ಜಮೀನ್ದಾರ್ ಮೈಕ್ರೊಸರ್ಜಿಕಲ್ ಐ ಸೆಂಟರ್ (ಝೆಡ್‍ಇಎಂಸಿ)-
ಮೀಸಲಾಗಿರುವ ವಿಷನ್ ಥೆರಪಿ ಕ್ಲಿನಿಕ್
ಬೆಂಗಳೂರು: ಜಮೀನ್ದಾರ್ ಮೈಕ್ರೊಸರ್ಜಿಕಲ್ ಐ ಸೆಂಟರ್ (ಝೆಡ್‍ಇಎಂಸಿ), ಬೆಂಗಳೂರು, ವಿವಿಧ ಬೈನಾಕ್ಯುಲರ್ ದೃಷ್ಟಿದೋಷಗಳ ಪತ್ತೆ ಮತ್ತು ಚಿಕಿತ್ಸೆಗಾಗಿ ಮೀಸಲಾಗಿರುವ ಬೆಂಗಳೂರಿನಲ್ಲಿರುವ ಕೆಲವೇ ಕೆಲವು ವಿಷನ್ ಥೆರಪಿ ಕ್ಲಿನಿಕ್‍ಗಳಲ್ಲಿ ಒಂದಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳನ್ನು ಹೊಂದಿರುವ ಝೆಡ್‍ಇಎಂಸಿ, ಅಂಬ್ಲಿಯೋಪಿಯಾ ಸೇರಿದಂತೆ ವಿವಿಧ ವಕ್ರ ಮತ್ತು ಬೈನಾಕ್ಯುಲರ್ ದೃಷ್ಟಿದೋಷಗಳಿಗೆ ಪರಿಹಾರ ನೀಡಲು ಸಮಗ್ರ ಮತ್ತು ಪುರಾವೆ ಆಧಾರಿತ ಚಿಕಿತ್ಸೆಗಳನ್ನು ನೀಡಲಿದೆ.
ಹೊಸ ಪರಿಕಲ್ಪನೆ ಕುರಿತು ಮಾತನಾಡಿದ ಡಾ.ಸಮೀನಾ ಎಫ್ ಜಮೀನ್ದಾರ್, ಸ್ಥಾಪಕರು, ಜಮೀನ್ದಾರ್ ಮೈಕ್ರೊಸರ್ಜಿಕಲ್ ಐ ಸೆಂಟರ್ (ಝೆಡ್‍ಇಎಂಸಿ) ಅವರು ಹೇಳಿದರು, `ತಂತ್ರಜ್ಞಾನದ ಪ್ರಗತಿಯಿಂದಾಗಿ ಇಂದಿನ ಡಿಜಿಟಲ್ ಯುಗದಲ್ಲಿ ಕಣ್ಣುಗಳ ಆಯಾಸ ಮತ್ತು ತಲೆನೋವು ಸಾಮಾನ್ಯ ಸಮಸ್ಯೆಗಳಾಗಿವೆ. ಕಣ್ಣಿನ ಸ್ನಾಯುಗಳ ಮೇಲೆ ಪರಿಣಾಮ ಬೀರುವ ಕಣ್ಣಿನ ಸಾಮಾನ್ಯ ಪರಿಸ್ಥಿತಿಗಳನ್ನು ಪತ್ತೆ ಹಚ್ಚಲು ಬೈನಾಕ್ಯುಲರ್ ದೃಷ್ಟಿ ಮೌಲ್ಯಮಾಪನ ಮಾಡುವುದು ಅತ್ಯಗತ್ಯವಾಗಿದೆ ಮತ್ತು ಅದರಿಂದ ಎರಡೂ ಕಣ್ಣುಗಳ ಸಮಾನ ದೃಷ್ಟಿಗೆ ಸರಿಯಾದ ವ್ಯಾಯಾಮಗಳನ್ನು ಕಲಿಯುವುದು ಅಗತ್ಯವಾಗಿದೆ’.
ವಿಷನ್ ಥೆರಪಿಯು ಬೈನಾಕ್ಯುಲರ್ ಏಕದೃಷ್ಟಿ ಸಾಧಿಸಲು ರೂಪಿಸಲಾಗಿರುವ ನಾನ್-ಸರ್ಜಿಕಲ್ ಮತ್ತು ಕಸ್ಟಮೈಸ್ ಮಾಡಲಾದ ಕಾರ್ಯಕ್ರಮವಾಗಿದೆ. ವಿಷನ್ ಥೆರಪಿ ಉದ್ದೇಶವೆಂದರೆ ಕನ್ನಡಕ, ಕಾಂಟಾಕ್ಟ್ಯಲೆನ್ಸ್ ಅಥವಾ ಸರ್ಜರಿಗಳಿಂದ ಸರಿಪಡಿಸಲಾಗದ ದೃಷ್ಟಿದೋಷಗಳಿಗೆ ಚಿಕಿತ್ಸೆ ನೀಡುವುದಾಗಿದೆ. ಇದು ದೃಷ್ಟಿ ಸಮಸ್ಯೆಗಳನ್ನು ನಿವಾರಿಸಲು ಮತ್ತು ದೃಷ್ಟಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ರೋಗಿಯ ಜೀವನದ ಗುಣಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ. ಮಾನವನ ಮಿದುಳು ಗಮನಾರ್ಹವಾದ ನ್ಯುರೊಪ್ಲಾಸ್ಟಿಸಿಟಿಯನ್ನು ಹೊಂದಿದೆ ಅಂದರೆ ಬಾಹ್ಯ ಪ್ರಚೋದಕಗಳಿಗೆ ಪ್ರತಿಕ್ರಿಯೆಯಾಗಿ ಅದರ ರಚನೆ ಮತ್ತು ಕಾರ್ಯವನ್ನು ಬದಲಾಯಿಸಿಕೊಳ್ಳುತ್ತದೆ. ಈ ನ್ಯುರೊಪ್ಲಾಸ್ಟಿಸಿಟಿಯು ಬಾಲ್ಯದಲ್ಲಿ ಮಾತ್ರವಲ್ಲದೆ ಪ್ರೌಢಾವಸ್ಥೆಯಲ್ಲಿಯೂ ಇರುತ್ತದೆ. ಅದರ ಪರಿಣಾಮವಾಗಿ ಕಸ್ಟಮೈಸ್ ಮಾಡಲಾಗಿರುವ ವಿಷನ್ ಥೆರಪಿ ಕಾರ್ಯಕ್ರಮಗಳು ಸುಧಾರಿತ ದೃಷ್ಟಿಕ್ಷಮತೆ ಮತ್ತು ಕಣ್ಣುಗಳ ಕಾರ್ಯಕ್ಷಮತೆಗಾಗಿ ದೃಷ್ಟಿ ಸಮಸ್ಯೆಗಳನ್ನು ಸರಿಪಡಿಸುವ ನರವ್ಯೂಹದಲ್ಲಿ ಬದಲಾವಣೆಗಳನ್ನು ತರಲು ಸಹಾಯ ಮಾಡುತ್ತದೆ.
ವಿಷನ್ ಥೆರಪಿಯು ಅಂಬ್ಲಿಯೋಪಿಯಾ (`ಸೋಮಾರಿ ಕಣ್ಣು’), ಸ್ಟ್ರಾಬಿಸ್ಮಸ್, ಬೈನಾಕ್ಯುಲರ್ ದೃಷ್ಟಿದೋಷಗಳು, ಕಣ್ಣುಗಳ ಚಲನೆಯ ಸಮಸ್ಯೆಗಳು ಮತ್ತು ಹೊಂದಾಣಿಕೆಯ (ಕೇಂದ್ರೀಕರಿಸುವ) ಸಮಸ್ಯೆಗಳೂ ಸೇರಿದಂತೆ ಎಲ್ಲ ಬಗೆಯ ದೃಷ್ಟಿ ಸಮಸ್ಯೆಗಳನ್ನು ಪರಿಹರಿಸುತ್ತದೆ. ಉದಾಹರಣೆಗೆ, ಒಂದು ಕಣ್ಣು ಹೊಂದಾಣಿಕೆ ಸಮಸ್ಯೆಯಿಂದ (ಐ ಟೀಮಿಂಗ್ ಪ್ರಾಬ್ಲೆಂ) ಸಾಮಾನ್ಯ ದೃಷ್ಟಿಯನ್ನು ಹೊಂದಲು ವಿಫಲವಾದರೆ, ವಿಷನ್ ಥೆರಪಿಯು ಐ ಟೀಮಿಂಗ್ ಅನ್ನು ಉತ್ತಮಪಡಿಸುತ್ತದೆ ಮತ್ತು ಕಣ್ಣಿನ ಸಂಭವನೀಯ ಸೋಮಾರಿತನವನ್ನು ಕಡಿಮೆ ಮಾಡುತ್ತದೆ.
ವಿಷನ್ ಥೆರಪಿಸ್ಟ್ ಅವರು ವಿಷನ್ ಥೆರಪಿ ಕಾರ್ಯಕ್ರಮವನ್ನು ಪ್ರಾರಂಭಿಸುವ ಮುನ್ನ ಕಣ್ಣುಗಳ ಸ್ಥಿತಿಯನ್ನು ಸರಿಯಾಗಿ ಪತ್ತೆ ಹಚ್ಚಲು ವಿಶೇಷ ಪರೀಕ್ಷೆಗಳೂ ಸೇರಿದಂತೆ ಹಲವಾರು ತಪಾಸಣೆಗಳನ್ನು ಮಾಡುತ್ತಾರೆ.
ವಿಷನ್ ಥೆರಪಿಯನ್ನು ವ್ಯಕ್ತಿಗಳ ಅಗತ್ಯಗಳನ್ನು ಪೂರೈಸಲು ಕಸ್ಟಮೈಸ್ ಮಾಡಲಾಗಿದೆ. ವಿಷನ್ ಥೆರಪಿಯು ಎಲ್ಲಾ ವಯಸ್ಸಿನವರಿಗೂ ಪ್ರಯೋಜನಕಾರಿಯಾಗಿದೆ. ರೋಗಿಯ ಅಗತ್ಯಕ್ಕೆ ಅನುಸಾರವಾಗಿ, ವಿಷನ್ ಥೆರಪಿಯ ಅವಧಿಯು ಆರು ವಾರಗಳಿಂದ ಒಂದು ವರ್ಷದವರೆಗೆ ಇರಬಹುದು. ಮಕ್ಕಳ ನೇತ್ರತಜ್ಞರು ಅಂದಾಜಿಸಿರುವಂತೆ, ಬಹಳಷ್ಟು ಸಮಸ್ಯೆಗಳು ಪಾಕ್ಷಿಕ ಸೆಷನ್‍ಗಳ ಮೂಲಕ ಎರಡರಿಂದ ಮೂರು ತಿಂಗಳಲ್ಲಿ ಪರಿಹಾರವಾಗುತ್ತವೆ.