ಸಾಲಿಗ್ರಾಮ:15. ನವೆಂಬರ್ 2021
ನಂದಿನಿ
ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ತಾಲ್ಲೂಕು, ಚುಂಚನಕಟ್ಟೆ ಹೋಬಳಿ, ಹೊಸೂರು ಗ್ರಾಮದಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿದ್ದು, ಇದರಿಂದಾಗಿ ಹಾನಿಯುಂಟಾದ ಸ್ಥಳಗಳಿಗೆ ಇಂದು, ಶಾಸಕ ಸಾ. ರಾ. ಮಹೇಶ್ ರವರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು . ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.