ನಂದಿನಿ ಮನುಪ್ರಸಾದ್ ನಾಯಕ್
12ನೇ ಯೋಗ ದಿನಾಚರಣೆಯನ್ನು ಮೈಸೂರಿನ ಹೂಟಗಳ್ಳಿಯ. ಓವೆಲ್ ಪಾರ್ಕ್ ನಲ್ಲಿ( ಮೂಡ್ ಪಾರ್ಕ್) ನಲ್ಲಿ ಆಚರಿಸಲಾಯಿತು.

ಸುಮಾರು 2,000 ಜನ ಯೋಗಾಸನ ಮತ್ತು ಧ್ಯಾನವನ್ನು ಮಾಡಿ ಅತ್ಯಂತ ಸಂತಸ ಪಟ್ಟರು ಹಾಗೆ ಈ ಕಾರ್ಯಕ್ರಮಕ್ಕೆ ಅರ್ಥಪೂರ್ಣವಾಗಿ ತಪಸಣಾ ಶಿಬಿರವನ್ನು ಮೈಸೂರಿನ ಹೆಸರಾಂತ ನಾರಾಯಣ ಹೃದಯಾಲಯ, ಕ್ಲಿಯರ್ ಮಿಡಿ ರೇಡಿಯಂಟ್, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಮತ್ತು ಸಿಪ್ಲ ಆಯುಷ್. ಇವರೊಂದಿಗೆ ಸಂಯುಕ್ತ ಆಶ್ರಯದಲ್ಲಿ ಮೆಗಾ ಹೆಲ್ತ್ ಕ್ಯಾಂಪನ್ನು ಏರ್ಪಡಿಸಲಾಗಿತ್ತು. ಈ ತಪಸ್ ಶಿಬಿರದಲ್ಲಿ ಸುಮಾರು 600 ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಡಾ. ಪ್ರೊ. ಶ್ರೀನಿವಾಸ್ ರವರು ಕಾರ್ಯದರ್ಶಿಗಳು ಯೋಗ ನರಸಿಂಹ ಸ್ವಾಮಿ ದೇವಸ್ಥಾನ. ಇವರ ಅಮೃತ ಹಸ್ತದಿಂದ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಕೊಟ್ಟರು. ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಬಗ್ಗೆ ನೆರೆದಿದ್ದ ಎಲ್ಲರಿಗೂ ತಿಳಿಸಿಕೊಟ್ಟರು. ಹಾಗೆ ಈ ಕಾರ್ಯಕ್ರಮದಲ್ಲಿ ಇಂಡಸ್ಟ್ರಿಯಲ್ ಅಂಡ್ ಕಾಮರ್ಸ್ ಅಧ್ಯಕ್ಷರಾದಂತಹ ಲಿಂಗರಾಜ್ ರವರು, ಉಪಸ್ಥಿತರಿದ್ದರು.
ನಂತರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅಲೆಯನ್ಸ್ ಕ್ಲಬ್ ನ ರಾಜ್ಯಪಾಲರಾದಂತಹ ಮಹಾಬಲೇಶ್ವರ ಭೈರಿಯವರು, ಹಾಗೂ ಅಂತರರಾಷ್ಟ್ರೀಯ ಅಲೆಯನ್ಸ್ ಕ್ಲಬ್ ನ ಕಾರ್ಯದರ್ಶಿಗಳಾದಂತಹ ಅಲೈ ಡಾ. ನಾಗರಾಜ್ ಅವರು. ಅಂತರಾಷ್ಟ್ರೀಯ ಕಮಿಟಿ ಚೇರ್ಮನಾದಂತಹ ಅಲೈ ಸಿರಿಬಾಲು ರವರು ನರವೇರಿಸಿ ಕೊಟ್ಟರು ಇವರೊಂದಿಗೆ , ಸಿರಿ ವಿದ್ಯಾಲಯ ಶಾಲೆಯ ಅಧ್ಯಕ್ಷರಾದಂತಹ ಶೋಭಾ ಸಿರಿ ಬಾಲು( ಅಲೈ ಅಂತರಾಷ್ಟ್ರೀಯ ಸಂಸ್ಥೆಯ ರಾಯಭಾರಿ ),ರವರು, ಸುದರ್ಶನ ವಿದ್ಯಾ ಸಂಸ್ಥೆಯ ಪ್ರಾಶಂಪಲರಾದಂತಹ ಶ್ರೀಯುತ ಸುರೇಶ್ ರವರು. ರೋಟರಿ ಮಿಡ್ ಟೌನ್ ಶಾಲೆಯ ಪ್ರಾಶಂಪಲರಾದಂತಹ, ಅನಂತರಾಮ್. ವಿದ್ಯಾ ಕಾನ್ವೆಂಟ್ ಶಾಲೆಯ ಶ್ರೀದೇವಿಯವರು. ಅಲೈಯನ್ಸ್ ಪ್ರಾಂತೀಯ ಅಧ್ಯಕ್ಷರಾದಂತಹ ಮಹದೇವ್ ಡಿ. ಹಾಗೂ ಜಿಲ್ಲಾಧ್ಯಕ್ಷರಾದ ಡಾ.ರಾಜು. ಮೈಸೂರು ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದಂತಹ ಯೋಗ ಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ. ಹಿರಿಯ ಯೋಗ ಪುಟಗಳಾದಂತಹ ಮಣಿಕಂಠನ ಹಾಗೂ ಲಂಕೇಶ್ ರವರಿಗೆ. ಅಂತರಾಷ್ಟ್ರೀಯ ಯೋಗ ದಿನಾಚರಣೆ ಯಂದು ಗೌರವಿಸಿ ಸನ್ಮಾನಿಸಲಾಯಿತು. ಎಲ್ಲಾ ಸಂಸ್ಥೆಯ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಸಹ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೋತ್ಸಾಹ ನೀಡಿದರು.