ಮೈಸೂರು:12 ಏಪ್ರಿಲ್ 2022
ನಂದಿನಿ ಮೈಸೂರು
ಸವಿತಾ ಸಮಾಜದ ಅಭಿವೃದ್ಧಿಗಾಗಿ 20 ಎಕರೆ ಭೂಮಿ ನೀಡಿ ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ರಾಜ್ಯಾಧ್ಯಕ್ಷ ಸಂಪತ್ ಕುಮಾರ್ ಒತ್ತಾಯಿಸಿದ್ದಾರೆ.
ಮೈಸೂರಿಗೆ ಪ್ರವಾಸ ಕೈಗೊಂಡಿರುವ
ಕರ್ನಾಟಕ ರಾಜ್ಯ ಸವಿತಾ ಸಮಾಜದ ರಾಜ್ಯಾಧ್ಯಕ್ಷ ಸಂಪತ್ ಕುಮಾರ್ ರವರನ್ನು
ಮೈಸೂರಿನ ಜಲದರ್ಶಿಯಲ್ಲಿ ಸಮುದಾಯದಿಂದ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಅವರು
ರಾಜ್ಯದಲ್ಲಿ ಸವಿತಾ ಸಮಾಜ ಸುಮಾರು 45 ಲಕ್ಷ ಸದಸ್ಯರನ್ನು ಒಳಗೊಂಡಿದೆ.ನಮ್ಮ ಸಮಾಜ ಈಗಲೂ ಹಿಂದುಳಿದೆ.ಸಮಾಜದ ಸಂಘಟನೆ ಮಾಡುವ ಉದ್ದೇಶದಿಂದ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದೇನೆ. ಸರ್ಕಾರ ಸಮುದಾಯದ ಜನರಿಗೆ ನೆರವು ನೀಡಬೇಕು.ಮಕ್ಕಳಿಗೆ ವಿಧ್ಯಾಭ್ಯಾಸ ನೀಡಬೇಕು.ಉನ್ನತ ಶಿಕ್ಷಣಕ್ಕೆ ಮುಂದಾಗಬೇಕು.ಸರ್ಕಾರ 20 ಎಕರೆ ಭೂಮಿ ನೀಡಬೇಕು ಎಂದರು.
ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಾಗೇಶ್ ಮಾತನಾಡಿ ಮೈಸೂರಿಗೆ ಸಂಪತ್ ಕುಮಾರ್ ಆಗಮಿಸಿದ್ದಾರೆ. ಸಮುದಾಯದವರನ್ನ ಕರೆದು ಸಭೆ ಮಾಡಿದ್ದಾರೆ.ಕುಂದುಕೊರತೆ,ಸಮಸ್ಯೆ ಆಲಿಸಿದ್ದಾರೆ. ಸಮಾಜದ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ.ಇವರು ಅಧ್ಯಕ್ಷರಾದ ನಂತರ ಒಳ್ಳೇಯ ಕೆಲಸ ಮಾಡಿದ್ದಾರೆ.
ವೃತಿಯನ್ನೇ ಜೀವನವನ್ನಾಗಿಸಿಕೊಂಡಿದ್ದ ಸವಿತಾ ಸಮಾಜ ಕೋವಿಡ್ ಸಂದರ್ಭದಲ್ಲಿ ಸಂಕಷ್ಟ ಎದುರಾಗಿತ್ತು.ಆಹಾರ ಕಿಟ್ ವಿತರಿಸಿದರು,ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಸಹಾಯಕ್ಕೆ ಮುಂದಾಗಿದ್ದಾರೆ.ಸವಿತಾ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ
ಸವಿತಾ ಸಮಾಜದ
ಒಕ್ಕೂಟದ ಕಿರಣ್ ಕುಮಾರ್,ರೇವಣ್ಣ,
ನಾಗರಾಜು,ಎಚ್.ಡಿ.ರಾಮು, ಸಮುದಾಯದ ಮುಖಂಡರು ,ಸದಸ್ಯರು ಸೇರಿದಂತೆ 60 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.