ಮೈಸೂರು:25 ಡಿಸೆಂಬರ್ 2021
ನಂದಿನಿ
ಡಿ.27 ರಂದು ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಕಾಂಗ್ರೆಸ್ ಯುವ ಮುಖಂಡ ರಾಕೇಶ್ ಪಾಪಣ್ಣ ರವರ ಹುಟ್ಟು ಹಬ್ಬದ ಅಂಗವಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿನಕಲ್ ಗ್ರಾ.ಪ. ಮಾಜಿ ಉಪಾಧ್ಯಕ್ಷ
ಹಿನಕಲ್ ಹೊನ್ನಪ್ಪ ತಿಳಿಸಿದರು.
ನಾಟಿಕೋಳಿ ಮಾಯಪ್ಪ ಹಾಗೂ ಹಿನಕಲ್ ಗ್ರಾಮಸ್ಥರ ಪರವಾಗಿ ಹಿನಕಲ್ ಟೆಂಟ್ ಎದುರು ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.ನಂತರ ಹಿನಕಲ್ ಚರ್ಚ್ ವೃದ್ಧ ಆಶ್ರಮದಲ್ಲಿ ವೃದ್ಧರಿಗೆ ಹಣ್ಣು ಹಂಪಲ ವಿತರಿಸಲಾಗುವುದು . ಆದ್ದರಿಂದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು , ಹಿನಕಲ್ ಗ್ರಾಮಸ್ಥರು , ರಾಕೇಶ್ ಪಾಪಣ್ಣ ರವರ ಎಲ್ಲಾ ಮುಖಂಡರು , ಅಭಿಮಾನಿಗಳು ಭಾಗವಹಿಸುವಂತೆ ಮನವಿ ಮಾಡಿದರು.
ನಾಟಿಕೋಳಿ ಮಾಯಪ್ಪ,
ಹಿನಕಲ್ ಮಾಜಿ ಗ್ರಾ.ಪಂ.ಸದಸ್ಯ ಶ್ರೀನಿವಾಸ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯುವ ಮುಖಂಡ ನಿಶಾಂತ್ ಜೊತೆಯಲ್ಲಿದ್ದರು.