ಮೈಸೂರು:7 ಜೂನ್ 2022
ನಂದಿನಿ ಮೈಸೂರು
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಥಿಸಿರುವ ವೀರಭದ್ರಸ್ವಾಮಿರವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಡಾ.ಆರ್.ಮೋಹನ್ ರಾಜು ಮನವಿ ಮಾಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜೂನ್ 13 ರಂದು ನಡೆಯಲಿರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ವೀರಭದ್ರಸ್ವಾಮಿರವರಿಗೆ ಕಣಕ್ಕಿಳಿಸಿದ್ದೇವೆ. ಈಗಾಗಲೇ ಮೈಸೂರು, ಮಂಡ್ಯ,ಹಾಸನ,ಚಾಮರಾಜನಗರ ಜಿಲ್ಲೆಯಲ್ಲಿ ಪ್ರಚಾರ ಮಾಡುತ್ತಿದ್ದೇವೆ. ವೀರಭದ್ರಸ್ವಾಮಿರವರಿಗೆ ಮತ ಹಾಕುವಂತೆ ಮನವಿ ಮನವಿ ಮಾಡಿದರು.
ನಂತರ ವೀರಭದ್ರಸ್ವಾಮಿ ಮಾತನಾಡಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಾನು ಸ್ಪರ್ಥಿಸುತ್ತಿದ್ದೇನೆ.ನನ್ನ ಕ್ರಮ ಸಂಖ್ಯೆ 6 ಕ್ಕೆ ಮತ ಹಾಕುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಿಂಗರಾಜು ಪ್ರಕಾಶ್,ಶ್ರೀಕಾಂತ್ ಹಾಜರಿದ್ದರು.