ನಂದಿನಿ ಮೈಸೂರು
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಸೀತಾ ವಿಲಾಸ ರಸ್ತೆಯಲ್ಲಿ ರುವ
ಸೀತಾರಾಮ ಸ್ವಾಮಿ ದೇವಸ್ಥಾನದ ಆವರಣದಲ್ಲಿ
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಪ್ರ ಸಮುದಾಯದ ಹಲವು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ವಿಪ್ರ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು
ವಿಪ್ರ ಮಹಿಳಾ ರತ್ನ ಪ್ರಶಸ್ತಿಗೆ ಭಾಜನರಾದ
ಪುಷ್ಪಾ ಅಯ್ಯಂಗಾರ್ (ಸಾಹಿತ್ಯ ಕ್ಷೇತ್ರ )
ವನಜಾ ಪಂಡಿತ್ (ಶಿಕ್ಷಣ ಕ್ಷೇತ್ರ)
ಜಯಶ್ರೀ (ಕಾನೂನು ಕ್ಷೇತ್ರ )
ಡಾ॥ ಲಕ್ಷ್ಮಿದೇವಿ (ವೈದ್ಯಕೀಯಹಾಗೂ ಸಾಮಾಜಿಕ ಕ್ಷೇತ್ರ )
ಡಾ॥ಸುಜಾತಾ ರಾವ್ (ವೈದ್ಯಕೀಯ ಕ್ಷೇತ್ರ )
ಎಸ್. ಗಾಯತ್ರಿ (ಸಹಕಾರಿ ಕ್ಷೇತ್ರ )
ಸೌಭಾಗ್ಯ ಮೂರ್ತಿ (ಸಾಮಾಜಿಕ ಕ್ಷೇತ್ರ )
ಪ್ರತಿಭಾ ಗುರುರಾಜ್ (ಸಂಗೀತ ಕ್ಷೇತ್ರ )
ಇವರಿಗೆ ಸನ್ಮಾನಿಸಿ ಪ್ರಶಸ್ತಿ ಫಲಕ ನೀಡಲಾಯಿತು ನಂತರ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್
ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುವ ಮೂಲಕ ಉತ್ತಮ ಸಾಧನೆ ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ
ಒಂದು ಕಾಲದಲ್ಲಿ ಮಹಿಳೆಯೆಂದರೆ ನಾಲ್ಕು ಗೋಡೆಗಳಿಗೆ ಸೀಮಿತವೆನಿಸಿದ್ದರು. ಅಂತಹ ಪರಿಸ್ಥಿತಿಯಲ್ಲೂ ಕೆಲವು ಮಹಿಳೆಯರು ಎಲ್ಲ ಸಂಕೋಲೆಗಳನ್ನು ಮುರಿದು ಶಿಕ್ಷಣ ಪಡೆದು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅಂತಹವರಲ್ಲಿ ವೃಂದ ಅವರು ಒಬ್ಬರಾಗಿ ಬೇರೆಯವರಿಗೆ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ನಂತರ ನಗರಪಾಲಿಕೆ ಸದಸ್ಯ ಮಾವಿ ರಾಂಪ್ರಸಾದ್ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಸಂಧರ್ಭದಲ್ಲೂ ಸಹ ಮಹಿಳೆಯರು ಜಾನ್ಸಿ ರಾಣಿ ಲಕ್ಷ್ಮಿ ಬಾಯಿ ಕಿತ್ತರೂ ರಾಣಿ ಚೆನ್ನಮ್ಮ ಓನಕೆ ಓಬ್ಬವ್ವ ತಮ್ಮಪ್ರಾಣ ತ್ಯಾಗ ದೇಶಕ್ಕಾಗಿ ಸಮರ್ಪಿಸಿದ್ದಾರೆ, ದೇಶದಲ್ಲಿ ಹೆಣ್ಣಿಗೂ ಸಮಾನತೆ ಸಿಗಬೇಕು ಇದರಿಂದ ಎಲ್ಲಾ ಕ್ಷೇತ್ರದಲ್ಲೂ ಮುಖ್ಯವಾಹಿನಿಗೆ ಮಹಿಳೆಯರು ಬರಬಹುದು.
ನಂತರ ಜಿಎಸ್.ಎಸ್ ಎಸ್ ಶಿಕ್ಷಣ ಸಂಸ್ಥೆಯ ವನಜಾ ಪಂಡಿತ್ ರವರು ಸನ್ಮಾನ ಸ್ವೀಕರಿಸಿ ಮಾತನಾಡಿ ಅಡುಗೆ ಮನೆಗೆ ಮಾತ್ರ ಹೆಣ್ಣುಮಕ್ಕಳು ಸೀಮಿತರಾಗಿರಬಾರದು, ಈ ದೇಶದ ಪ್ರಧಾನಮಂತ್ರಿಯಿಂದ ಓಲಂಪಿಕ್ಸ್ ಪ್ರಶಸ್ತಿ ಪಡೆಯುವವರೆಗೂ ವಿಮಾನ ಚಾಲಿಸುವ ವರೆಗೂ ಮಹಿಳೆಯರ ಪಾತ್ರ ಮಹತ್ವವಾದುದು ಹೆಣ್ಣುಮಕ್ಕಳು ಶಿಕ್ಷಣ ಪಡೆದು ಸ್ವಾವಲಂಭಿಯಾಗಿ ತನ್ನ ಕಾಲಮೇಲೆ ತಾನೂ ನಿಂತು ದುಡಿಯುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೆಂಗಿಪುರ ಮಠದ ಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವವೇದಿಕೆ ಅಧ್ಯಕ್ಷ ಎಚ್ ಎನ್ ಶ್ರೀಧರ್ ಮೂರ್ತಿ ,ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ಹಾಗೂ ವಿನಯ್ ಕಣಗಾಲ್,ಪ್ರಶಾಂತ್ ,ಕೆ ಎಂ ನಿಶಾಂತ್,ರಂಗನಾಥ್, ಸುಚೇಂದ್ರ,ಪ್ರಶಾಂತ್ ,ನಾಗಶ್ರೀ ಸಚಿಂದ್ರ ,ಹಾಗೂ ಇನ್ನಿತರರು ಹಾಜರಿದ್ದರು.