ನಾಮಫಲಕಕ್ಕೆ ಅಡ್ಡಲಾಗಿ ಅಳವಡಿಸಲಾಗಿದ್ದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿ ನಿಲಯ ನಾಮಫಲಕ ತೆರವು

ನಂದಿನಿ ಮನುಪ್ರಸಾದ್ ನಾಯಕ್

ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 21 ರ ವ್ಯಾಪ್ತಿಯ ಸರಸ್ವತಿ ಪುರಂ ಪೊಲೀಸ್ ಠಾಣೆಯ ಎದುರು ಇರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ ಬಾಲಕಿಯರ ವಿದ್ಯಾರ್ಥಿ ನಿಲಯದ ನಾಮಫಲಕಕ್ಕೆ ಅಡ್ಡಲಾಗಿ ಅಳವಡಿಸಲಾಗಿದ್ದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿ ನಿಲಯ ನಾಮಫಲಕವನ್ನು ತೆರವುಗೊಳಿಸಿ ಪಕ್ಕಕ್ಕೆ ಸ್ಥಳಾಂತರಿಸಲು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಂಬಂಧಪಟ್ಟ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಲಾಯಿತು.


ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಿಬ್ಬಂದಿಗಳು ನಾಮಫಲಕವನ್ನು ತೆರವುಗೊಳಿಸಿ ಸ್ಥಳಾಂತರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ದಿನೇಶ್ ಗೌಡ, ಮಹೇಶ್, ಸುರೇಶ್, ಶ್ರೀನಿವಾಸ್, ಹರೀಶ್, ನಾಣಿಗೌಡ, ಕಾರ್ತಿಕ್, ಲಕ್ಷ್ಮೀಶ್, ರಾಜು ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *