ಪಿರಿಯಾಪಟ್ಟಣ: _7 ಜೂನ್ 2022
ನಂದಿನಿ ಮೈಸೂರು
ಮಗಳು ಬೇರೆ ಜಾತಿ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂಬ ಕಾರಣಕ್ಕೆ ಮಾನಕ್ಕೆ ಅಂಜಿ ತಲೆ ಎತ್ತರಕ್ಕೆ ಬೆಳೆದು ನಿಂತಿದ್ದ ಶಾಲಿನಿಗೆ ಉಜ್ವಲ ಭವಿಷ್ಯ ಕಟ್ಟಿಕೊಡುತ್ತೀನೆಂದು ಬಾಲಮಂದಿರದಿಂದ ಕರೆದೊಯ್ದು ತಂದೆ ತಾಯಿ ಮಗಳನ್ನು ಚಟ್ಟಕ್ಕೇರಿಸಿದ್ದಾರೆ.
ಹೌದು
ಆಕೆಗೆ ಜೆಸ್ಟ್ 17 ವರ್ಷ ನೋಡೋಕೆ ಸುಂದರಿಯಾಗಿದ್ಲು ಹದಿಹರೆಯದ ವಯಸ್ಸು ಬೇರೆ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು.ನೀನು ಮಾಡ್ತೀರೋದು ತಪ್ಪುಕಣಮ್ಮ ಅಂತ ತಂದೆ ಎಚ್ಚರಿಕೆಯೂ ಕೊಟ್ಟಿದ್ದ.ತಂದೆ ಮಾತಿಗೂ ಕ್ಯಾರೆ ಎನ್ನದ ಬಾಲಕಿ ಅವನೇಬೇಕೆಂದು ಹಠ ಹಿಡಿದಿದ್ದಳು.ಗಲಾಟೆ ಅತೀರೇಖಕ್ಕೆ ಹೋಗಿ
ತಂದೆಯೇ ಮಗಳ ಕತ್ತು ಹಿಸುಕಿ ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ಶಾಲಿನಿ (17) ಮೃತ ಯುವತಿ, ಒಕ್ಕಲಿಗ ಸಮಾಜಕ್ಕೆ ಸೇರಿದ ಸುರೇಶ್ ಹಾಗೂ ಬೇಬಿ ಅವರ ಪುತ್ರಿ ಶಾಲಿನಿ ಪಟ್ಟಣದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು ಆಕೆಯ ಗ್ರಾಮದ ಸಮೀಪದ ಮೆಲ್ಲಹಳ್ಳಿ ಬೋರೆ ಗ್ರಾಮದ ಪರಿಶಿಷ್ಟ ಜನಾಂಗಕ್ಕೆ ಸೇರಿದ ಯುವಕನನ್ನು ಪ್ರೀತಿಸುತ್ತಿದ್ದು ವಿಷಯ ತಿಳಿದ ಶಾಲಿನಿ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಪಟ್ಟಣದ ಪೊಲೀಸ್ ಠಾಣೆಗೆ ಯುವಕನ ವಿರುದ್ಧ ದೂರು ನೀಡಿದ್ದ ಸಂದರ್ಭ ಯುವತಿ ಆತನನ್ನೇ ಪ್ರೀತಿಸುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದಾಗ ಆಕೆಗೆ 18 ವರ್ಷ ತುಂಬಿರದ ಕಾರಣ ಪೊಲೀಸರು ಆಕೆಯನ್ನು ಮೈಸೂರಿನ ಬಾಲಮಂದಿರಕ್ಕೆ ಕಳುಹಿಸಿದ್ದರು, ಕಳೆದ ಮೇ 18 ರಂದು ಶಾಲಿನಿ ತನ್ನ ಪೋಷಕರಿಗೆ ಕರೆ ಮಾಡಿ ನನಗೆ ನಾನು ತಪ್ಪು ಮಾಡಿರುವುದು ಮನವರಿಕೆಯಾಗಿದೆ.ಬಾಲಮಂದಿರದಿಂದ ಕರೆದುಕೊಂಡು ಹೋಗುವಂತೆ ಹೇಳಿದ್ದಳು.ನನ್ನ ಮಗಳ ಉಜ್ವಲ ಭವಿಷ್ಯಕ್ಕಾಗಿ ನಾನು ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದೇನೆ.ಆಕೆಗೆ ಏನಾದರೂ ನನ್ನ ಜವಾಬ್ದಾರಿ ಅಂತ ತಂದೆ ತಾಯಿ ಒಪ್ಪಿಗೆ ಪತ್ರ ಬರೆದುಕೊಟ್ಟು ತಮ್ಮ ಮಗಳನ್ನು ಸ್ವಗ್ರಾಮಕ್ಕೆ ಕರೆತಂದಿದ್ದರು.
ಸೋಮವಾರ ರಾತ್ರಿ ಶಾಲಿನಿ ಮತ್ತೆ ತನ್ನ ಪೋಷಕರೊಂದಿಗೆ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಹೋಗುವುದಾಗಿ ಹಠ ಮಾಡಿ ಕುಳಿತಾಗ ಆಕೆಯ ತಂದೆ ಸುರೇಶ್ ಇದಕ್ಕೊಪ್ಪದೆ ತನ್ನ ಮಗಳ ಕತ್ತು ಹಿಸುಕಿ ಕೊಲೆ ಮಾಡಿ ತನ್ನ ಪತ್ನಿ ಬೇಬಿಯೊಂದಿಗೆ ಸೇರಿ ಆಕೆ ಪ್ರೀತಿಸುತ್ತಿದ್ದ ಹುಡುಗನ ಗ್ರಾಮದ ಜಮೀನೊಂದರ ಬಳಿ ಎಸೆದು ಹೋಗಿದ್ದಾರೆ.
ಮಂಗಳವಾರ ಬೆಳಿಗ್ಗೆ 6.30 ರ ಸಮಯದಲ್ಲಿ ಸುರೇಶ್ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಬಂದು ಮಗಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಪೋಲಿಸರಿಗೆ ಶರಣಾಗಿದ್ದಾನೆ, ಆರೋಪಿತನ ಹೇಳಿಕೆ ಆಧರಿಸಿ ಪೊಲೀಸರು
ಸ್ವ ವರದಿ ದಾಖಲಿಸಿ ಮೃತ ದೇಹವನ್ನು ಶವ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ರವಾನಿಸಿದರು.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಅಪರ ಎಸ್ಪಿ ಶಿವಕುಮಾರ್, ಡಿವೈಎಸ್ ಪಿ ರವಿಪ್ರಸಾದ್, ಸಿಪಿಐ ಗಳಾದ ಜಗದೀಶ್, ಪ್ರಕಾಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.