ನಂದಿನಿ ಮನುಪ್ರಸಾದ್ ನಾಯಕ್
ಮೈಸೂರಿನಲ್ಲಿ ಮೂರನೇ ಎಕ್ಸ್ ಪೀರಿಯನ್ಸ್ ಸೆಂಟರ್ ಉದ್ಘಾಟಿಸುವ ಮೂಲಕ ಕರ್ನಾಟಕದಾದ್ಯಂತ ತನ್ನ ಉಪಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡ ಅಲ್ಟ್ರಾವೈಲೆಟ್
• ಅಲ್ಟ್ರಾವೈಲೆಟ್ ನ ಎಕ್ಸ್-47, ಎಫ್77 ಸೂಪರ್‌ಸ್ಟ್ರೀಟ್ ಮತ್ತು ಎಫ್77 ಮ್ಯಾಚ್2 ವಾಹನಗಳು ಈಗ ಮೈಸೂರಿನಲ್ಲಿ ಮಾರಾಟಕ್ಕೆ ಲಭ್ಯ.
• ಮೈಸೂರಿನಲ್ಲಿ ಯುವಿ ಸ್ಪೇಸ್ ಸ್ಟೇಷನ್ ಆರಂಭಿಸುವ ಮೂಲಕ ಅಲ್ಟ್ರಾವೈಲೆಟ್ ಸಂಸ್ಥೆಯು ತನ್ನ ಉಪಸ್ಥಿತಿಯನ್ನು ವಿಸ್ತರಿಸಿಕೊಂಡಿದ್ದು, ದೇಶಾದ್ಯಂತ 26 ನಗರಗಳಿಗೆ ತನ್ನ ಉಪಸ್ಥಿತಿ ಹೆಚ್ಚಿಸಿಕೊಂಡಿದೆ.
• ಗ್ರಾಹಕರಿಗೆ ಲಭ್ಯತೆ: ಗ್ರಾಹಕರಿಗೆ ಅವರ ಸಂಪೂರ್ಣ ಅಗತ್ಯಗಳಿಗೆ ತಕ್ಕಂತೆ ಉತ್ಪನ್ನ ಮತ್ತು ಸೇವೆ ಒದಗಿಸುವ ಮೂಲಕ ಉತ್ಸಾಹಿಗಳಿಗೆ ಅಪೂರ್ವ ಅನುಭವವನ್ನು ಒದಗಿಸುತ್ತದೆ.
• ವೈಯಕ್ತಿಕ ಟೆಸ್ಟ್ ರೈಡ್ ಗಳು ಮತ್ತು ಸೇವೆ: ಎಕ್ಸ್ ಪೀರಿಯನ್ಸ್ ಸೆಂಟರ್ ವೈಯಕ್ತೀಕರಿಸಿದ ಟೆಸ್ಟ್ ರೈಡ್ ಅವಕಾಶಗಳು, ಅತ್ಯುತ್ತಮ ಸೇವಾ ನೆರವು ಮತ್ತು ಒರಿಜಿನಲ್ ಬಿಡಿಭಾಗಗಳನ್ನು ಒದಗಿಸುತ್ತದೆ.
ಮೈಸೂರು, ಅಕ್ಟೋಬರ್ 10, 2025- ಇತ್ತೀಚೆಗೆ ಯುರೋಪಿನಲ್ಲಿ ಕಾರ್ಯಾರಂಭ ಮಾಡಿರುವ ಪ್ರತಿಷ್ಠಿತ ಸಂಸ್ಥೆ ಅಲ್ಟ್ರಾವೈಲೆಟ್ ಕಂಪನಿಯು ಇದೀಗ ಮೈಸೂರಿನಲ್ಲಿ ಹೊಸ ಅತ್ಯಾಧುನಿಕ ಎಕ್ಸ್ ಪೀರಿಯನ್ಸ್ ಸೆಂಟರ್‌ನ ಉದ್ಘಾಟನೆ ಮಾಡಿದ್ದು, ಈ ಮೂಲಕ ಭಾರತದಲ್ಲಿ ತನ್ನ ಉಪಸ್ಥಿತಿ ವಿಸ್ತರಣಾ ಕಾರ್ಯವನ್ನು ಮುಂದುವರೆಸಿದೆ.
ಈ ಹೊಸ ಎಕ್ಸ್ ಪೀರಿಯನ್ಸ್ ಸೆಂಟರ್ ಭಾರತದಲ್ಲಿ ಅಲ್ಟ್ರಾವೈಲೆಟ್ ಕಂಪನಿಯು ಸಾಧಿಸುತ್ತಿರುವ ನಿರಂತರ ಬೆಳವಣಿಗೆಯನ್ನು ತೋರಿಸುತ್ತದೆ ಮತ್ತು ದೇಶಾದ್ಯಂತ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಮತ್ತು ಸುಸ್ಥಿರ ಎಲೆಕ್ಟ್ರಿಕ್ ಟೂ- ವೀಲರ್‌ಗಳನ್ನು ಒದಗಿಸುವ ಅದರ ಬದ್ಧತೆಯನ್ನು ಬಲಪಡಿಸುತ್ತದೆ.
ಇಶ್ವಾ ಮೋಟರ್ಸ್ ಜೊತೆಗಿನ ಪಾಲುದಾರಿಕೆಯಲ್ಲಿ ಈ ಹೊಸ ಯುವಿ ಸ್ಪೇಸ್ ಸ್ಟೇಷನ್ ಅನ್ನು ಸ್ಥಾಪಿಸಲಾಗಿದ್ದು, ಈ ಮಳಿಗೆಯು ಗ್ರಾಹಕರಿಗೆ ಅಲ್ಟ್ರಾವೈಲೆಟ್ ನ ಮೋಟಾರ್ ಸೈಕಲ್ ಗಳಾದ ಎಕ್ಸ್-47, ಎಫ್77 ಮ್ಯಾಚ್2 ಮತ್ತು ಎಫ್77 ಸೂಪರ್ ಸ್ಟ್ರೀಟ್ ಗಳನ್ನು ನೋಡಲು, ತಿಳಿಯಲು ಅನುವು ಮಾಡಿಕೊಡಲಿದೆ ಮತ್ತು ಅದ್ಭುತ ಅನುಭವವನ್ನು ಒದಗಿಸಲಿದೆ. ಯುವಿ ಸ್ಪೇಸ್ ಸ್ಟೇಷನ್ ಒಂದು 3ಎಸ್ ಘಟಕವಾಗಿದ್ದು, ಅತ್ಯುತ್ತಮ ಅನುಭವ ಒದಗಿಸಲು ವಿನ್ಯಾಸಗೊಂಡಿದೆ. ಇಲ್ಲಿ ಟೆಸ್ಟ್ ರೈಡ್ ಅವಕಾಶ ಹೊಂದುವುದರಿಂದ ಹಿಡಿದು ಮಾರಾಟ, ಸೇವೆ ಮತ್ತು ಮೋಟಾರ್ ಸೈಕಲ್ ಆಕ್ಸೆಸರೀಸ್ ಗಳ ಶ್ರೇಣಿಯ ಮಾರಾಟದವರೆಗೆ ಎಲ್ಲಾ ಸೇವೆಗಳು ಒಂದೆಡೆ ಲಭ್ಯವಾಗಲಿದೆ.
ಇತ್ತೀಚೆಗೆ ಬಿಡುಗಡೆಗೊಂಡ ಅಲ್ಟ್ರಾವೈಲೆಟ್ ನ ಹೊಸ ವಾಹನವಾದ ಎಕ್ಸ್-47 ಕ್ರಾಸ್‌ಓವರ್, ಕ್ಯಾಮೆರಾ ಮತ್ತು ರೇಡಾರ್ ಒಳಗೊಂಡ ವಾಣಿಜ್ಯಿಕವಾಗಿ ಆರಂಭವಾದ ವಿಶ್ವದ ಮೊದಲ ಮೋಟಾರ್ ಸೈಕಲ್ ಎಂಬ ಹೆಗ್ಗಳಿಕೆ ಗಳಿಸಿದೆ. ಈ ವಾಹನವು ವಿಶ್ವದ ಅತ್ಯಂತ ಶಕ್ತಿಯುತ ಆನ್ ಬೋರ್ಡ್ ಚಾರ್ಜರ್ ಅನ್ನು ಕೂಡ ಪರಿಚಯಿಸಿದ್ದು, ಈ ಚಾರ್ಜರ್ ಏರ್ ಕೂಲ್ಡ್ ಆಗಿದ್ದು, ಇದನ್ನು ಸಂಪೂರ್ಣವಾಗಿ ಅಲ್ಟ್ರಾವೈಲೆಟ್ ಸಂಸ್ಥೆಯೇ ವಿನ್ಯಾಸಗೊಳಿಸಿದೆ ಮತ್ತು ಎಂಜಿನಿಯರಿಂಗ್ ಮಾಡಿದೆ. ಎಕ್ಸ್-47 ಎರಡೂ ಡಿಸಿ ಫಾಸ್ಟ್ ಚಾರ್ಜಿಂಗ್ (ಟೈಪ್ 6) ಮತ್ತು ಏಸಿ ಕಾರ್ ಚಾರ್ಜಿಂಗ್ (ಟೈಪ್ 2) ಅನ್ನು ಸಪೋರ್ಟ್ ಮಾಡುತ್ತದೆ. ಎಕ್ಸ್-47 323 ಕಿಮೀ ಐಡಿಸಿ ರೇಂಜ್, 10.3 ಕೆಡಬ್ಲ್ಯೂಎಚ್ ಬ್ಯಾಟರಿ ಪ್ಯಾಕ್, 200 ಮಿಮೀ ಗ್ರೌಂಡ್ ಕ್ಲಿಯರನ್ಸ್, 10ನೇ ತಲೆಮಾರಿನ ಬಾಷ್ ಸ್ವಿಚೇಬಲ್ ಡ್ಯುಯಲ್ ಚಾನಲ್ ಎಬಿಎಸ್, ಉದ್ಯಮದ ಮೊದಲ ರೇಡಿಯಲ್ ಆಲ್- ಟೆರೈನ್ ಟೈರ್ ಗಳು ಮತ್ತು ಟೈಪ್- ಸಿ ಮೊಬೈಲ್ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ. ಎಕ್ಸ್-47 ಕ್ರಾಸ್ ಓವರ್ ಬುಕಿಂಗ್ ಮಾಡುವವರು ಅಲ್ಟ್ರಾವೈಲೆಟ್ ವೆಬ್ ಸೈಟ್ ನಲ್ಲಿ (www.ultraviolette.com) ಮಾಡಬಹುದಾಗಿದ್ದು, ಈ ತಿಂಗಳಿನಿಂದ ಡೆಲಿವರಿಗಳು ಆರಂಭವಾಗಲಿವೆ.
ಎಫ್77 ಮೋಟಾರ್ ಸೈಕಲ್ 40.2 ಎಚ್ ಪಿ ಮತ್ತು 100 ಎನ್ಎಂ ಟಾರ್ಕ್ ನೊಂದಿಗೆ ಎಲೆಕ್ಟ್ರಿಕ್ ಕಾರ್ಯಕ್ಷಮತೆಯನ್ನು ಪುನರ್ ರೂಪಿಸಿದ್ದು, ಕೇವಲ 2.8 ಸೆಕೆಂಡ್ ಗಳಲ್ಲಿ ಗಂಟೆಗೆ 0-60 ಕಿಮೀ ವೇಗವನ್ನು ತಲುಪುತ್ತವೆ. 10.3 ಕೆಡಬ್ಲ್ಯೂಎಚ್ ಬ್ಯಾಟರಿ ಹೊಂದಿದ್ದು, ಇದು ಒಂದೇ ಚಾರ್ಜ್‌ನಲ್ಲಿ 323 ಕಿಮೀ ಐಡಿಸಿ ರೇಂಜ್ ಅನ್ನು ಒದಗಿಸುತ್ತದೆ.
ಹೊಸ ಮಳಿಗೆ ಉದ್ಘಾಟನೆ ಕುರಿತು ಮಾತನಾಡಿರುವ ಅಲ್ಟ್ರಾವೈಲೆಟ್ ನ ಸಿಇಓ ಮತ್ತು ಸಹ-ಸಂಸ್ಥಾಪಕ ನಾರಾಯಣ ಸುಬ್ರಮಣಿಯಂ ಅವರು, “ಶ್ರೀಮಂತ ಸಂಪ್ರದಾಯ ಮತ್ತು ಅದ್ಭುತ ಪ್ರಗತಿಪರ ನಿಲುವು ಹೊಂದಿರುವ ಸುಂದರ ನಗರ ಮೈಸೂರು ನಗರದಲ್ಲಿ ಅಲ್ಟ್ರಾವೈಲೆಟ್ ನ ಹೊಸ ಸ್ಪೇಸ್ ಸ್ಟೇಷನ್ ಅನ್ನು ಉದ್ಘಾಟಿಸಲು ನಾವು ಹೆಮ್ಮೆಪಡುತ್ತೇವೆ. ಸಾಂಸ್ಕೃತಿಕ ರಾಜಧಾನಿಯಾಗಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ನಗರ ಕೇಂದ್ರವಾಗಿ ಮೈಸೂರು ಸುಸ್ಥಿರ ಸಾರಿಗೆ ಅಳವಡಿಸಿಕೊಳ್ಳುವ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಮೈಸೂರು ಭವಿಷ್ಯ ಕೇಂದ್ರಿತ ನಗರವಾಗಿ ಹೊರಹೊಮ್ಮಿದ್ದು, ನಮ್ಮ ಉಪಸ್ಥಿತಿ ವಿಸ್ತರಣೆಗೆ ಇದು ಉತ್ತಮ ಮತ್ತು ಸಹಜ ಆಯ್ಕೆಯಾಗಿದೆ. ಈ ಎಕ್ಸ್ ಪೀರಿಯನ್ಸ್ ಸೆಂಟರ್ ಮೂಲಕ ನಾವು ಇತ್ತೀಚೆಗೆ ಬಿಡುಗಡೆಯಾದ ಎಕ್ಸ್-47 ಮತ್ತು ಜನಪ್ರಿಯ ಎಫ್77 ಮೋಟಾರ್ ಸೈಕಲ್ ಗಳನ್ನು ಒದಗಿಸುವುದರಿಂದ ಹಿಡಿದು ಅತ್ಯುತ್ತಮ ಬ್ರ್ಯಾಂಡ್ ಅನುಭವ ಒದಗಿಸುತ್ತೇವೆ. ಜೊತೆಗೆ ಸೇವಾ ಸಹಾಯ ಒದಗಿಸುವುದನ್ನೂ ಸೇರಿದಂತೆ ಸಂಪೂರ್ಣ ಅಲ್ಟ್ರಾವೈಲೆಟ್ ಇಕೋಸಿಸ್ಟಮ್ ಅನ್ನು ಮೈಸೂರಿಗೆ ಪರಿಚಯಿಸುತ್ತಿದ್ದೇವೆ. ನಾವು ಈ ಮೂಲಕ ಕೇವಲ ನಮ್ಮ ರಾಷ್ಟ್ರೀಯ ಉಪಸ್ಥಿತಿಯನ್ನು ವಿಸ್ತರಿಸುವುದು ಮಾತ್ರವೇ ಅಲ್ಲ, ಜೊತೆಗೆ ದೇಶಾದ್ಯಂತ ಸುಸ್ಥಿರ, ಭವಿಷ್ಯ ಕೇಂದ್ರಿತ ಮತ್ತು ಪ್ರಗತಿಪರ ಎಲೆಕ್ಟ್ರಿಕ್ ಸಾರಿಗೆ ಯುಗವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತಿದ್ದೇವೆ” ಎಂದು ಹೇಳಿದರು.
ಅಲ್ಟ್ರಾವೈಲೆಟ್ ತನ್ನ ಉತ್ಪನ್ನಗಳನ್ನು ಸತತವಾಗಿ ಸಂಸ್ಕರಿಸುವ ಮೂಲಕ ಹೊಸತನವನ್ನು ನೀಡುತ್ತಿದೆ. ಇದರ ಇತ್ತೀಚಿನ ಆವಿಷ್ಕಾರವಾದ ‘ಜೆನ್3 ಪವರ್ ಟ್ರೇನ್ ಫರ್ಮ್ ವೇರ್’ ಮತ್ತು ‘ಬ್ಯಾಲಿಸ್ಟಿಕ್+’ ಗಳು ಅತ್ಯುನ್ನತ ಕಾರ್ಯಕ್ಷಮತೆ ಒದಗಿಸಲಿದ್ದು, ಎಲೆಕ್ಟ್ರಿಕ್ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಆವಿಷ್ಕಾರವಾಗಿ ಹೊರಹೊಮ್ಮಿದೆ. ಇದು ಈಗಾಗಲೇ ಇರುವ ಮತ್ತು ಹೊಸ ಎಫ್77 ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ಲಭ್ಯವಿದೆ. ಎಫ್77 ಮೋಟಾರ್ ಸೈಕಲ್ ಗಳು ಈಗ ಅತ್ಯುತ್ತಮ ಪ್ರತಿಕ್ರಿಯೆ, ತ್ವರಿತ ವೇಗವರ್ಧನೆ ಮತ್ತು ವೇಗವಾದ ಆರಂಭವನ್ನು ಒದಗಿಸುತ್ತವೆ. 2024 ರಲ್ಲಿ, ಎಫ್77 ಬಿಡುಗಡೆಯಾದ ಮೊದಲ ಹಂತವು ಟ್ರಾಕ್ಷನ್ ಕಂಟ್ರೋಲ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಯು ವಿ ಡಿ ಎಸ್ ಸಿ), 10 ಹಂತದ ರಿಜನರೇಟಿವ್ ಬ್ರೇಕಿಂಗ್, ಹಿಲ್- ಹೋಲ್ಡ್ ಅಸಿಸ್ಟ್, ವೈಲೆಟ್ ಎ.ಐ., ಮತ್ತು ಇನ್ನೂ ಹಲವಾರು ಸುರಕ್ಷತಾ ಫೀಚರ್ ಗಳನ್ನು ಒದಗಿಸಿತ್ತು.
ಈ ವರ್ಷದ ಆರಂಭದಲ್ಲಿ ಅಲ್ಟ್ರಾವೈಲೆಟ್ ಬಿಡುಗಡೆ ಮಾಡಿದ ತನ್ನ ಎರಡು ಹೊಸ ಉತ್ಪನ್ನಗಳಲ್ಲಿ ಒಂದಾದ, ವಿಶ್ವದ ಅತ್ಯಂತ ಸುಧಾರಿತ ಎಲೆಕ್ಟ್ರಿಕ್ ಸ್ಕೂಟರ್ ‘ಟೆಸ್ಸೆರಾಕ್ಟ್’, ವಿಭಾಗದಲ್ಲಿಯೇ ಮೊದಲ ಬಾರಿಗೆ ರೇಡಾರ್ ಮತ್ತು ಡ್ಯಾಶ್ ಕ್ಯಾಮ್, ಓಮ್ನಿಸೆನ್ಸ್ ಕನ್ನಡಿಗಳನ್ನು ಹೊಂದಿದೆ. ಜೊತೆಗೆ, ರೋಮಾಂಚಕ ರೈಡಿಂಗ್ ಅನುಭವವನ್ನು ಬಯಸುವ ರೈಡರ್ ಗಳ ಬೇಡಿಕೆಗಳನ್ನು ಪೂರೈಸಲು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾದ ಮತ್ತು ಎಂಜಿನಿಯರಿಂಗ್ ಮಾಡಲಾದ ‘ಶಾಕ್‌ವೇವ್’ ಬಿಡುಗಡೆಯಾಗಿದ್ದು, ಈ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಗೆ ಅದ್ಭುತ ಪ್ರತಿಕ್ರಿಯೆ ದೊರೆತಿದೆ.
ಮೈಸೂರಿನ ಯುವಿ ಸ್ಪೇಸ್ ಸ್ಟೇಷನ್ ನ ವಿಳಾಸ: ಅಸೆಟ್ ನಂ. 1066, ಹೊಸ ಸಂಖ್ಯೆ ಕೆ-5, ವಾಣಿವಿಲಾಸ ರಸ್ತೆ, ಕೆಆರ್ ಮೊಹಲ್ಲಾ, ಮೈಸೂರು- 570002.