ಮೈಸೂರು:30 ಜೂನ್ 2022
ನಂದಿನಿ ಮೈಸೂರು
ಜುಲೈ 2 ರಿಂದ 10 ರವರೆಗೆ ನಗರದ ಅರ್ಬನ್ ಹಾತ್‌ನಲ್ಲಿ ಗುಜರಾತ್ ಕರಕುಶಲ ಮೇಳ ಆಯೋಜಿಸಲಾಗಿದೆ ಎಂದು ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕರಾದ ಡಾ.ಎಚ್.ಆರ್. ಮಹದೇವಸ್ವಾಮಿ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಉದ್ಘಾಟಿಸುವರು.ಮೇಳದಲ್ಲಿ ಗುಜರಾತಿನ ೯೦ ಕ್ಕೂ ಹೆಚ್ಚು ಕರಕುಶಲ ಕರ್ಮಿಗಳು ಪಾಲ್ಗೊಳ್ಳಲಿದ್ದು, ಇವರಲ್ಲಿ ೬೨ ಮಂದಿ ಮಹಿಳೆಯರೇ ಆಗಿದ್ದಾರೆ. ಮೇಳದಲ್ಲಿ ಮೊದಲ ಮೂರು ದಿನ ಸಂಜೆ ಅಲ್ಲಿನ ಸುಪ್ರಸಿದ್ಧ ಗರ್ಭಾ ನೃತ್ಯವನ್ನು ಸಾಂಪ್ರದಾಯಿಕ ಉಡುಗೆ ತೊಡುಗಳೊಡನೆ ಪ್ರದರ್ಶಿಸಲಾಗುವುದು.
ಮೇಳದಲ್ಲಿ ಕುಶಲ ಕರ್ಮಿಗಳು ತಯಾರಿಸಿದ ಪಟೋಲ ಸೀರೆ, ಬಾಂದಿನಿ ಸೀರೆ, ಕಸೂತಿ ಮಾಡಿದ ಬೆಡ್ ಶೀಟ್‌ಗಳು, ಟವೆಲ್, ಕುಷನ್ ಕವರ್, ಪರಿಸರ ಸ್ನೇಹಿ ಆಭರಣ, ಡ್ರೆಸ್ ಮೆಟೀರಿಯಲ್, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿ, ಚನಿಯಾ ಚೋಲಿ ಮೊದಲಾದವು ನೇರವಾಗಿ ಕುಶಲ ಕರ್ಮಿಗಳಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ದೊರೆಯಲಿವೆ.
ಇವು ಉತ್ತಮ ಗುಣಮಟ್ಟದ್ದಾಗಿದ್ದು, ನಗರದ ಗ್ರಾಹಕರು ಪ್ರಯೋಜನ ಪಡೆಯಬೇಕೆಂದರು.
ಇದೇ ವೇಳೆ ಗುಜರಾತಿನ ಕರುಕುಶಲ ಕರ್ಮಿಕಗಳು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಅರ್ಬನ್ ಹಾತ್ ಸಂಯೋಜಕರಾದ ಶಿವನಂಜಸ್ವಾಮಿ, ಇಂಡೆಕ್ಸ್ ಸಿ ವ್ಯವಸ್ಥಾಪಕರಾದ ಡಾ. ಸ್ನೇಹಲ್ ಡಿ. ಮಕ್ವಾನ ಹಾಜರಿದ್ದರು.