ನಂದಿನಿ ಮನುಪ್ರಸಾದ್ ನಾಯಕ್
*ಹೆಚ್.ಡಿ.ಕೋಟೆ ಯಲ್ಲಿ ತಾಲ್ಲೂಕು ಮಟ್ಟದ ಆಶಾ ಕುಂದು ಕೊರತೆ ಸಭೆ*

ಇಂದು ಹೆಚ್.ಡಿ.ಕೋಟೆ ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ,ಮಾನ್ಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿಗಳಾದ ರವಿ ಚಂದ್ರ,ತಾಲ್ಲೂಕು ನೋಡಲ್ ಅಧಿಕಾರಿಗಳಾದ ಡಾ” ಬೃಂದಾ ರವರ ಅಧ್ಯಕ್ಷತೆಯಲ್ಲಿ, ಆಶಾ ಕಾರ್ಯಕರ್ತರ ಕುಂದು ಕೊರತೆ ಸಭೆಯನ್ನು ಆಯೋಜಿಸಲಾಯಿತು.
ಈ ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ”ರವಿಕುಮಾರ್ ರವರು ಮಾತನಾಡಿ , ಕಳೆದ ಸಭೆಯಲ್ಲಿ ಕೇಳಿದಂತೆ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಆಶಾ ಕಾರ್ಯಕರ್ತರಿಗೆ ರಾತ್ರಿ ವೇಳೆ ಉಳಿದುಕೊಳ್ಳಲು ಕೊಠಡಿ ವ್ಯವಸ್ಥೆ ಮಾಡಲಾಯಿತು .ವೇತನದ ಬಗ್ಗೆ ಕ್ರಮವಹಿಸಿ ಜೂನ್ ತಿಂಗಳವರೆಗೂ ವೇತನ ಖಾತೆಗೆ ಜಮಾ ಆಗಿರುತ್ತದೆ.
ಏನೇ ಸಮಸ್ಯೆ ಬಂದರೂ ಕೂಡಲೇ ನನ್ನ ಗಮನಕ್ಕೆ ಬಂದರೆ ಕೂಡಲೇ ಪರಿಹಾರ ಮಾಡುತ್ತೇನೆ ಎಂದು ತಿಳಿಸಿದರು
ಆಶಾ ಕಾರ್ಯಕರ್ತರ ಅಧ್ಯಕ್ಷರಾದ ಭಾಗ್ಯ ರವರು ಮಾತನಾಡಿ, ಎಲ್ಲಾ ಆಶಾ ಕಾರ್ಯಕರ್ತರಿಗೂ ಮೊಬೈಲ್ ಫೋನನ್ನು ಕೊಡಿಸಬೇಕು, ಪ್ರತಿ ತಿಂಗಳು ಕಡ್ಡಾಯವಾಗಿ ಸಂಬಳವನ್ನು ನೀಡಬೇಕು,ಮತ್ತು ಎಲ್ಲಾ ಆಶಾ ಕಾರ್ಯಕರ್ತರಿಗೂ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆಶಾ ಕಾರ್ಯಕರ್ತಯರಿಗೆ ನೋಟ್ ಬುಕ್ ಮತ್ತು ವರದಿ ನಮೂನೆಗಳನ್ನು ನೀಡಬೇಕು, ಎಂದು ತಿಳಿಸಿದರು.
ತಾಲ್ಲೂಕು ನೋಡಲ್ ಅಧಿಕಾರಿಗಳಾದ ಡಾ” ಬೃಂದಾ ರವರು ಮಾತನಾಡಿ ಪ್ರತಿ ಮೂರು ತಿಂಗಳ ಒಮ್ಮೆ ನಾವು ಆಶಾ ಕಾರ್ಯಕರ್ತರ ಕುಂದು ಕೊರತೆ ಸಭೆಯನ್ನು ಮಾಡುತ್ತಿವೆ,ಯಾವುದೇ ಸಮಸ್ಯೆಗಳು ಇದ್ದರೆ, ಇಲ್ಲೇ ಬಗೆಹರಿಸೋಣ ನಾವು ನಿಮ್ಮ ಜೊತೆಗೆ ಇದ್ದೇವೆ ಮತ್ತು ಆಶಾ ಕಾರ್ಯಕರ್ತರಿಗೆ ಮೊಬೈಲ್ ವಿತರಣೆ ಮಾಡುವ ಬಗ್ಗೆ ನಮಗೆ ಯಾವುದೇ ಆದೇಶ ಬಂದಿರುವುದಿಲ್ಲ ಮುಂದಿನ ದಿನಗಳಲ್ಲಿ ಆದೇಶ ಬಂದರೆ ಖಂಡಿತವಾಗಿ ಕೊಡಿಸುತ್ತೇವೆ, ಎಲ್ಲರೂ ಒಗ್ಗಟ್ಟಾಗಿ ಕರ್ತವ್ಯ ನಿರ್ವಹಿಸೋಣ ನಮ್ಮ ತಾಲೂಕಿಗೆ ಒಳ್ಳೆಯ ಹೆಸರನ್ನು ತರುಣ ಎಂದು ತಿಳಿಸಿದರು,
ಈ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸರಗೂರು ಮುಖ್ಯ ಅಧಿಕಾರಿ ಸಂತೋಷ್ ಕುಮಾರ್, ಸಿಡಿಪಿಒ ದೀಪ, ವೈದ್ಯಾಧಿಕಾರಿಗಳಾದ ಡಾ”ಪಾರ್ಥಿಸಾರಥಿ, ಡಾ,ಶೇಷಾದ್ರಿ , ಡಾ,ವೀಣಾ , ಡಾ,ಚಂದ್ರ ಕಲಾ,ಡಾ,ರೋಹನ್, ಡಾ,ಅಖಿಲ,ಡಾ,ವರ್ಷ, ಡಾ,ಬೃಂದಾ, ಜಿಲ್ಲಾ ಮಟ್ಟದ ಆಶಾ ಮೇಲ್ವಿಚಾರಕರಾದ ಪ್ರಿಯಾಂಕ,ರಂಜಿತಾ,,ತಾಲ್ಲೂಕು , ಮೇಲ್ವಿಚಾರಕರಾದ ಶರಣಪ್ಪ, ,ಅರ್ಚನಾ ,ರೇಖಾ,ರವಿರಾಜ್, ಅಶೋಕ್, ಆಶಾ ಕಾರ್ಯಕರ್ತರು, ಹಾಜರಿದ್ದರು.