ಸಿದ್ದರಾಮಯ್ಯರವರ 75 ವರ್ಷದ ಹುಟ್ಟು ಹಬ್ಬ ಹಿನ್ನಲೆ ಬಡವರ ಕುಟುಂಬಗಳಿಗೆ, ತೃತೀಯ ಲಿಂಗಿಯರಿಗೆ ತಲಾ 10 ಕೆಜಿ ಅಕ್ಕಿ ವಿತರಣೆ

ಮೈಸೂರು: 12 ಆಗಸ್ಟ್ 2022

ನಂದಿನಿ ಮೈಸೂರು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ 75 ವರ್ಷದ ಹುಟ್ಟು ಹಬ್ಬದ ಅಂಗವಾಗಿ
ಮೈಸೂರು ಪ್ರಚಾರ ಸಮಿತಿ ವತಿಯಿಂದ ಬಡವರಿಗೆ ಅಕ್ಕಿ ವಿತರಣೆ ಮಾಡಲಾಯಿತು.

ಮೈಸೂರು ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ 75 ಕಡು ಬಡವರ ಕುಟುಂಬಗಳಿಗೆ ಹಾಗೂ ತೃತೀಯ ಲಿಂಗಿಯರಿಗೆ ತಲಾ 10 ಕೆಜಿ ಅಕ್ಕಿಯನ್ನು ವಿತರಿಸಲಾಯಿತು.ಅಕ್ಕಿ ವಿತರಣೆಗೂ ಮುನ್ನ ಸಿದ್ದರಾಮಯ್ಯ ಭಾವಚಿತ್ರಕ್ಕೆ ಮಂಗಳಮುಖಿಯರು ಆರತಿ ಬೆಳಗಿ, ನಿಂಬೆಹಣ್ಣಿನಿಂದ ದೃಷ್ಠಿ ತೆಗೆದು ಮತ್ತೊಮ್ಮೆ ಅಧಿಕಾರ ಸಿಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ
ಡಿಸಿಸಿ ಅಧ್ಯಕ್ಷರುಗಳಾದ ಆರ್ ಮೂರ್ತಿ ಡಾ ಬಿ ಜೆ ವಿಜಯ್ ಕುಮಾರ್ ಚಾಮರಾಜ ಕ್ಷೇತ್ರದ ಹರೀಶ್ ಗೌಡ, ಡಾ ಸುಜಾತ ಎಸ್ ರಾವ್, ಶಿವಣ್ಣ, ಒಂಟಿಕೊಪ್ಪಲ್ ಮಾದೇವ ಸ್ವಾಮಿ (ಅಪ್ಪು) ಬ್ಯಾಂಕ್ ಉಪಾಧ್ಯಕ್ಷರಾದ ಯೋಗೇಶ್, ಒಕ್ಕಲಿಗರ ಸಂಘದ ಗುರುರಾಜ್, ಜಗ್ಗ, ಮಾದೇಶ, ಯುವ ಕಾಂಗ್ರೆಸ್ಸಿನ ನೆವಲ್, ಸಿದ್ದಪ್ಪ, ಪ್ರಚಾರ ಸಮಿತಿಯ ಅಧ್ಯಕ್ಷರಾದ ಡಾ ಎಂಕೆ ಅಶೋಕ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *