ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಚಂದ್ರಯಾನ 3 ಅನಾವರಣ

ನಂದಿನಿ ಮೈಸೂರು

ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಚಂದ್ರಯಾನ 3 ಅನಾವರಣ

ಬಾಹ್ಯಾಕಾಶ ಲೋಕದಲ್ಲಿ ಮೈಲುಗಲ್ಲು ದಾಖಲಿಸಿರುವ ‘ಚಂದ್ರಯಾನ 3 ಈ ಬಾರಿಯ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಎಲ್ಲರ ಕಣ್ಮನ ಸೆಳೆಯುತ್ತಿದೆ.

ಪ್ರತಿ ವರ್ಷದಂತೆ ನಗರದ ಕುಪ್ಪಣ್ಣ ಉದ್ಯಾನದಲ್ಲಿ ಅ.15ರಿಂದ 24ರ ವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಚಂದ್ರಯಾನ-3
ಇಸ್ರೋದ ಈ ಸಾಧನೆಯನ್ನು ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಹೂವು ಗಳಲ್ಲಿ ಕಟ್ಟಿಕೊಡಲಾಗುತ್ತಿದೆ. ಕುಪ್ಪಣ್ಣ ಉದ್ಯಾನದ ಗಾಜಿನ ಮನೆಯಲ್ಲಿ 20 ಆಡಿ ಉದ್ದದ ರಾಕೆಟ್‌ ನಿರ್ಮಿಸಲಾಗಿದೆ.

ಫಲಪುಷ್ಪ ಪ್ರದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ

ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಈ ಸಲ ಕ್ರಿಕೆಟ್ ಅನಾವರಗೊಂಡಿದೆ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲೂ ಕ್ರಿಕೇಟ್ ಪ್ರೋತ್ಸಾಹ ನೀಡುವಂತಹ ಉಪಕ್ರಮ ಕೈಗೊಳ್ಳಲಾಗಿದೆ. ಅಂತೆಯೆ, ದಸರಾ ಫಲಪುಷ್ಪ ಪ್ರದರ್ಶನದಲ್ಲಿ ವಿಶ್ವಕಪ್ ಕ್ರಿಕೆಟ್‌ನ ಪರಿಮಳ ಚೆಲ್ಲುತ್ತಿದೆ.

ಇಲಾಖೆಗಳು ಹಾಗೂ ಕೃಷಿಗೆ ಸಂಬಂಧಿಸಿದ ಅಂದಾಜು 40 ಮಳಿಗೆಗಳಿದ್ದು ಸರ್ಕಾರದ ವಿವಿಧ ಸೌಲಭ್ಯದ ಕುರಿತು ರೈತರಿಗೆ ಮಾಹಿತಿ ದೊರೆಯಲಿದೆ, ಸಂಜೆ ವಿವಿಧ ಮನರಂಜನಾತ್ಮಕ ಕಾರ್ಯಕ್ರಮ ನಡೆಯುತ್ತಿದೆ.ಅದಲ್ಲದೇ
ಮಕ್ಕಳನ್ನು ಸೆಳೆಯುವ ಸಲುವಾಗಿ ವಿವಿಧ ಪ್ರಾಣಿ, ಪಕ್ಷಿ, ಗೊಂಬೆಗಳನ್ನು ಹೂವುಗಳಿಂದ
ನಿರ್ಮಿಸಲಾಗಿದೆ. ಇಡೀ ಕುಪ್ಪಣ್ಣ ಉದ್ಯಾನವನ್ನು ಹೂವುಗಳಿಂದ ಅಲಂಕರಿಸ ಲಾಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ 50 ಸಾವಿರಕ್ಕೂ ಹೆಚ್ಚು ಹೂವಿನ ಗಿಡಗಳನ್ನು ಬಳಕೆ ಮಾಡಲಾಗಿದೆ.

ಸೆ.15ರಂದು ರಾಜ್ಯಾದ್ಯಂತ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಯಶಸ್ವಿಯಾದ ಬಳಿಕ ದಸರಾದಲ್ಲೂ ಅದು ಮುಂದುವರಿಯಲಿದ್ದು, ಸಂವಿಧಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಫಲಪುಷ್ಟ ಪ್ರದರ್ಶನವನ್ನು ವೇದಿಕೆಯಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಚಂದ್ರಯಾನ-3, ಪಂಚ ಗ್ಯಾರಂಟಿ ಯೋಜನೆಗಳ ಪ್ರತಿಕೃತಿಗಳು,ವಿಶ್ವಕಪ್ ಕ್ರಿಕೆಟ್,
ಕೆಂಪು, ಬಿಳಿ ಗುಲಾಬಿ, ಸೇವಂತಿಗೆ ಹೂವುಗಳಿಂದ ಅಲಂಕಾರ ಮಾಡಲಾಗಿದೆ.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಪಂಚ ಗ್ಯಾರಂಟಿ’ ಯೋಜನೆಗಳಿಗೂ ಹೂವಿನ ರೂಪ ನೀಡುವ ಮೂಲಕ ಜನ ರನ್ನು ಆಕರ್ಷಿಸಲಾಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆ ಯರಿಗೆ ಉಚಿತ ಪ್ರಯಾಣ ಕಲ್ಪಿಸಿಕೊಡುವ ‘ಶಕ್ತಿ’, ಪ್ರತಿ ಮನೆಗೆ ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡುವ ‘ಗೃಹಜ್ಯೋತಿ’, ಮನೆ ಯಜಮಾನಿಗೆ ಮಾಸಿಕ 2000 ರೂ. ನೀಡುವ ‘ಗೃಹಲಕ್ಷ್ಮಿ’, ಬಡವರಿಗೆ ಮಾಸಿಕ ತಲಾ 10 ಕೆಜಿ ಅಕ್ಕಿ ನೀಡುವ ‘ಅನ್ನಭಾಗ್ಯ’, ಯುವಜನರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ’ ಹೂವಿನಲ್ಲಿ ಚಿಗುರಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಂಜುನಾಥ ತಿಳಿಸಿದ್ದಾರೆ.

ಅರ್ಧ ಲಕ್ಷ ಪುಷ್ಪದಲ್ಲಿ ಚಾಮುಂಡೇಶ್ವರಿ ಗೋಪುರ

ನಾಡ ಅಧಿದೇವತೆ ಚಾಮುಂಡೇಶ್ವರಿ ಚಾಮುಂಡಿಬೆಟ್ಟದಲ್ಲಿ ಮಾತ್ರವಲ್ಲ. ಈ ಬಾರಿ ದಸರಾ ಪ್ರಯುಕ್ತ ನಗರದ ಹೃದಯ ಭಾಗದಲ್ಲಿರುವ ಉದ್ಯಾನದಲ್ಲಿಯೂ ನೆಲೆಸಿದ್ದಾಳೆ.

ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿಯೊಂದಿಗೆ ದೇವಸ್ಥಾನವನ್ನೇ ನಿರ್ಮಿಸಲಾಗಿದೆ. ಜತೆಗೆ ಬೆಟ್ಟದ ಮಧ್ಯೆ ಇರುವ ನಂದಿಯನ್ನೂ ಸ್ಥಾಪಿಸಲಾಗಿದೆ.
ತೋಟಗಾರಿಕೆ ಇಲಾಖೆಯು ಖಾಸಗಿ ಪ್ರಾಯೋಜಕರಾದ ಉಲ್ಲಾಸ್ ಅಗರಬತ್ತಿಸ್ ಕಡೆಯಿಂದ ಈ ಚಾಮುಂಡೇಶ್ವರಿ ದೇವಾಲಯದ ಪ್ರತಿರೂಪವನ್ನು 50 ಸಾವಿರಕ್ಕೂ ಹೆಚ್ಚು ಹೂಗಳಿಂದ ನಿರ್ಮಿಸಿದ್ದು, ಗೋಪುರದ ಮುಂಭಾಗದ ಚಾಮುಂಡೇಶ್ವರಿಯ ಪ್ರತಿಮೆಯೊಂದಿಗೆ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಜತೆಗೆ ಭಕ್ತಿಯ ಸಂಕೇಯವಾಗಿ ಊದುಬತ್ತಿಯನ್ನು ಸಹ ಹಚ್ಚಲಾಗಿದೆ. ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಬರುತ್ತಿದ್ದ ಮಹಿಳೆಯರು ಭಕ್ತಿಯಿಂದ ದೇವಿಯ ಪ್ರತಿಮೆ ಕೈಮುಗಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದು, ಸಾಮಾನ್ಯವಾಗಿತ್ತು.

ಜೆಕೆ ಟೈರ್ಸ್‌ನಿಂದ ಹೆರಿಟೇಜ್ ಕಾರು, ಮಹಾರಾಜರ ಸಿಂಹಾಸನ, ಅಮೃತ್ ನೋನಿಯಿಂದ ವರ್ಲ್ಡ್ ಕಪ್ ಥೀಮ್, ಲೆವಿಸ್ಟಾ ವತಿಯಿಂದ ಬೃಹತ್ ಕಾಫಿ ಮಗ್, ಸೆಲ್ಫಿ ಪಾಯಿಂಟ್ ಮೊದಲಾದವು ವಿಶೇಷ ಆಕರ್ಷಣೆಯಾಗಿವೆ. ಖಾಸಗಿ ವಾಹಿನಿಯಿಂದ ಸುವರ್ಣ ಕರ್ನಾಟಕದ ಪರಿಕಲ್ಪನೆ ನಿರ್ಮಿಸಲಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸುವೇದಾ.

ಮೂರು ಪ್ರವೇಶ ದ್ವಾರ:

‘‘ಫಲಪುಷ್ಪ ಪ್ರದರ್ಶನ್ಕಕೆ ಮೂರು ಕಡೆ ಪ್ರವೇಶ ದ್ವಾರ ನಿರ್ಮಿಸಲಾಗಿದ್ದು, ಮೂರು ಕಡೆಯೂ ಟಿಕೆಟ್ ಕೌಂಟರ್‌ಗಳನ್ನು ತೆರೆಯುವ ಮೂಲಕ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಾಗಿದೆ.

ಲಕ್ಷಾಂತರ ಹೂಗಳಿಂದ ಅರಳಿರುವ ದಸರಾ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚಾಲನೆ ನೀಡಿದರು. ಗಾಜಿನ ಅರಮನೆಯಲ್ಲಿ ನಿರ್ಮಾಣಗೊಂಡಿದ್ದ ಚಂದ್ರಯಾನ-3 ಪುಷ್ಪ ಕಲಾಕೃತಿಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಹೊರ ಆವರಣದಲ್ಲಿ ಸೈಕಲ್ ಬ್ರ್ಯಾಂಡ್ ಅಗರಬತ್ತೀಸ್ ವತಿಯಿಂದ ನಿರ್ಮಿಸಲಾಗಿದ್ದ ಅಗರಬತ್ತಿಯನ್ನು ಸಿಎಂ ಹಚ್ಚಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಕೆ.ಹರೀಶ್ ಗೌಡ, ಅನಿಲ್ ಚಿಕ್ಕಮಾದು, ತೋಟಗಾರಿಕೆ ಸಂಘದ ಶಶಿಕಲಾ ನಾಗರಾಜು, ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಅಂಗಡಿ, ಹಿರಿಯ ಸಹಾಯಕ ನಿರ್ದೇಶಕಿ ಸುವೇದಾ, ಸಹಾಯಕ ನಿರ್ದೇಶಕ ನವೀನ್ ಇದ್ದರು.

Leave a Reply

Your email address will not be published. Required fields are marked *