ಮೈಸೂರು:4 ಅಕ್ಟೋಬರ್ 2021
ನ@ದಿನಿ
ಪ್ರದಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನದ ಸೇವಾ ಸಮರ್ಪಣೆ ಅಂಗವಾಗಿ ವಾರ್ಡ್ ನಂ 55ರಲ್ಲಿ ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಅವರ ನೇತೃತ್ವದಲ್ಲಿ ಇಂದು ಚಾಮುಂಡಿಪುರಂ 6ನೇ ಕ್ರಾಸ್ ನಲ್ಲಿರುವ ಅರುಣೋದಯ ವಿಶೇಷ ಮಕ್ಕಳ ಶಾಲೆಯಲ್ಲಿ ವಿಶೇಷ ಮಕ್ಕಳಿಗೆ ಔಷಧಿ ಹಾಗೂ ಸಮವಸ್ತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶ್ರೀವತ್ಸರವರು ಮಾತನಾಡಿ ಮೋದಿಯವರು ಅಭಿವೃದ್ಧಿಯ ಹರಿಕಾರರಾಗಿದ್ದು ಬಡವರ ಬಗ್ಗೆ , ರೈತರ ಬಗ್ಗೆ, ಕೂಲಿ ಕಾರ್ಮಿಕರ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದು, ಕರೋನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಆಟೋರಿಕ್ಷಾ ಓಡಿಸುವವರಿಗೆ, ಟೈಲರ್ ಗಳಿಗೆ, ಸವಿತಾ ಸಮಾಜದವರಿಗೆ, ಅಡುಗೆ ಕೆಲಸದವರಿಗೆ, ಕಟ್ಟಡ ಕಾರ್ಮಿಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಇನ್ನೂ ಮುಂತಾದವರಿಗೆ ಆರ್ಥಿಕವಾಗಿ ಸಹಾಯ ಮಾಡಿ, ಕರೋನಾದಿಂದ ಮಡಿದವರ ಕುಟುಂಬಕ್ಕೆ ರಾಜ್ಯ ಸರ್ಕಾರ 1ಲಕ್ಷ ಕೇಂದ್ರ ಸರ್ಕಾರ ಐವತ್ತು ಸಾವಿರ ಕೊಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು, ಈ ಕಾರ್ಯಕ್ರಮ ದೇಶಾದ್ಯಂತ ನಡೆಯುತ್ತಿದ್ದು, ಸೇವಾ ಮತ್ತು ಸಮರ್ಪಣಾ ಕಾರ್ಯಕ್ರಮ ಮಾಡಲಾಗುತ್ತಿದ್ದು , ಈ ಕಾರ್ಯಕ್ರಮಗಳು ಮಾನ್ಯ ಪ್ರಧಾನಮಂತ್ರಿಗಳು ಇನ್ನಷ್ಟು ಕೈಬಲಪಡಿಸಿದಂತಾಗುತ್ತದೆ ಎಂದು ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಗಿರಿಧರ್, ವಾಣೀಶ್, ಉಪಾಧ್ಯಕ್ಷರಾದ ರಘು ಅರಸ್, ಮುಖಂಡರಾದ ಸಿ ಸಂದೀಪ್, ಮಂಜುಳಾ, ಪ್ರಭಾ, ಹರ್ಷ, ಅದ್ವೈತ, ಧರ್ಮೇಂದ್ರ, ಸೋಮೇಶ್, ಶ್ರೀಕಂಠ, ಬಾಲಚಂದ್ರ, ರವಿ, ತೀರ್ಥ, ದೇವೇಂದ್ರ ಸ್ವಾಮಿ, ವಿನಯ್, ಸೂರ್ಯ, ಪಾಪಣ್ಣ, ಪ್ರಭಾಕರ್ ಮುಂತಾದವರು ಹಾಜರಿದ್ದರು.