ಮೈಸೂರು:31 ಡಿಸೆಂಬರ್ 2021
ನಂದಿನಿ
ರಾಜ್ಯದ ಮುಖ್ಯಮಂತ್ರಿ ಮನವಿ ಮೇರೆಗೆ ಕನ್ನಡ ಹೋರಾಟ ಗಾರ ವಾಟಾಳ್ ನಾಗರಾಜ್ ರವರು ಹಾಗು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಅನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ಇಂದು ಹಾರ್ಡಿಂಜ್ ವೃತ್ತ ದಲ್ಲಿ ಮೈಸೂರು ಜಿಲ್ಲಾ ಕನ್ನಡ ಚಳುವಳಿ ಗಾರರ ಒಕ್ಕೂಟ ದಿಂದ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಬಿ ಎ ಶಿವಶಂಕರ ಮಾತನಾಡಿ ಕರ್ನಾಟಕದ ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುವ ವೇಳೆಯಲ್ಲಿಯೇ ಎಂ ಇ ಎಸ್, ಶಿವಸೇನೆ ಕಾರ್ಯಕರ್ತರು ಪುಂಡಾಟ ನಡೆಸಿ, ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ, ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದಲ್ಲದೆ ಜತೆಗೆ ದೇಶಭಕ್ತ ಸಂಗೊಳ್ಳಿ ರಾಯಣ್ಣ ರ ಪ್ರತಿಮೆ ಭಗ್ನ ಮಾಡಿ, ನಮ್ಮ ಸರ್ಕಾರಿ ಹಾಗು ಪೋಲಿಸ್ ವಾಹನಗಳನ್ನು ಹೊಡೆದುಹಾಕಿ – ಧ್ವಂಸಮಾಡಿ ಕರ್ನಾಟಕದ ಪ್ರವಾಸಿಗರ ಕಾರುಗಳನ್ನು ಅಡ್ಡಹಾಕಿ ಒಡೆದು ಹಾಕಿರುವುದನ್ನು ಹಾಗೂ ಕನ್ನಡಿಗರ ಮೇಲೆ ಪದೇ ಪದೇ ದಬ್ಬಾಳಿಕೆ ಮಾಡುತ್ತಿರುವುದನ್ನು ಮೈಸೂರು ಜಿಲ್ಲಾ ಕನ್ನಡ ಚಳುವಳಿ ಗಾರರ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದರು.
ಬೆಳಗಾವಿ ಕರ್ನಾಟಕದ ಕಿರೀಟ, ಅವಿಭಾಜ್ಯ ಅಂಗ ಎಂದು ಗೊತ್ತಿದ್ದರೂ, ಎಂ ಇ ಎಸ್, ಶಿವಸೇನೆ ಕಾರ್ಯಕರ್ತರು ಪದೇಪದೇ ಕ್ಯಾತೆ ತೆಗೆದು ತೊಂದರೆ ಕೊಡುತ್ತಿರುವುದು ಹೇಯ ಕೃತ್ಯವಾಗಿದೆ,
ಎರಡು ರಾಜ್ಯಗಳ ಮಧ್ಯೆ ಸಾಮರಸ್ಯವನ್ನು ಹಾಳುಮಾಡುತ್ತಿರುವ ಈ ಪುಂಡರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ತಾಯೂರು ವಿಠ್ಠಲಮೂರ್ತಿ ಆಗ್ರಹಿಸಿದರು.
ನಂತರ ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಈ ಕೂಡಲೇ ಎಲ್ಲಾ 224 ಶಾಸಕರು, 28 ಸಂಸದರರನ್ನು ಒಗ್ಗೂಡಿಸಿಕೊಂಡು ಕೇಂದ್ರ ಸರ್ಕಾರ ಕ್ಕೆ ಒತ್ತಾಯ ಮಾಡಿ, ಪರಿಸ್ಥಿತಿಯನ್ನು ತಿಳಿ ಹೇಳಿ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ, ಎಂ ಇ ಎಸ್ ಅನ್ನು ಶಾಶ್ವತವಾಗಿ ಬ್ಯಾನ್ ಮಾಡಬೇಕು, ನಮ್ಮ ರಾಜ್ಯದ ಜನರ ಭಾವನೆಯನ್ನು ಕೆರಳಿಸಿ ಅಪಾರ ಆಸ್ತಿ ಹಾನಿ ಮಾಡಿರುವವರನ್ನು ಕ್ಷಮಿಸಬಾರದು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಮತ್ತೆ ಈ ರೀತಿ ಪ್ರಕರಣಗಳು ಮರುಕಳಿಸಬಾರದೆಂದು, ಶಾಶ್ವತವಾಗಿ ಈ ಎಂ ಇ ಎಸ್ ಸಂಘಟನೆಯನ್ನು ನಿಷೇಧ ಮಾಡಬೇಕೆಂದು ಹಾಗೂ ಕನ್ನಡ ಹೋರಾಟಗಾರ ಮೇಲೆ ಹಾಕಿರುವ ಕೇಸನ್ನು ಹಿಂಪಡೆಯಬೇಕು ಎಂದು ಕೇಂದ್ರ ರಾಜ್ಯ ಸರ್ಕಾರ ವನ್ನು ಒತ್ತಾಯಿಸಿದರು .
ಪ್ರತಿಭಟನೆಯಲ್ಲಿ ಕನ್ನಡ ಚಳುವಳಿಗಾರರಾದ ತಾಯೂರು ವಿಠ್ಠಲಮೂರ್ತಿ, ಬಿ ಎ ಶಿವಶಂಕರ, ತೇಜೇಶ್ ಲೋಕೇಶ್ ಗೌಡ, ಮೂಗೂರು ನಂಜುಂಡಸ್ವಾಮಿ, ಹೋಟೆಲ್ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ, ಮಹದೇವ ಸ್ವಾಮಿ, ಎಳನೀರು ರಾಮಣ್ಣ, ತೇಜಸ್ವಿ ಪಾಟೀಲ್, ವಿಜಯೇಂದ್ರ, ದರ್ಶನ್ ಗೌಡ, ರವಿನಾಯಕ್, ಮಂಜುನಾಥ್, ಶಿವರಾಂಗೌಡ, ಪ್ರಜೀಶ್ ಪಿ, ಪಳನಿ, ಪ್ರಭುಶಂಕರ್ ಎಂ ಬಿ, ಗಣೇಶ್ ಪ್ರಸಾದ್, ಸ್ವಾಮಿ, ಗೊರೂರು ಮಲ್ಲೇಶ್ ಹಾಗೂ ಸುಂದರಪ್ಪ,ಭಾಗಿಯಾಗಿದ್ದರು.