ಮೈಸೂರು:23 ಮಾರ್ಚ್ 2022
ನಂದಿನಿ ಮೈಸೂರು
ದಿ.ಡಾ.ಪುನೀತ್ ರಾಜಕುಮಾರ್ ರವರ ಜೇಮ್ಸ್ ಚಿತ್ರವನ್ನು ತೆಗೆದು ಕಾಶ್ಮೀರಿ ಫೈಲ್ಸ್ ಅನ್ನು ಚಿತ್ರಮಂದಿರಗಳಲ್ಲಿ ಹಾಕುವಂತೆ ಬಿಜೆಪಿಯವರು ಮುಂದಾಗಿರುವುದನ್ನ ಖಂಡಿಸಿ ಮೈಸೂರಿನಲ್ಲಿ ರಸ್ತೆ ತಡೆದು ಪ್ರತಿಭಟಿಸಲಾಯಿತು.
ಮಾಜಿ ಶಾಸಕ ಎಂಕೆ ಸೋಮಶೇಖರ್ ನೇತೃತ್ವದಲ್ಲಿ
ಮೈಸೂರು ರಾಮಸ್ವಾಮಿ ವೃತ್ತದಲ್ಲಿ ಬಿಜೆಪಿ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಎಂಕೆ ಸೋಮಶೇಖರ್ ಮಾತನಾಡಿ ದಿ.ಪುನೀತ್ ರಾಜಕುಮಾರ್ ರವರ ನಿಧನದಲ್ಲಿ ಇಡೀ ದೇಶವೇ ಶೋಕ ವ್ಯಕ್ತಪಡಿಸಿದೆ. ಕಲಾವಿದನ ಪ್ರತಿಭೆ ಮತ್ತು ಸಾಮಾಜಿಕ ಸೇವೆಗೆ ಮೈಸೂರು ವಿವಿ ಡಾಕ್ಟರೇಟ್ ಪದವಿಯನ್ನು ನೀಡಿದೆ.ಅಂತಹ ಮೇರು ವ್ಯಕ್ತಿಯ “ಜೇಮ್ಸ್”ಚಿತ್ರವನ್ನು ಇಡೀ ದೇಶದೆಲ್ಲೆಡೆ ಕೊನೆಯ ಚಿತ್ರವೆಂದು ಭಾವನಾತ್ಮಕವಾಗಿ ತೆಗೆದುಕೊಂಡು ಪ್ರತಿಯೊಬ್ಬರು ವೀಕ್ಷಿಸುತ್ತಿದ್ದು ಸುಮಾರು 1ನೂರು ಕೋಟಿ ಸಂಪಾದಿಸಿದಿ ಯಶಸ್ವಿಯಾಗುತ್ತಿರುವುದನ್ನು ಸಹಿಸದ ಬಿಜೆಪಿ ಸರ್ಕಾರ ಜೇಮ್ಸ್ ಚಿತ್ರ ತೆಗೆದು ಕಾಶ್ಮೀರಿ ಫೈಲ್ಸ್ ಚಿತ್ರ ಹಾಕುವಂತೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಡಾ.ಪುನೀತ್ ರಾಜಕುಮಾರ್ ರವರನ್ನು ಆವಮಾನಿಸುತ್ತಿರುವುದನ್ನು ವಿರೋಧಿಸಿ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದೇವೆ.ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ನೀಡಿರುವ ರಿಯಾಯಿತಿಯನ್ನು ಜೇಮ್ಸ್ ಚಿತ್ರಕ್ಕೂ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು,ಪುನೀತ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.