ಆಜಾದಿ ಕಾ ಅಮೃತ್ ಮಹೋತ್ಸವ್” ಅಂಗವಾಗಿ ಬೈಕ್ ಅಭಿಯಾನ

ಮೈಸೂರು : 1 ಜುಲೈ 2022

ನಂದಿನಿ ಮೈಸೂರು

“ಆಜಾದಿ ಕಾ ಅಮೃತ್ ಮಹೋತ್ಸವ್” ಅಂಗವಾಗಿ ಬೈಕ್ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನವದೆಹಲಿಯಲ್ಲಿನ ರೈಲ್ವೆ ಮಂಡಳಿಯ ರೈಲ್ವೆ ಸಂರಕ್ಷಣಾ ದಳದ ಮಹಾನಿರ್ದೇಶಕರ ನಿರ್ದೇಶನದಂತೆ ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ದಳದ ವತಿಯಿಂದ ಇಂದು ಆಯೋಜಿಸಿದ್ದ ಬೈಕ್ ಅಭಿಯಾನಕ್ಕೆ
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ರವರು ಮೈಸೂರು ರೈಲ್ವೆ ನಿಲ್ದಾಣದ ಆವರಣದಿಂದ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಅಗರ್ವಾಲ್ ರವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರವು 75 ವರ್ಷಗಳ ಸ್ವಾತಂತ್ರ್ಯ ಆಚರಣೆಯ ಸ್ಮರಣಾರ್ಥ ‘ಆಜಾದಿ ಕಾ ಅಮೃತ್ ಮಹೋತ್ಸವ್’ನ ಅಂಗವಾಗಿ ಬೈಕ್ ಅಭಿಯಾನ ಆಯೋಜಿಸಿದೆ. ಭಾರತದ ಸ್ವಾತಂತ್ರ್ಯವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ‘ಆಜಾದಿ ಕಾ ಅಮೃತ್ ಮಹೋತ್ಸವ್’ ಮತ್ತು ರೈಲ್ವೆ ಸಂರಕ್ಷಣಾ ಪಡೆಗಳ ಸಾಧನೆಗಳ ಕುರಿತು ಸಂದೇಶ ಮೂಡಿಸಲು ಮತ್ತು ಜಾಗೃತಿಯನ್ನು ಹರಡಲು ಅಭಿಯಾನದಲ್ಲಿ ಭಾಗವಹಿಸುವವರಿಗೆ ತಿಳಿಸಲಾಯಿತು.

ಮೈಸೂರು ವಿಭಾಗದ ವಿಭಾಗೀಯ ಸಂರಕ್ಷಣಾ ಆಯುಕ್ತರಾದ ಥಾಮಸ್ ಜಾನ್, ಹಿರಿಯ ವಿಭಾಗೀಯ ವಿತ್ತೀಯ ವ್ಯವಸ್ಥಾಪಕರಾದ ಲೆವಿನ್ ಪ್ರಭು,ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು
ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ್ ಕನಮಡಿ
ಮತ್ತು ಇತರ ಹಿರಿಯ ಅಧಿಕಾರಿಗಳು ದ್ವಜ ತೋರಿಸಿ ಬೈಕ್ ಅಭಿಯಾನವನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರೈಲ್ವೆ ಸಂರಕ್ಷಣಾ ದಳದ ಸುಮಾರು 10 ಸಿಬ್ಬಂದಿಗಳು 5 ಬೈಕ್‌ಗಳಲ್ಲಿ ವಿವಿಧ ರಾಜ್ಯಗಳ ಮುಖಾಂತರ ಸಂಚರಿಸಿ ಅಂತಿಮವಾಗಿ ಆಗಸ್ಟ್ 14 ರಂದು ನವದೆಹಲಿ ತಲುಪಲಿದ್ದಾರೆ.

Leave a Reply

Your email address will not be published. Required fields are marked *