ನಂದಿನಿ ಮೈಸೂರು
ಅಹಮದಾಬಾದ್: ಗುಜರಾತಿನ ಅಹಮದಾಬಾದ್ ನಲ್ಲಿ ನಡಿಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪೀಡ್ ರೋಲರ್ ಸ್ಕೆಟಿಂಗ್ 3000 ಮೀಟರ್ ರಿಲೇ ಟೂರ್ನಿಯಲ್ಲಿ ಕರ್ನಾಟಕದ ಮಹಿಳಾ ತಂಡ ಬೆಳ್ಳಿ ಪದಕ ಹಾಗೂ ಪುರುಷರ ತಂಡ ಕಂಚಿನ ಪದಕ ಗೆದ್ದಿದೆ.
ಮಹಿಳಾ ತಂಡದ ಸೀನಿಯರ್ ಸ್ಕೆಟಿಂಗ್ ಪಟುವಾದ ಕು.ರಿಯಾ ಎಲ್ಲಿಝಬೆತ್ ಆಚಯ್ಯ ಮೈಸೂರಿನ ವಿದ್ಯಾವರ್ಧಕ ತಾಂತ್ರಿಕ ವಿದ್ಯಾಲಯದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ.
*ಪದಕಗಳ ವಿವರ:*
3000ಮೀ ರಿಲೇ (ಮಹಿಳಾ ವಿಭಾಗ)
ಚಿನ್ನ – ತಮಿಳುನಾಡು
ಬೆಳ್ಳಿ – ಕರ್ನಾಟಕ
ಕಂಚು – ದೆಹಲಿ
ಈ ಹಿಂದೆ ದಕ್ಷಿಣ ಕೊರಿಯಾದಲ್ಲಿ ನಡೆದ ಏಶಿಯನ್ ಚಾಂಪಿಯನ್ಶಿಪ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಶ್ರೇಯ ನಮ್ಮ ವಿದ್ಯಾಥಿನಿಯದು ಎಂದು ಕಾಲೇಜಿನ ಪ್ರಾಂಶುಪಾಲರದ ಬಿ.ಸದಾಶಿವೇಗೌಡ ನೆನಪಿಸಿಕೊಂಡರು.
ಈಗಾಗಲೇ ಜೂನಿಯರ್ ಒಲಿಪಿಕ್ಸ್ ನಲ್ಲಿ ಭಾಗವಹಿಸಿರುವ ರಿಯಾ ಮುಂದಿನ ಏಶಿಯನ್ ಗೇಮ್ಸ್ ಹಾಗೂ ಬೆರ್ಲಿನ್ ಮ್ಯಾರಥಾನ್ ಮೇಲೆ ಕಣ್ಣಿಟ್ಟಿದ್ದಾರೆ, ಹಾಗೂ ಇಂಜಿನಿಯರಿಂಗ್ ನಂತರ ಭಾರತೀಯ ವಾಯುಪಡೆಗೆ ಸೇರಿ ದೇಶಕ್ಕೆ ಸೇವೆ ಸಲ್ಲಿಸಲು ತಮ್ಮ ಅಭ್ಯಾಸವನ್ನು ನಡೆಸುತ್ತಿದ್ದಾರೆ.
ಕರ್ನಾಟಕ ತಂಡದ ತರಬೇತುದಾರ, ಏಕಲವ್ಯ ಪ್ರಶಸ್ತಿ ವಿಜೇತ ಪ್ರತೀಕ್ ರಾಜ ಅವರು ಮಾತನಾಡಿ, 20ವರ್ಷದ ನಂತರ ಸ್ಕೆಟಿಂಗ್ ಆಟವು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದೆ, ಮೊದಲ ಋತುವಲ್ಲೇ ಎರಡು ತಂಡವು ಪದಕ ಗೆದ್ದಿರುವುದು ಸಂತಸದ ವಿಚಾರ ಹಾಗೂ ಮುಂದಿನ ಒಲಂಪಿಕ್ಸ್ ಕ್ರೀಡಾಕೂಟದಲ್ಲೂ ಸ್ಕೆಟಿಂಗ್ ವಿಭಾಗಕ್ಕೆ ಮಾನ್ಯತೆ ದೊರಕಿದೆ ಇದು ಭಾರತಕ್ಕೆ ಮತ್ತಷ್ಟು ಪದಕ ಗೆಲ್ಲಲು ಒಳ್ಳೆಯ ಅವಕಾಶಗಳಿವೆ ಎಂದು ತಿಳಿಸಿದರು.