ನಂದಿನಿ ಮೈಸೂರು
ಶ್ರೀ ವಿದ್ಯಾ ಗಣಪತಿ ಯುವಕರ ಸಂಘದಿಂದ 15 ನೇ ವರ್ಷದ ಗಣೇಶೋತ್ಸವ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೈಸೂರಿನ ಗಾಯತ್ರಿಪುರಂನ ವಿಶ್ವಕರ್ಮ ಕಾಲೋನಿ ಯಲ್ಲಿ ಗಣಪತಿ ಪ್ರತಿಷ್ಠಾಪಿಸಿದ್ದು ಪ್ರತಿನಿತ್ಯವೂ ಪುರೋಹಿತರಿಂದ ಮುಂಜಾನೆ ಹಾಗೂ ರಾತ್ರಿ ಪೂಜೆ ಮಾಡಲಾಗಿದೆ.ಇಂದು ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ದ್ರುವರಾಜ್ ರವರು ಗಣೇಶೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ಆಶಿರ್ವಾದ ಪಡೆದರು.ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.ಮಹಾಮಂಗಳಾರತಿ ನಂತರ ನೆರದಿದ್ದ ಭಕ್ತರಿಗೆ ದ್ರುವರಾಜ್ ರವರು ಪ್ರಸಾದ ವಿನಿಯೋಗ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ದ್ರುವರಾಜ್ ರವರು ಶ್ರೀ ವಿದ್ಯಾ ಗಣಪತಿ ಯುವಕರ ಸಂಘದಿಂದ 15 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ನಾನು ಕೂಡ ಭಾಗಿಯಾಗಿ ದೇವರಿಗೆ ಪೂಜೆ ಸಲ್ಲಿಸಿದ್ದೇನೆ.ಮೈಸೂರಿನಲ್ಲಿ ಅತೀ ಎತ್ತರವಾದ ದೊಡ್ಡ ಗಣಪತಿ ಎಂದು ಹೇಳಿದರೆ ತಪ್ಪಾಗೋದಿಲ್ಲ.ಯುವಕರು ಗಣಪತಿ ಪೂಜೆ ಜೊತೆಗೆ ಬಡವರಿಗೂ ಸಹಾಯ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಕಾರ್ತಿಕ್,ಶರತ್,ಚಂದನ್,ವೆಂಕಟೇಶ್,ಅಭಿ,ಮಂಜು,ಚಿನ್ನು,ಮನೋಜ್,ಮುರುಳಿ,ನವೀನ್,ಅಕ್ಷಯ್,ಬೋಪಯ್ಯ,ಮಧು,ಸಂತೋಷ್,ಸುನೀಲ್,ಯುವರಾಜ್,ವರುಣ್,ಪವನ್,ಚಿನ್ಮಯ್,ಶ್ರೀಕಾಂತ್,ತಿಲಕ್,ಮೋಹನ್,ಕಿರಣ್,ರೋಷನ್,ಲೋಹಿತ್,ಹರ್ಷ,ರವಿ ನಾಯಕ್,ಶರೂ,ಗೌತಮ್,ಕೀರ್ತಿ,ರಮೇಶ್,ಚಂದ್ರು,ನಿಕ್ಕಿ,ಮುತ್ತು,ಭರತ್,ಕುಮಾರ ಹಾಜರಿದ್ದರು.