ನಂಜನಗೂಡು:10 ನವೆಂಬರ್ 2021
ನಂದಿನಿ
ನಂಜನಗೂಡು ತಾಲೂಕಿನ ಹುಸ್ಕೂರು ಗ್ರಾಮಸ್ಥರು ಇಂದು ದಿವಂಗತ ಪುನೀತ್ ರಾಜ್ ಕುಮಾರ್ ಪುಣ್ಯತಿಥಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಗ್ರಾಮದ ಉಪ್ಪಾರ ಶೆಟ್ಟರ ಬೀದಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ
ಪುನೀತ್ ಭಾವಚಿತ್ರಕ್ಕೆ ಗ್ರಾಮಸ್ಥರು ಪೂಜೆ ಮತ್ತು
ಪುಷ್ಪಾರ್ಚನೆ ಸಲ್ಲಿಸಿದರು.ಗ್ರಾಮದಲ್ಲಿ ಒಂದು ರೀತಿ ಹಬ್ಬದ ವಾತಾವರಣ ಉಂಟಾಗಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.ಅಕಾಲಿಕ ಮರಣದಿಂದಾಗಿ ಅಗಲಿದ ತಮ್ಮ ನೆಚ್ಚಿನ ನಾಯಕ ನಟನಿಗೆ ಮಹಿಳೆಯರು ಮಕ್ಕಳು ಸೇರಿದಂತೆ ಗ್ರಾಮಸ್ಥರಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದ ಸ್ಥಳದಲ್ಲಿ ಅಪ್ಪು ಸೇರಿದಂತೆ ಡಾ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ಬೃಹತ್ ಪ್ಲೆಕ್ಸ್ ನಿರ್ಮಾಣ ಮಾಡಲಾಗಿತ್ತು.ಪ್ರತಿ ಮನೆಯಿಂದ ಚಂದ ವಸೂಲಿ ಮಾಡಿ ಮನೆಯ ಮಗನಿಗೆ ನೀಡಿದಂತೆ ಪ್ರೀತಿ ಗೌರವ ಗಳೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವಶೆಟ್ಟಿ ಮಾತನಾಡಿ ಗ್ರಾಮದಲ್ಲಿ ನಮ್ಮ ಸಮಾಜದ 2000 ಜನಸಂಖ್ಯೆಯಿದ್ದು ಎಲ್ಲರೂ ಒಗ್ಗಟ್ಟಾಗಿ ಕಾರ್ಯಕ್ರಮವನ್ನು ನೆರವೇರಿಸಿದ್ದೇವೆ ಎಂದು ಕಾರ್ಯಕ್ರಮದ ಬಗ್ಗೆ ತಿಳಿಸಿ ಸರ್ಕಾರ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಪದ್ಮಶ್ರೀ ಹಾಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕಾಳಮ್ಮ ಮಾಜಿ ಸದಸ್ಯ ರಮೇಶ್ ಮುಖಂಡರಾದ ಸಿದ್ದರಾಜು ಸುರೇಶ್ ,ಮಹಿಳೆಯರು ಸೇರಿದಂತೆ ಇಡೀ ಗ್ರಾಮವೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.