ಕೋಯಲ್‌ ಫುಡ್ ಪ್ರೋಸಸ್ ಗೆ ೨೫ ನೇ ವರ್ಷದ ಸಂಭ್ರಮಾಚರಣೆ

ನಂದಿನಿ ಮೈಸೂರು

*ಕೋಯಲ್‌ ಫುಡ್ ಪ್ರೋಸಸ್ ಗೆ ೨೫ ನೇ ವರ್ಷದ ಸಂಭ್ರಮಾಚರಣೆ*

ಮೈಸೂರಿನ ಹೂಟಗಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ
ಕೋಯಲ್‌ ಫುಡ್ ಪ್ರೋಸಸ್ ಸಂಸ್ಥೆಯು ೨೫ ನೇ ವರ್ಷದ ಸಂಭ್ರಮಾಚರಣೆಯನ್ನು ಆಚರಿಸಿಕೊಂಡಿತು

ಇದರ ಮಾಲಿಕರಾದ ಗೀತಾ ರವೀಂದ್ರ ಅವರು ಮುನ್ನುಡಿಸಿಕೊಂಡು ಬರುತ್ತಿರುವ ಈ ಸಂಸ್ಥೆಯಲ್ಲಿ 100 ಕ್ಕೂ ಹೆಚ್ಚು ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಂ.ಎ.ರಾಜೇಂದ್ರ, ಎಕ್ಸ್ ಬ್ಯಾಂಕ್ ಅಫೀಸಿಯಲ್ ಅಡ್ವಕೇಟ್ ಮತ್ತು ಫೈನಾನ್ಸಿಯಲ್ ಕನ್ಸಲ್ಟೆಂಟ್ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೆ 25ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಕೇಕ್ ಕತ್ತರಿಸಿ ಸಂಸ್ಥೆಯ ಮುಖ್ಯಸ್ಥರೆಲ್ಲ ಸಂಭ್ರಮಿಸಿದರು ಹಾಗೂ ವೇದಿಕೆಯಲ್ಲಿ ಇವರ ಜೊತೆ ಡಾ.ಸತ್ಯನಾರಾಯಣ, ಮಮತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಎಂ.ಎ. ರಾಜೇಂದ್ರ ಅವರು ಮಾತನಾಡಿ ಒಬ್ಬ ಮಹಿಳೆಯಾಗಿ ಇವತ್ತಿನ ಸಮಾಜದ ಎದುರು ಗಟ್ಟಿಯಾಗಿ‌ ನಿಂತು ಬಹಳ ಕಷ್ಟಪಟ್ಟು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ತಾಯಿಗೆ ಮಗಳು ಕೊಯಲ್ ಸಾತ್ ನೀಡುತ್ತಿದ್ದಾರೆ ‌ ಎಂದು ಅವರನ್ನು ಸ್ಲಾಗಿಸಿದರು.

ಇದೇ ಸಂಧರ್ಭದಲ್ಲಿ ಸಂಸ್ಥೆಯ ಪರವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ‌ ಗಣ್ಯರನ್ನು ಗೌರವಿಸಲಾಯಿತು, ಹಾಗೇಯೇ ಗೀತಾ ರವೀಂದ್ರ, ಮಗಳು ಕೊಯಲ್ ಅವರನ್ನು ಸಹ ಸನ್ಮಾನಿಸಲಾಯಿತು

Leave a Reply

Your email address will not be published. Required fields are marked *