ ಕಳೆದ ಐದು ತಿಂಗಳಿಂದ ಪ್ರತಿದಿನ ಪೌಂಡರ್ ಹಾಲನ್ನೇ ಕುಡಿಸುತ್ತಿದ್ದಾರೆ.ಸಿದ್ದರಾಜು ತಾಯಿ ಮಗುವಿನ ಆರೈಕೆ ಮಾಡಿದರೇ ಸಿದ್ದರಾಜು
ಅನಾರೋಗ್ಯದ ಹೆಂಡತಿಯ ಆರೈಕೆಯಲ್ಲೆ ದಿನ ಕಳೆಯುತ್ತಿದ್ದಾರೆ.ಕೂಲಿ ನಾಲಿ ಮಾಡಿ ಜೀವ ಸಾಗಿಸುತ್ತಿದ್ದ
ಸಿದ್ಧರಾಜು ಹೊರಗೆ ದುಡಿಯಲು ಆಗದೆ ಕುಟುಂಬವನ್ನು ನಿಭಾಯಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದು, ನೆರವಿಗಾಗಿ ಮನವಿ ಮಾಡಿದ್ದಾರೆ.
ಕುಟುಂಬಕ್ಕೆ ತಹಸೀಲ್ದಾರ್ ಮತ್ತು ತಾಲ್ಲೂಕು ಆರೋಗ್ಯಧಿಕಾರಿ ಭೇಟಿ: ಇನ್ನೂ ಸಿದ್ಧರಾಜುರವರ ಕುಟುಂಬದ ಪರಿಸ್ಥಿಯನ್ನು ಒಬ್ಬರು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೊ ನೋಡಿದ ಸಾಕಷ್ಟು ದಾನಿಗಳು ಕುಟುಂಬಕ್ಕೆ ನೆರವಾಗಲು ಮುಂದಾಗಿದ್ದಾರೆ. ಅಲ್ಲದೆ ವಿಡಿಯೊವನ್ನು ಗಮನಿಸಿ ತಹಸೀಲ್ದಾರ್ ರತ್ನಾಂಭಿಕೆ ಹಾಗೂ ತಾಲ್ಲೂಕು ಆರೋಗ್ಯಧಿಕಾರಿ ಡಾ.ಟಿ.ರವಿಕುಮಾರ್ ಸಿದ್ಧರಾಜು ರವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸುವ ಹಾಗೂ ಕುಟುಂಬಕ್ಕೆ ನೆರವಾಗುವ ಭರವಸೆ ನೀಡಿದರು.
ಇದೇ ವೇಳೆ ಸಿದ್ಧರಾಜು ವೈದ್ಯಕೀಯ ಸೇವೆ ಹಾಗೂ ಮಗುವಿನ ಭವಿಷ್ಯಕ್ಕೆ ಹಾಗೂ ವಾಸಕ್ಕೊಂದು ಮನೆಯ ನೆರವು ನೀಡುವಂತೆ ತಹಸೀಲ್ದಾರ್ ಬಳಿ ಮನವಿ ಮಾಡಿದ್ದು, ಇದರ ಬಗ್ಗೆ ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ನೆರವಾಗುವ ಬಗ್ಗೆ ತಹಸೀಲ್ದಾರ್ ಭರವಸೆ ನೀಡಿದರು.
ನೆರವು ನೀಡಲು ಇಚ್ಚಿಸುವವರು ಸಂಪರ್ಕಿಸಿ : ಸಿದ್ಧರಾಜು 7337626283
ಕರ್ನಾಟಕ ಗ್ರಾಮೀಣ ಬ್ಯಾಂಕ್
ಅಂತರಸಂತೆ ,ಎಚ್‌ಡಿ.ಕೋಟೆ ತಾಲೂಕು ಮೈಸೂರು.ಸಿದ್ದರಾಜು.ಎನ್.ಎಸ್.
ಅಕೌಂಟ್ ನಂ: 12007100194631
IFSC Code: PKGB0012007
ಫೋನ್ ಪೇ,ಗೂಗಲ್ ಪೇ ನಂ:
7337626283
ಪವಿತ್ರ ಮನೆಗೆ ಭೇಟಿ ನೀಡಿದ ತಾಲೂಕು ಆರೋಗ್ಯಧಿಕಾರಿ
ಸಿದ್ದರಾಜುರವರ ಕುಟುಂಬಕ್ಕೆ ವೈದ್ಯಕೀಯವಾದ ನೆರವು ನೀಡುವ ಪ್ರಯತ್ನ ಮಾಡುತ್ತೇನೆ. ಸಧ್ಯಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ನಮ್ಮ ಸಿಬ್ಬಂದಿಗಳಿಗೆ ಸೂಚಿಸಿದ್ದೇನೆ. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ತಲುಪಿಸುವ ಪ್ರಯತ್ನ ಮಾಡುತ್ತೇನೆ ಎಂದು ಕುಟುಂಬದವರಿಗೆ ಭರವಸೆ ನೀಡಿದರು.
ನೆನಪಿನ ಶಕ್ತಿ ಕಳೆದುಕೊಂಡಿರುವ ತಾಯಿಗೆ ಹಸಿವಾಗುತ್ತಿದೆ ಹಾಲುಣಿಸಮ್ಮ ಎನ್ನುತ್ತಿರುವ ಐದು ತಿಂಗಳ ಕಂದಮ್ಮನ ದೃಶ್ಯ ಕಂಡರೇ ಮರುಕ ಹುಟ್ಟುತ್ತದೆ.