ಬೆಂಗಳೂರು:31 ಆಗಸ್ಟ್ 2021
ಕ್ರೈಂ ನ್ಯೂಸ್:ನ@ದಿನಿ
ಬಿಳಿ ಬಣ್ಣದ ಆಡಿ ಕ್ಯೂ ಕಾರು ಕ್ಷಣಾರ್ಧದಲ್ಲಿ ಕೆಂಪುಗಾಗಿತ್ತು. ರಾತ್ರಿ 8:30 ಕ್ಕೆ ಡಿನ್ನರ್ಗೆಂದು ಹೊರಟವರು ನಡು ರಾತ್ರಿ ಅಂತಿಮ ಪ್ರಯಾಣ ಮುಗಿಸಿದ್ರು.ಕತ್ತಲ ರಾತ್ರಿಯಲ್ಲಿ ನಡೆದ ಭಯಾನಕ ದೃಶ್ಯವನ್ನ ಸಿಸಿಟಿವಿ ಸೆರೆಹಿಡಿದಿತ್ತು.ಇನ್ನೂ ಕಾಲು ಭಾಗ ಜೀವನವನ್ನಷ್ಟೆ ಅನುಭವಿಸಿದ್ದ ಹದಿಹರೆಯದ ಏಳು ಜನ ಸ್ಪಾಟ್ ನಲ್ಲೆ ಉಸಿರು ಚೆಲ್ಲಿದ್ರು.
ಹೌದು
ಬೆಂಗಳೂರಲ್ಲಿ ನಡೆದ ಈ ನಡೆದ ಈ ಭೀಕರ ಅಪಘಾತ ಎಲ್ಲರನ್ನು ದಂಗು ಬಡಿಸಿದೆ..ಸೇಫೆಸ್ಟ್ ಕಾರು ಎನ್ನಿಸಿಕೊಂಡ ಆಡಿ ಯಲ್ಲಿ ಇದ್ದ ಏಳು ಮಂದಿ ಸ್ಥಳದಲ್ಲಿ ಸಾವನ್ನಪ್ಪಿದ್ರು.
ಹಾಗಾದ್ರೆ ಮಿಡ್ ನೈಟ್ ನಡೆದ ಅಪಘಾತಕ್ಕೆ ಕಾರಣ ಏನು.
ಇದು ಇಡೀ ಸಿಟಿ ಸೈಲೆಂಟ್ ಆಗಿದ್ದ ರಾತ್ರಿ 1:30 ಸಮಯ…ಕೋರಂಮಗಲದ ರಸ್ತೆಯಲ್ಲಿ ವಾಹನ ಸಂಚಾರ ವಿರಳ ವಾಗಿತ್ತು.ಆಗ 150 km ಸ್ಪೀಡಲ್ಲಿ ನುಗ್ಗಿ ಬಂದಿತ್ತು ಆಡಿ Q3 ಕಾರು..ವೇಗದ ಮಿತಿಗೆ ಬ್ರೇಕೆ ಹಾಕದೆ ಫುಟ್ ಪಾತ್ ಮೇಲೆ ಎಗರಿದ ಕಾರು ರಭಸದಿಂದ ಗೋಡೆಗೆ ಗುದ್ದಿ ಬಿಟ್ಟಿತ್ತು..
ಕಾರಲ್ಲಿ ಇದ್ದವರು ಹೊಸೂರು ಎಂ ಎಲ್ ಎ ಪ್ರಕಾಶ್ ಪುತ್ರ ಕರುಣಾ ಸಾಗರ್,ಹುಬ್ಬಳ್ಳಿಯ ರೋಹಿತ್,ಕೇರಳದ ಅಕ್ಷಯ್ ಗೋಯಲ್, ಹರಿಯಾಣದ ಉತ್ಸವ್,ಬೆಂಗಳೂರಿನ ಬಿಂದು,ಇಷಿತಾ,ದನುಷಾ ಸ್ಥಳದಳ್ಳೆ ಸಾವಿಗೀಡಾಗಿದ್ರು.ಅಪಘಾತದ ತೀವ್ರತೆ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದ್ದು ಅಜಾಗರುಕತೆಯ ಡ್ರೈವಿಂಗ್ ಮತ್ತು ಓವರ್ ಸ್ಪೀಡ್ ಅಪಘಾತಕ್ಕೆ ಕಾರಣ ಅಂತ ಕಂಡುಬರುತ್ತೆ.ಹೊಸೂರು ಎಂ ಎಲ್ ಪುತ್ರ ಕರುಣಾ ಸಾಗರ್ ಮತ್ತು ಬಿಂದು ಪ್ರೀತಿಸ್ತಾ ಇದ್ದು ಮನೆಯವರು ಒಪ್ಪದಿದ್ರೂ ಮದುವೆ ಆಗಲು ನಿರ್ಧಾರ ಮಾಡಿಕೊಂಡಿದ್ರು..ಚೈನೈನ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಿಂದು ನಿನ್ನೆ ಮನೆಯವರಿಗೆ ತಿಳಿಸದೆ ಸಾಗರ್ ಜೊತೆ ಬಂದಿದ್ಲು…ದೊಡ್ಡವರ ಸಹವಾಸ ಬೇಡಮ್ಮ ಎಂದು ಬುದ್ದಿ ಹೇಳಿದ್ದ ತಂದೆ ಚಂದ್ರಶೇಖರ್ ಇಂದು ಮಗಳ ಮೃತದೇಹ ನೋಡಿ ಕಣ್ಣೀರು ಹಾಕಿದ್ರು..
ಮತ್ತೊಂದೆಡೆ ಬೆಂಗಳೂರಲ್ಲಿ ಇಂಜಿನೀಯರ್ ಆಗಿದ್ದ ರೋಹಿತ್ ನಿನ್ನೆ ಅಪಘಾತದಲ್ಲಿ ಸ್ಥಳದಲ್ಲೆ ಮೃತಪಟ್ಟಿದ್ದರು.10 ವರ್ಷದ ಹಿಂದೆ ಅನಾರೋಗ್ಯದಿಂದ ತಂದೆ ತಾಯಿ ಕಳೆದು ಕೊಂಡಿದ್ದ ರೋಹಿತ್ ಕಷ್ಟಪಟ್ಟು ಚಿಪ್ಪಪ್ಪನ ಮನೆಯಲ್ಲಿ ಇದ್ದು ಓದಿ ಕೆಲಸ ಪಡೆದಿದ್ದ.ಅದ್ರೆ ಕ್ರೂರ ವಿಧಿಯಾಟಕ್ಕೆ ರೋಹಿತ್ ಕೂಡ ಬಿಲಿಯಾಗಿ ತಂದೆ ತಾಯಿಯ ಹಾದಿ ಹಿಡಿದಿದ್ದ.ಅಪಘಾತ ಪ್ರಕರಣ ಸಂಬಂದ ಆಡುಗೋಡಿ ಸಂಚಾರಿ ಠಾಣೆಯಲ್ಲಿ 304 a ಮತ್ತು 297 ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಒಟ್ಟಾರೆ ಹೈ ಎಂಡ್ ಕಾರು ಎನಿಸಿಕೊಂಡ ಆಡಿಯ ಯಾವುದೇ ಏರ್ ಬ್ಯಾಗ್ ಓಪನ್ ಆಗೆ ಇರ್ಲಿಲ್ಲ..ಸ್ಟೇರಿಂಗ್ ಮುರಿದು ಬಿದ್ದಿದ್ರು ಏರ್ ಬ್ಯಾಗ್ ಮಾತ್ರ ಓಪನ್ ಆಗಿಲ್ಲ..ಹಾಗಿದ್ರೆ ಈ ಹೈ ಎಂಡ್ ಕಾರುಗಳು ಎಷ್ಟು ಸೇಫ್ ಅನ್ನೋ ಡೌಟ್ ಮೂಡುತ್ತೆ.ಅತಿವೇಗದ ಚಾಲನೆ,ಅಜಾಗರುಕಥೆ ಒಂದು ಕ್ಷಣದ ಆತುರಕ್ಕೆ ಬದುಕಿ ಬಾಳಬೇಕಿದ್ದ ಏಳು ಜೀವಗಳು ಮಸಣ ಸೇರಿವೆ.