ಸರಗೂರು:6 ಜನವರಿ 2022
ವಿಕಲಚೇತನ ರೈತ ಕುಟುಂಬಕ್ಕೆ ಸೇರಿದ ಹುಲ್ಲಿನ ಮೆದೆಗೆ ಯಾರೋ ಬೆಂಕಿ ಹಚ್ಚಿದ್ರು.ಘಟನೆಯಿಂದ ದಿಕ್ಕೆ ತೋಚದಂತಾಗಿದ್ದ ಅನ್ನದಾತನ ಕುಟುಂಬಕ್ಕೆ ಸಹಾಯ ಹಸ್ತ ಚಾಚಲು ರಕ್ಷಣಾ ಸೇವಾ ಟ್ರಸ್ಟ್ ಹಾಗೂ ಎ ಎಸ್ ಐ ದೊರೆಸ್ವಾಮಿ ಮುಂದಾಗಿದ್ದಾರೆ.
ಭಾರತ್ ನ್ಯೂಸ್ ಟಿವಿ ವರದಿಗೆ ಸ್ಪಂದಿಸಿದ ರಕ್ಷಣಾ ಸೇವಾ ಟ್ರಸ್ಟ್ ಹಾಗೂ ಎ ಎಸ್ ಐ ದೊರೆಸ್ವಾಮಿ ಕಣ್ಣೀರು ಹಾಕಿದ್ದ ವಿಶೇಷಚೇತನ ರೈತ ಸಿದ್ದನಾಯಕ ಅವರ ಕುಟುಂಬವನ್ನು ಭೇಟಿ ಮಾಡಿ ಕುಟುಂಬಕ್ಕೆ ವೈಯಕ್ತಿಕವಾಗಿ ಸಹಾಯಧನ ಹಾಗೂ ಒಂದು ಟ್ಯಾಕ್ಟರ್ ಹುಲ್ಲನ್ನು ವಿತರಿಸಿ ಧೈರ್ಯ ತುಂಬಿದ್ದಾರೆ.
ಸಹಾಯಕ್ಕೆ ಮುಂದಾದ ರಕ್ಷಣಾ ಸೇವಾ ಟ್ರಸ್ಟ್ ಸಂಸ್ಥೆಗೆ ವಿಕಲಚೇತನ ರೈತ ಸಿದ್ದನಾಯಕ ಹಾಗೂ ಕುಟುಂಬದ ಸದಸ್ಯರು ಧನ್ಯವಾದ ತಿಳಿಸಿದ್ದಾರೆ.
ಸಹಾಯ ಮಾಡಲು ಇಚ್ಚಿಸುವವರು
7090169621 ಸಿದ್ದನಾಯಕ ಇವರನ್ನ ಸಂಪರ್ಕಿಸಬಹುದಾಗಿದೆ.
ಸಂಜಯ್ ಕೆ ಬೆಳತೂರು ಜೊತೆ ನಂದಿನಿ ಮೈಸೂರು