ಮೈಸೂರು:7 ಅಕ್ಟೋಬರ್ 2021
ನ@ದಿನಿ
411 ನೇ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಇಂದು ಅಧಿಕೃತ ಚಾಲನೆ ದೊರೆಯಿತು.
9 ದಿನಗಳ ಕಾಲ ನಡೆಯುವ ಸಾಂಪ್ರದಾಯಕ ದಸರೆಗೆ ಚಾಮುಂಡಿ ಬೆಟ್ಟದಲ್ಲಿ ತುಲಾ ಲಗ್ನದಲ್ಲಿ ಭ್ರಾಮಿ ಅಲಂಕಾರದಲ್ಲಿ ಕುಳಿತಿದ್ದ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆಗೈಯುವ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಮಾಜಿ ಸಚಿವ ಎಸ್.ಎಂ.ಕೃಷ್ಣ ಚಾಲನೆ ನೀಡಿದರು.
ಉದ್ಘಾಟಕರಾದ ಎಸ್.ಎಂ.ಕೃಷ್ಣ ರವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೊಮ್ಮಾಯಿರವರ ಪತ್ನಿ ಚೆನ್ನಮ್ಮ ಬಸವರಾಜ ಬೊಮ್ಮಾಯಿ, ಸಚಿವರಾದ ಎಸ್.ಟಿ.ಸೋಮಶೇಖರ್, ಮೇಯರ್ ಸುನಂದ ಪಾಲನೇತ್ರ,ಆರ್.ಅಶೋಕ್, ನಾರಾಯಣಗೌಡ, ಸಂಸದರಾದ ಪ್ರತಾಪ್ ಸಿಂಹ,ಭೈರತಿ ಬಸವರಾಜು, ಬಿಸಿ ಪಾಟೀಲ್, ಶಶಿಕಲಾಜೊಲ್ಲೆ, ಸುನೀಲ್ ಕುಮಾರ್, ಶಾಸಕರಾದ ನಾಗೇಂದ್ರ, ಜಿ.ಟಿ.ದೇವೇಗೌಡ, ಅರವಿಂದ ಬೆಲ್ಲದ್, ಎಸ್.ಎ.ರಾಮದಾಸ್ ತನ್ವೀರ್ ಸೇಠ್, ಹೆಚ್. ವಿಶ್ವನಾಥ್, ರಾಜೀವ್, ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್ ಹಾಗೂ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ,ಡಿಸಿಪಿ ಪ್ರದೀಪ್ ಗುಂಟಿ,ಗೀತಾ ಪ್ರಸನ್ನ,ಎಸ್ಪಿ ಚೇತನ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ನು ಕೊರೊನಾ ಹಿನ್ನೆಲೆ ಈ ಬಾರಿಯ ದಸರಾ ಸರಳವಾಗಿ ನಡೆಯಿತ್ತಿದ್ದು, ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿಲ್ಲ.ದಸರಾ ಉದ್ಘಾಟನಾ ಕಾರ್ಯಕ್ರಮ ವೀಕ್ಷಣೆಗೆ ವಚ್ಯುವಲ್ ವ್ಯವಸ್ಥೆ ಮಾಡಲಾಗಿದೆ.