ಸಿದ್ದರಾಮಯ್ಯ ರವರ ಅಭಿವೃದ್ಧಿ ಪರ್ವ: ನ ಭೂತೋ ನ ಭವಿಷ್ಯತಿ-ನವೀನ್ ಕುಮಾರ್

 

ಮೈಸೂರು:10 ಆಗಸ್ಟ್ 2021

ನ@ದಿನಿ

ಸಿದ್ದರಾಮಯ್ಯ ರವರ ಅಭಿವೃದ್ಧಿ ಪರ್ವ: ನ ಭೂತೋ ನ ಭವಿಷ್ಯತಿ-ನವೀನ್ ಕುಮಾರ್.

        ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ 2013ರಿಂದ 2018ರ ವರೆಗೂ ಸರ್ಕಾರದಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನು ಮೈಸೂರಿನ ಪತ್ರಕರ್ತರ ಭವನದಲ್ಲಿ ಇಂದು ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಎನ್.ಎಂ. ನವೀನ್ ಕುಮಾರ್ ರವರು ಬಿಡುಗಡೆ ಮಾಡಿದರು.

         ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದಲ್ಲಿ ನಡೆದಂತಹ ಅಭಿವೃದ್ಧಿ ಪರ್ವ ನಭೂತೋ ನಭವಿಷ್ಯತಿ ಎಂದು ವರ್ಣಿಸಿದರು. ಬಿಜೆಪಿ ಸರ್ಕಾರದವರು ಈ ಹಿಂದೆಯೂ ಕೂಡ ಎಂದಿಗೂ ಮಾಡಿಲ್ಲ ಇನ್ಮುಂದೆ ಕೂಡ ಅವರು ಮಾಡಲಾರರು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಬಂದಾಗೆಲ್ಲಾ ರೆಸಾರ್ಟ್ ರಾಜಕೀಯ ಮಂತ್ರಿಗಿರಿಗಾಗಿ ಲಾಬಿ ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ಇದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಹೇಳುತ್ತಾ, ಸನ್ಮಾನ್ಯ ಸಿದ್ದರಾಮಯ್ಯನವರು 5 ವರ್ಷ ನಿರಂತರವಾಗಿ ತಮ್ಮ ಸಂಪೂರ್ಣ ಅಧಿಕಾರವಧಿಯನ್ನು ಕರ್ನಾಟಕದ ಅಭಿವೃದ್ಧಿಗಾಗಿ ಮತ್ತು ಬಡಬಗ್ಗರ ಸೇವೆಗಾಗಿ ಮೀಸಲಿಟ್ಟಿದ್ದರು ಎಂದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ನ ಕಾರ್ಯದರ್ಶಿಗಳಾದ ರೇಖಾ ಶ್ರೀನಿವಾಸ್ ರವರು, ಕಾಂಗ್ರೆಸ್ ಮುಖಂಡರಾದ ಎಂ ರಾಜೇಶ್ ರವರು, ದೇವರಾಜ್ ಅರಸು ಬ್ಲಾಕ್ನ ಅಧ್ಯಕ್ಷರಾದ ಪೈಲ್ವಾನ್ ಸುನಿಲ್, ಬಿಂದು ಗೌಡ, ತಗಡೂರು ಬ್ಲಾಕ್ನ ಯುವ ಕಾಂಗ್ರೆಸ್ ಅಧ್ಯಕ್ಷರಾದ ಗಿರೀಶ್, ಅಶೋಕಪುರಂನ ಪೈಲ್ವಾನ್ ಸುರೇಶ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *