ನಂದಿನಿ ಮೈಸೂರು
ತೃತೀಯ ಲಿಂಗಿಗಳಿಗೆ ಅನುಕೂಲಕ್ಕಾಗಿ 7 ರೈನ್ಬೋಸ್ ಸಂಸ್ಥೆ ಸ್ಥಾಪಿಸಿರುವುದಾಗಿ
ಸಂಘಟನೆ ಅಧ್ಯಕ್ಷರಾದ ಪ್ರಣತಿ ಪ್ರಕಾಶ್ ತಿಳಿಸಿದರು.
ಈ ಹಿಂದೆ ತೃತೀಯ ಲಿಂಗಿಯರಿಗಾಗಿ ಆಶೋದಯ ಸಂಸ್ಥೆ ಇತ್ತು.ಈ ಸಂಸ್ಥೆ ಕಾರ್ಯಸ್ಥಗಿತಗೊಂಡು ನಿಷ್ಕ್ರಿಯವಾಗಿದೆ.
ತೃತೀಯ ಲಿಂಗಿಗಳನ್ನು ಸಮಾಜ ಕಟ್ಟ ಕಡೆಯ ಸ್ಥಾನದಲ್ಲಿಟ್ಟಿದೆ. ಆಗುತ್ತಿರುವ ಶೋಷಣೆಯನ್ನು ಯಾರೂ ಪ್ರಶ್ನಿಸುತ್ತಿಲ್ಲ. ನಮ್ಮ ಭದ್ರತೆ, ರಕ್ಷಣೆ ನಾವೇ ಮಾಡಿಕೊಳ್ಳಬೇಕಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳ ಅರಿವಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಶ್ರಮಿಸಲು ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ.
ನಗರದ ತೃತೀಯ ಲಿಂಗಿಗಳಿಗೆ ಯಾವುದೇ ಸಮಸ್ಯೆ ಎದುರಾದಲ್ಲಿ ಸಂಸ್ಥೆ ನೆರವಾಗಲಿದೆ. ಇನ್ನು, ಪೊಲೀಸರು ನಗರದಲ್ಲಿ ಭಿಕ್ಷಾಟನೆ ಮಾಡುವ ತೃತೀಯ ಲಿಂಗಿಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ತೃತೀಯ ಲಿಂಗಿಗಳಿಗೆ ಸರ್ಕಾರದಿಂದ ಬರುವ ಅನುದಾನ, ಸೌಲಭ್ಯಗಳನ್ನು ತಮ್ಮ ಸಂಸ್ಥೆಯ ಮೂಲಕವೇ ವಿತರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಕೆಲವರಿಂದ ಉಳಿದ ತೃತೀಯ ಲಿಂಗಿಗಳಿಗೂ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ ತಪ್ಪೆಸಗಿ ಠಾಣೆಗೆ ಹೋದವರಿಗೆ ತಮ್ಮ ಬೆಂಬಲವಿಲ್ಲ. ಅಡ್ಡದಾರಿ ಹಿಡಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ತಮ್ಮ ಅಭ್ಯಂತರವಿಲ್ಲ.ಕಳೆದ ಒಂದು ತಿಂಗಳಿಂದ ಮೈಸೂರಿನಲ್ಲಿ ತೃತಿಯಲಿಂಗಿಯರ ಮೇಲೆ ಹಲ್ಲೆಯಾಗುತ್ತಿದೆ.ದಯವಿಟ್ಟು ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಂಡು ನಮ್ಮನ್ನ ರಕ್ಷಿಸಿ ಎಂದು ಮನವಿ ಮಾಡಿದರು.