ದಸರಾ ಆನೆ ಮಾವುತ ಕಾವಾಡಿ ಮಕ್ಕಳಿಗೆ ಟೀ ಶರ್ಟ್, ದಿನ ಬಳಕೆಯ ವಸ್ತುಗಳು, ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಆಟದ ವಸ್ತುಗಳನ್ನು ವಿತರಿಸಿದ ಶಾಸಕ ಅನಿಲ್ ಚಿಕ್ಕಮಾದು, ಕೆ.ವಿ. ಪ್ರಭಾಕರ್

ನಂದಿನಿ ಮನುಪ್ರಸಾದ್ ನಾಯಕ್

 

ಮೈಸೂರಿನ ಅರಮನೆ ಆವರಣದ ದಸರಾ ಗಜಪಡೆಗಳ ಕ್ಯಾಂಪ್ ನಲ್ಲಿ ಇಂದು ಸಂಭ್ರಮದ ವಾತಾವರಣ.


ಗಜಪಡೆಗಳ ಮಾವುತರು, ಕಾವಾಡಿಗಳು ಮತ್ತವರ ಕುಟುಂಬದವರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಮಾವುತರು, ಕಾವಾಡಿಗಳನ್ನು ಒಂದೆಡೆ ಸೇರಿಸಿ ಅವರಿಗೆ ಟೀ ಶರ್ಟ್, ದಿನ ಬಳಕೆಯ ವಸ್ತುಗಳು, ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಆಟದ ವಸ್ತುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಅಲ್ಲಿ ಆಯೋಜಿಸಲಾಗಿತ್ತು.

ಜಂಗಲ್ ಲಾಡ್ಜಸ್ ಅಧ್ಯಕ್ಷ, ಶಾಸಕ ಅನಿಲ್ ಚಿಕ್ಕಮಾದು ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಈ ಅಪರೂಪದ ಕಾರ್ಯಕ್ರಮದ ರೂವಾರಿಗಳಾಗಿದ್ದರು.

ಮಾವುತರು ಮತ್ತು ಕಾವಾಡಿಗಳ ಕುಟುಂಬಗಳ ಜೊತೆ ಅವರು ಬೆರೆತು ಸಂತಸದ ಕ್ಷಣಗಳನ್ನು ಕಳೆದರು.

ಇದರ ಜೊತೆಗೆ ಲಲಿತ್ ಮಹಲ್ ಅರಮನೆಯಲ್ಲಿ ಮಾವುತರು, ಕಾವಾಡಿಗಳ ಕುಟುಂಬದವರಿಗೆ ಭೋಜನ ವ್ಯವಸ್ಥೆ ಮಾಡಿಸಿದ್ದು ಮತ್ತೊಂದು ವಿಶೇಷ.

ಕಾಡಿನ ಮಕ್ಕಳ ಜೊತೆ ಅನಿಲ್ ಚಿಕ್ಕಮಾದು, ಪ್ರಭಾಕರ್ ಮತ್ತವರ ಕುಟುಂಬ ಸದಸ್ಯರು, ಗೆಳೆಯರ ಬಳಗ ಎಲ್ಲರೂ ಬೆರೆತು ಇಡೀ ದಿನ ಕಳೆದದ್ದು ಇನ್ನೊಂದು ವಿಶೇಷವಾಗಿತ್ತು.

9 ಡ್ರೀಮ್ಸ್ ಸಂಸ್ಥೆಯ ಮಂಜುನಾಥ್, ಆನಂದ್ , ರಘು, ಬೈಪಾಸ್ ಮಂಜು, ಗಡಿ ಎಕ್ಸ್‌ಪ್ರೆಸ್‌ ನಾಗರಾಜ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾದರು.

Leave a Reply

Your email address will not be published. Required fields are marked *