ಸರಗೂರು :10 ನವೆಂಬರ್ 2021
ನಂದಿನಿ
ಬಾಳೆ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು.ಕಾಡಾನೆಗಳ ಅಟ್ಟಹಾಸಕ್ಕೆ 2ಎಕರೆ ಬಾಳೆ ತೋಟ ನಾಶವಾಗಿರುವ ಘಟನೆ ಸರಗೂರು ತಾಲೂಕಿನ ಆಳಲಹಳ್ಳಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ಚನ್ನಗುಂಡಿ ಗ್ರಾಮದ ದೇವೇಂದ್ರ ಎಂಬ ರೈತರಿಗೆ ಸೇರಿದ 2ಎಕರೆ ಬಾಳೆ ತೋಟ.ನುಗು ಅರಣ್ಯದಿಂದ ಆಗಮಿಸಿದ ಕಾಡಾನೆ ಬಾಳೆ ತೋಟ ನಾಶಪಡಿಸಿದೆ.
ನುಗು ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಾಡಿನಿಂದ ನಾಡಿಗೆ ಬರುತ್ತಿರುವ ಆನೆಗಳು.ನುಗು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ರೈತರು ಆರೋಪಿಸಿದರು.ಸಾಲಸೋಲ ಮಾಡಿ ನೀರಾವರಿ ಜಮೀನಿನಲ್ಲಿ ಬಾಳೆ ಬೆಳೆ ಮಾಡಲಾಗಿದೆ.ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ನಾವು ಬದುಕುವುದಾದರೂ ಹೇಗೆ ಎಂದು ಅಳಲು ತೋಡಿಕೊಂಡಿರುವ ರೈತ ದೇವೇಂದ್ರ.ದಿನ ನಿತ್ಯ ಬೆಳಗಾದರೆ ರಾತ್ರಿಯಾದರೆ ನುಗು ಅರಣ್ಯ ಇಲಾಖೆಯಿಂದ ಗ್ರಾಮದತ್ತ ಆನೆಗಳು ಧಾವಿಸುತ್ತಿವೆ.ನುಗು ಅರಣ್ಯ ಇಲಾಖಾಧಿಕಾರಿಗಳಿಗೆ ಎಷ್ಟೇ ಬಾರಿ ದೂರವಾಣಿ ಕರೆ ಮಾಡಿ ಮನವಿ ಮಾಡಿದರು ರೈತರ ಮನವಿಗೆ ಸ್ಪಂದಿಸುತ್ತಿಲ್ಲ ಎಂದರು.