ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ ಮೇಲುಗೈ ಸಾಧಿಸಿದ ಬಾಲಕಿಯರು 13ನೇ ಸ್ಥಾನ ಪಡೆದ ಮೈಸೂರು

ನಂದಿನಿ ಮೈಸೂರು

ಬೆಂಗಳೂರು:- ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಫಲಿತಾಂಶ ದಾಖಲೆಯಾಗಿದ್ದು, ಒಟ್ಟಾರೆ ಶೇ. 74.67ರಷ್ಟು ಫಲಿತಾಂಶ ಬಂದಿದೆ. ಎಂದಿನಂತೆ ಬಾಲಕಿಯರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. 

ಕರ್ನಾಟಕ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಂಡಳೀಯ ಅಧ್ಯಕ್ಷ ಎಸ್. ರಾಮಚಂದ್ರನ್ ಅವರು ಫಲಿತಾಂಶಗಳನ್ನು ಬಿಡುಗಡೆ ಮಾಡಿ ವಿವರಗಳನ್ನು ನೀಡಿದರು.

ಈ ವರ್ಷ ಒಟ್ಟಾರೆ 7,02,067 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಇವರಲ್ಲಿ 5,24,209 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಒಟ್ಟಾರೆ ಶೇಕಡಾವಾರು 74.67 ರಷ್ಟು ಫಲಿತಾಂಶ ಬಂದಿದೆ ಎಂದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದ ಪ್ರಮಾಣ ಏರಿಕೆಯಾಗಿದ್ದು, ಕಳೆದ ವರ್ಷ ಶೇ. 61.88ರಷ್ಟು ಫಲಿತಾಂಶ ಬಂದಿತ್ತು ಎಂದರು.

ಕಲಾ ವಿಭಾಗದಲ್ಲಿ ಶೇ. 61.22 ವಿಜ್ಞಾನ ವಿಭಾಗದಲ್ಲಿ ಶೇ. 85.71 ವಾಣಿಜ್ಯ ವಿಭಾಗದಲ್ಲಿ ಶೇ. 75.89 ರಷ್ಟು ಫಲಿತಾಂಶ ಬಂದಿದೆ ಎಂದು ಅವರು ಹೇಳಿದರು.
ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಬಾಲಕಿಯರ ಉತ್ತೀರ್ಣದ ಪ್ರಮಾಣ ಶೇ. 80.25 ರಷ್ಟಿದ್ದರೆ, ಬಾಲಕರ ಉತ್ತೀರ್ಣದ ಪ್ರಮಾಣ ಶೇ. 69.05 ರಷ್ಟಿದೆ ಎಂದು ಅವರು ತಿಳಿಸಿದರು.

ಈ ವರ್ಷ ಕಲಾವಿಭಾಗದಲ್ಲಿ 220.35 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 1,34,876ವಿದ್ಯಾರ್ಥಿಗಳು ಉತ್ತಿರ್ಣರಾಗಿ ಶೇ. 61.22 ರಷ್ಟು ಫೆÇಲತಾಂಶ ಕಲಾವಿಭಾಗದಲ್ಲಿ ಬಂದಿದೆ.

ವಾಣಿಜ್ಯ ವಿಭಾಗದಲ್ಲಿ 2,40,146 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 1,82,246 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 75.89 ರಷ್ಟು ಫಲಿತಾಂಶ ವಾಣಿಜ್ಯ ವಿಭಾಗದಲ್ಲಿ ಬಂದಿದೆ.

ವಿಜ್ಞಾನ ವಿಭಾಗದಲ್ಲಿ 2,41,616 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಇವರಲ್ಲಿ 2,07,087 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 85.71 ಲಕ್ಷ ಬಂದಿದ್ದು, ಒಟ್ಟಾರೆ ಶೇ. 74.67 ರಷ್ಟು ಫಲಿತಾಂಶ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಂದಿದೆ ಎಂದರು.

ಈ ವರ್ಷ, 69.870 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 33,833 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಖಾಸಗಿಯಾಗಿ 24,708 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,630 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

 

Leave a Reply

Your email address will not be published. Required fields are marked *