ಪಿರಿಯಾಪಟ್ಟಣ:14 ಜುಲೈ 2022
ಸತೀಶ್ ಆರಾಧ್ಯ / ನಂದಿನಿ ಮೈಸೂರು
ಪಿರಿಯಾಪಟ್ಟಣ ತಾಲೂಕಿನ ಸುಂಡವಾಳು ಗ್ರಾಮದ ವೆಂಕಟರಾಮಯ್ಯ ಅವರ ತಂಬಾಕು ಜಮೀನು ಜಲಾವೃತವಾಗಿ ಬೆಳೆ ನಾಶವಾಗಿದೆ.
ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಸತತ ಮಳೆಯಿಂದ ಕಿರನಲ್ಲಿ ಗ್ರಾಮದ ದೊಡ್ಡಕೆರೆ ಭರ್ತಿಯಾಗಿ ಕೋಡಿ ಹರಿದು ಕೆರೆ ಪಕ್ಕದಲ್ಲಿರುವ ವೆಂಕಟರಾಮಯ್ಯ ಅವರ ತಂಬಾಕು ಜಮೀನಿಗೆ ಹರಿದು ಕಟಾವಿನ ಹಂತಕ್ಕೆ ಬಂದಿದ್ದ ಬೆಳೆ ಜಲಾವೃತವಾಗಿದೆ.
ಕುಟುಂಬದವರೊಡನೆ ಸೇರಿ ಕಷ್ಟಪಟ್ಟು ಜಮೀನಿನಲ್ಲಿ ತಂಬಾಕು ಬೆಳೆ ಬೆಳೆದಿದ್ದು ಕಟಾವು ಹಂತದಲ್ಲಿ ಬೆಳೆ ಜಲಾವೃತವಾಗಿ ನಾಶವಾಗಿರುವುದರಿಂದ ದಿಕ್ಕು ತೋಚದಂತಾಗಿದ್ದು ತಂಬಾಕು ಮಂಡಳಿ ಹಾಗೂ ತಾಲ್ಲೂಕು ಆಡಳಿತ ಸೂಕ್ತ ಪರಿಹಾರ ಒದಗಿಸುವಂತೆ ರೈತ ವೆಂಕಟರಾಮಯ್ಯ ಮನವಿ ಮಾಡಿದ್ದಾರೆ.