ನಂದಿನಿ ಮೈಸೂರು
ಜನಹಿತ ವಿವಿದ್ದೋದ್ದೇಶ ಸಹಕಾರ ಸಂಘ 2023-24 ನೇ ಸಾಲಿನ 60ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಸಲಾಯಿತು.
ಮೈಸೂರಿನ ಪಡುವಾರಹಳ್ಳಿ ಶ್ರೀ ಮಹದೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿದ್ದ ಸಭೆಯನ್ನು ಸಂಘದ ಅಧ್ಯಕ್ಷರಾದ ಭೈರಪ್ಪ ಸೇರಿದಂತೆ ನಿರ್ದೇಶಕರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಸಂಘದಲ್ಲಿ 650 ಜನ ಸದಸ್ಯರಿದ್ದಾರೆ.ಸಭೆಯಲ್ಲಿ ಒಂದು ವರ್ಷದಲ್ಲಿ ಸಂಘದಲ್ಲಿ ಆದ ಕಾರ್ಯ ಚಟುವಟಿಕೆ,ಸಭೆ,ಸಮಾರಂಭ ಕಾರ್ಯಕ್ರಮ ಖರ್ಚು ವೆಚ್ಚ ಗಳ ವರದಿ ಮಂಡನೆ ಮಾಡಲಾಯಿತು.ಸದಸ್ಯರು ಕೇಳಿದ ಕೆಲವೊಂದು ಪ್ರಶ್ನೇಗಳಿಗೆ ಅಧ್ಯಕ್ಷ ಭೈರಪ್ಪರವರು ಉತ್ತರ ಕೊಟ್ಟರು.ಸದಸ್ಯರ ಆರೋಗ್ಯದ ದೃಷ್ಟಿಯಿಂದ ಮೌರ್ಯ ಆಸ್ಪತ್ರೆ ವತಿಯಿಂದ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.ಸಭೆಗೆ ಭಾಗವಹಿಸಿದ್ದ ಸದಸ್ಯರು ಶಿಬಿರದಲ್ಲಿ ಭಾಗಿಯಾಗಿ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಂತೋಷ್,ನಿರ್ದೇಶಕರುಗಳಾದ ಚಂದ್ರಶೇಖರ್. ಎನ್,ರಾಘವ ಎಂ ಗೌಡ,ಸೋಮಣ್ಣ ಎಂ,ಸೋಮು ಟಿ,ಲೋಕೇಶ್ವರ ಈ,ಕೃಷ್ಣಕುಮಾರ್ ಎಸ್,ಬಿ.ಕುಮಾರ,ಲಕ್ಷ್ಮಮ್ಮ,ಮಹಾಲಕ್ಷ್ಮಿ, ಕೆ.ಸುರೇಶ್,ಪ್ರದೀಪ ನಾಯಕ,ಮರಿಸ್ವಾಮಿ,ಯೋಗಾನಂದ ಇತರರು ಭಾಗಿಯಾಗಿದ್ದರು.