22 ಸೆಪ್ಟೆಂಬರ್ 2021
ಸ್ವಾತಂತ್ರ್ಯದ ವಜ್ರಮಹೋತ್ಸವ ವರ್ಷಕ್ಕೆ ವಿಶೇಷವಾಗಿ ವಿಶ್ವದ ಮೊಟ್ಟಮೊದಲ ಸಂವಾದಾತ್ಮಕ ‘ಯೋಗಿಫೈ’ ಯೋಗ ಮ್ಯಾಟ್‍ಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.
ಎಸ್‍ವಿವೈಎಎಸ್‍ಎ ವಿವಿ ಕುಲಪತಿಡಾ. ಎಚ್. ಆರ್. ನಾಗೇಂದ್ರ, ಇನ್ಫೋಸಿಸ್ ಕಾರ್ಯಕಾರಿಉಪಾಧ್ಯಕ್ಷ ದೀಪಕ್ ಪದಕಿಅವರ ಉಪಸ್ಥಿತಿಯಲ್ಲಿ ಈ ಮೇಕ್‍ಇನ್‍ಇಂಡಿಯಾಉತ್ಪನ್ನ ಬಿಡುಗಡೆ ಘೋಷಿಸಲಾಯಿತು.
ಕೇವಲ ಭಾರತೀಯರಿಗಾಗಿ ವಿಶೇಷ ಕೊಡುಗೆಗಳು ಮತ್ತು ರಿವಾರ್ಡ್‍ಗಳೊಂದಿಗೆ ತನ್ನಕಾಯ್ದಿರಿಸುವಿಕೆಯನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ. ಯೋಗಿಫೈ, ಪ್ರಪಂಚದಾದ್ಯಂತದ ಪ್ರತಿಯೊಬ್ಬ ವ್ಯಕ್ತಿಯದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನುಉತ್ತೇಜಿಸುವದೃಷ್ಟಿಯಿಂದಆರೋಗ್ಯರಕ್ಷಣೆ ಮತ್ತು ಫಿಟ್ನೆಸ್‍ತಂತ್ರಜ್ಞಾನದ ಸ್ಟಾರ್ಟ್‍ಅಪ್ ವೆಲ್ನೆಸಿಸ್‍ನ ಪ್ರಮುಖಉತ್ಪನ್ನವಾಗಿದೆಎಂದು ಸಂಸ್ಥೆ ಸಂಸ್ಥಾಪಕ ಮತ್ತು ಸಿಇಒ ಮುರಳೀಧರ್ ಸೋಮಿಸೆಟ್ಟಿ ಹೇಳಿದ್ದಾರೆ.
ಇಂಟರ್ನೆಟ್‍ಆಫ್‍ಥಿಂಗ್ಸ್ (ಐಒಟಿ) ಮತ್ತುಆರ್ಟಿಫಿಷಿಯಲ್‍ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನಗಳನ್ನು ಬಳಸಿಕೊಂಡು ಉತ್ಪಾದಿಸಿದ ಉತ್ಪನ್ನಇದಾಗಿದ್ದು, ಮಲ್ಟಿ-ಪೇಟೆಂಟ್ ಸೆನ್ಸರ್ ಮತ್ತುಟ್ರ್ಯಾಕಿಂಗ್ ತಂತ್ರಜ್ಞಾನಗಳನ್ನು ಹೊಂದಿದ್ದು, ವ್ಯಕ್ತಿಯ ನಮ್ಯತೆ, ಸಾಮಥ್ರ್ಯ, ಸಮತೋಲನ ಇತ್ಯಾದಿಗಳನ್ನು ಅಳೆಯುವುದಲ್ಲದೆ ದೈನಂದಿನ ಅಭ್ಯಾಸವನ್ನುರೆಕಾರ್ಡ್ ಮಾಡುತ್ತದೆಎಂದು ಪ್ರಕಟಣೆ ಹೇಳಿದೆ.